ಅಹಮದಾಬಾದ್ (ಗುಜರಾತ್): ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ 35 ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಐಪಿಎಲ್‌ನಲ್ಲಿ ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಇದಾಗಿದೆ.
-
Aayen hai dost ghar pehli baar 𝐌𝐈-lne 🤩🙌
— Gujarat Titans (@gujarat_titans) April 25, 2023 " class="align-text-top noRightClick twitterSection" data="
Muqabla aur mehman nawazi, dono khulke karenge 🔥@hardikpandya7 @ImRo45 | #GTvMI #AavaDe #TATAIPL #IPL2023 pic.twitter.com/FsxBzFKQnT
">Aayen hai dost ghar pehli baar 𝐌𝐈-lne 🤩🙌
— Gujarat Titans (@gujarat_titans) April 25, 2023
Muqabla aur mehman nawazi, dono khulke karenge 🔥@hardikpandya7 @ImRo45 | #GTvMI #AavaDe #TATAIPL #IPL2023 pic.twitter.com/FsxBzFKQnTAayen hai dost ghar pehli baar 𝐌𝐈-lne 🤩🙌
— Gujarat Titans (@gujarat_titans) April 25, 2023
Muqabla aur mehman nawazi, dono khulke karenge 🔥@hardikpandya7 @ImRo45 | #GTvMI #AavaDe #TATAIPL #IPL2023 pic.twitter.com/FsxBzFKQnT
ಇದಕ್ಕೂ ಮುನ್ನ 2022ರಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೊನೆಯ ಓವರ್‌ನಲ್ಲಿ ರೋಚಕ ಜಯ ಸಾಧಿಸಿತ್ತು. ಈ ಬಾರಿ ಗುಜರಾತ್ ಟೈಟಾನ್ಸ್ ತಂಡ ಕಳೆದ ವರ್ಷ ಪಡೆದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಲಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಫೈಟ್ ನೀಡಲು ಚಿಂತಿಸುತ್ತಿದೆ. ಐಪಿಎಲ್‌ನಲ್ಲಿ ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ 4 ಪಂದ್ಯಗಳನ್ನು ಗೆದ್ದು ಒಟ್ಟು 8 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡವು ಕೇವಲ 3 ಪಂದ್ಯಗಳನ್ನು ಗೆದ್ದಿದ್ದು, 6 ಅಂಕಗಳಿಂದ ಏಳನೇ ಸ್ಥಾನದಲ್ಲಿದೆ.
-
आजचा 🎯: Getting back to winning ways 😤👊#OneFamily #GTvMI #MumbaiMeriJaan #MumbaiIndians #IPL2023 #TATAIPL pic.twitter.com/CsxcjTvVPQ
— Mumbai Indians (@mipaltan) April 25, 2023 " class="align-text-top noRightClick twitterSection" data="
">आजचा 🎯: Getting back to winning ways 😤👊#OneFamily #GTvMI #MumbaiMeriJaan #MumbaiIndians #IPL2023 #TATAIPL pic.twitter.com/CsxcjTvVPQ
— Mumbai Indians (@mipaltan) April 25, 2023आजचा 🎯: Getting back to winning ways 😤👊#OneFamily #GTvMI #MumbaiMeriJaan #MumbaiIndians #IPL2023 #TATAIPL pic.twitter.com/CsxcjTvVPQ
— Mumbai Indians (@mipaltan) April 25, 2023
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ವಿರುದ್ಧ 13 ರನ್ನಿಂದ ಸೋತಿತ್ತು. ಈ ಸೋಲಿನೊಂದಿಗೆ ಕಳೆದ 3 ಪಂದ್ಯಗಳಿಂದ ನಿರಂತರವಾಗಿ ಸಾಗುತ್ತಿದ್ದ ಮುಂಬೈ ಇಂಡಿಯನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಲು ಸಜ್ಜಾಗುತ್ತಿದೆ. ಗುಜರಾತ್ ಟೈಟಾನ್ಸ್ ತಂಡವು ಕಳೆದ ಪಂದ್ಯದಲ್ಲಿ 7 ರನ್‌ಗಳಿಂದ ಲಕ್ನೋ ಸೂಪರ್‌ಜೈಂಟ್ಸ್ ಅನ್ನು ಸೋಲಿಸಿತು. ಕೊನೆಯ ಓವರ್ ವರೆಗೂ ನಡೆದ ಈ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬೌಲರ್ಗಳು ಅಮೋಘ ಬೌಲಿಂಗ್ ಪ್ರದರ್ಶಿಸಿ ಗೆದ್ದುಕೊಂಡಿತ್ತು. ಇಂದು ಅದೇ ಫಾರ್ಮ್ನ್ನು ಮುಂದುವರೆಸಲು ಪಾಂಡ್ಯ ಪಡೆ ಅಣಿಯಾಗಿದೆ.
ವೃದ್ಧಿಮಾನ್ ಸಹಾ ಕಳೆದ ಪಂದ್ಯದಲ್ಲಿ ತಂಡಕ್ಕೆ ಅಗತ್ಯ ರನ್ ಕಲೆ ಹಾಕಿ ಫಾರ್ಮ್ಗೆ ಮರಳಿದ್ದಾರೆ. ಇದರಿಂದ ತಂಡಕ್ಕೆ ಮತ್ತಷ್ಟು ಬಲ ಬಂದಿದೆ. ಮೋಹಿತ್ ಶರ್ಮಾ ಮತ್ತು ಮಹಮ್ಮದ್ ಶಮಿ ಅವರ ಅನುಭವ ತಂಡದ ಬೌಲಿಂಗ್ ಪಾಳಯಕ್ಕೆ ಪ್ಲೇಸ್ ಪಾಯಿಂಟ್ ಆಗಿದೆ. ಮುಂಬೈ ಪಂಜಾಬ್ ವಿರುದ್ಧ ಸೋಲು ಕಂಡರೂ ಸೂರ್ಯ ಕುಮಾರ್ ಯಾದವ್ ಭರ್ಜರಿ ಅರ್ಧಶತಕ ಮುಂದಿನ ಪಂದ್ಯಗಳಿಗೆ ಭರವಸೆ ನೀಡಿದೆ.
ಸಂಭಾವ್ಯ ತಂಡ ಇಂತಿದೆ..: ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಮೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್
ಇದನ್ನೂ ಓದಿ: ಕಡಿಮೆ ಸ್ಕೋರ್ ಗಳಿಸಿದರೂ ಸನ್ರೈಸರ್ಸ್ ವಿರುದ್ಧ ಗೆದ್ದ ಡೆಲ್ಲಿ: ಫೋಟೋಗಳಲ್ಲಿ ನೋಡಿ ಪಂದ್ಯದ ಚಿತ್ರಣ