ಅಹಮದಾಬಾದ್ (ಗುಜರಾತ್): ಗುಜರಾತ್ ವಿರುದ್ಧ ಉತ್ತಮ ಆರಂಭ ಕಂಡರೂ ನಂತರ ಸತತ ವಿಕೆಟ್ ಪತನದಿಂದ ಲಕ್ನೋ ಸೂಪರ್ ಜೈಂಟ್ಸ್ 56 ರನ್ನ ಸೋಲು ಕಂಡಿತು. ಟೈಟಾನ್ಸ್ನ ಮೋಹಿತ್ ಶರ್ಮಾ 4 ವಿಕೆಟ್ ಕಿತ್ತರು, ಇದರಿಂದ 7 ವಿಕೆಟ್ ನಷ್ಟ ಅನುಭವಿಸಿದ ಲಕ್ನೋ 20 ಓವರ್ನಲ್ಲಿ 171 ರನ್ ಗಳಿಸಲಷ್ಟೇ ಶಕ್ತವಾಯಿತು.
228 ರನ್ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಲಕ್ನೋ ಸೂಪರ್ ಜೈಂಟ್ಸ್ 88 ರನ್ ಉತ್ತಮ ಆರಂಭಿಕ ಜೊತೆಯಾಟ ಪಡೆಯಿತು. ಲಕ್ನೋ ಪರ ಈ ಆವೃತ್ತಿಯ ಮೊದಲ ಪಂದ್ಯ ಆಡುತ್ತಿರುವ ಡಿ ಕಾಕ್ ಭರ್ಜರಿ ಬ್ಯಾಟ್ ಬೀಸಿ ತಮ್ಮ ಅಂತರಾಷ್ಟ್ರೀಯ ತಂಡದ ಫಾರ್ಮ್ನ್ನು ಮುಂದುವರೆಸಿದರು.
48 ರನ್ ಮಾಡಿದ ಮೇಯರ್ಸ್ 9ನೇ ಓವರ್ನಲ್ಲಿ ಔಟ್ ಆದರು. ಅವರ ನಂತರ ಬಂದ ಎಲ್ಲಾ ಬ್ಯಾಟರ್ಗಳು ಡಿ ಕಾಕ್ ಜೊತೆ ರನ್ ಸೇರಿಸಲು ಆಗಲಿಲ್ಲ. ದೀಪಕ್ ಹೂಡಾ (11), ಮಾರ್ಕಸ್ ಸ್ಟೋಯ್ನಿಸ್ (4) ಬೇಗ ಔಟ್ ಆದರು. ಅವರ ಬೆನ್ನಲ್ಲೇ 70 ರನ್ ಗಳಿಸಿದ್ದ ಡಿ ಕಾಕ್ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು.
-
A formidable victory at home for @gujarat_titans 👏🏻👏🏻#GT register a 56-run win over #LSG in the first game of today's double-header 👌🏻👌🏻
— IndianPremierLeague (@IPL) May 7, 2023 " class="align-text-top noRightClick twitterSection" data="
Scorecard ▶️ https://t.co/le9e6Qkbmi #TATAIPL | #GTvLSG pic.twitter.com/fopBaeWr9s
">A formidable victory at home for @gujarat_titans 👏🏻👏🏻#GT register a 56-run win over #LSG in the first game of today's double-header 👌🏻👌🏻
— IndianPremierLeague (@IPL) May 7, 2023
Scorecard ▶️ https://t.co/le9e6Qkbmi #TATAIPL | #GTvLSG pic.twitter.com/fopBaeWr9sA formidable victory at home for @gujarat_titans 👏🏻👏🏻#GT register a 56-run win over #LSG in the first game of today's double-header 👌🏻👌🏻
— IndianPremierLeague (@IPL) May 7, 2023
Scorecard ▶️ https://t.co/le9e6Qkbmi #TATAIPL | #GTvLSG pic.twitter.com/fopBaeWr9s
ನಂತರ ಲಕ್ನೋ ಸರಣಿ ಪತನ ಕಂಡಿತು. ಪೂರನ್ (3), ಬದೋನಿ (21) ಮತ್ತು ನಾಯಕ ಕೃನಾಲ್ ಪಾಂಡ್ಯ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಸಿಂಗ್ ಮತ್ತು ರವಿ ಕೊನೆಯ ವರೆಗೂ ಉಳಿದರು. ಗುಜರಾತ್ ಪರ ಮಾಹಿತ್ ಶರ್ಮಾ 4, ಶಮಿ, ನೂರ್ ಅಹಮ್ಮದ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಗುಜರಾತ್ ಇನ್ನಿಂಗ್ಸ್: ಇದಕ್ಕೂ ಮುನ್ನ ಆರಂಭಿಕ ಬ್ಯಾಟರ್ಗಳಾದ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಅವರ ಅಬ್ಬರದ ರನ್ ಗಳಿಕೆಯಿಂದ ಗುಜರಾತ್ ಟೈಟಾನ್ಸ್ ನಿಗದಿತ ಓವರ್ ಅಂತ್ಯಕ್ಕೆ 2 ವಿಕೆಟ್ ನಷ್ಟದಿಂದ 227 ರನ್ ಕಲೆಹಾಕಿದೆ. ಗುಜರಾತ್ನ ಬ್ಯಾಟಿಂಗ್ ಅಬ್ಬರಕ್ಕೆ ಬರೋಬ್ಬರಿ ಎಂಟು ಜನ ಬೌಲರ್ಗಳನ್ನು ಲಕ್ನೋ ನಾಯಕ ಕೃನಾಲ್ ಕಣಕ್ಕಿಳಿಸಿದರೂ ಪ್ರಯೋಜನವಾಲಿಲ್ಲ. ಇದರಿಂದ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆಲ್ಲಲು 228 ರನ್ಗಳನ್ನು ಗಳಿಸಬೇಕಿದೆ.
ಟಾಸ್ ಸೋತು ಬ್ಯಾಟಿಂಗ್ ಬಂದ ಹಾಲಿ ಚಾಂಪಿಯನ್ ತಂಡ ಗುಜರಾತ್ ತನ್ನ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ವೃದ್ಧಿಮಾನ್ ಸಹಾ, ಶುಭಮನ್ ಗಿಲ್ ಜೋಡಿ ಬರೋಬ್ಬರಿ 142 ರನ್ ಜೊತೆಯಾಟ ಆಡಿದರು. ಇವರ ಅಬ್ಬರದ ಬ್ಯಾಟಿಂಗ್ನಿಂದ ಟೈಟಾನ್ಸ್ ತಂಡ ಪವರ್ ಪ್ಲೇಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆ ಬರೆಯಿತು. ವೃದ್ಧಿಮಾನ್ ಸಹಾ ಪವರ್ ಪ್ಲೇಯನ್ನು ವೈಯಕ್ತಿಕ ಗರಿಷ್ಠ ರನ್ ಸಾಧನೆ ಮಾಡಿದರು.
ಈ ಆವೃತ್ತಿಯ ಐಪಿಎಲ್ನಲ್ಲಿ ವೃದ್ಧಿಮಾನ್ ಸಹಾ ಅವರ ಬ್ಯಾಟ್ನಿಂದ ದಾಖಲಾದ ಮೊದಲ ಅರ್ಧಶತಕ ಇದಾಗಿದೆ. ಕೇವಲ 20 ಬಾಲ್ನಲ್ಲಿ ಸಹಾ ಅರ್ಧಶತಕ ಗಳಿಸಿದರು. ಗುಜರಾತ್ ತಂಡದ ಪರ ಅತಿ ಕಡಿಮೆ ಬಾಲ್ನಲ್ಲಿ 50 ರನ್ ಕಲೆಹಾಕಿದ ಬ್ಯಾಟರ್ ಎಂಬ ಖ್ಯಾತಿಗೆ ಒಳಗಾದರು. ಈ ಮೊದಲು ವಿಜಯ್ ಶಂಕರ್ 21 ಬಾಲ್ನಲ್ಲಿ ಗಳಿಸಿದ ಅರ್ಧಶತಕ ದಾಖಲೆಯಲ್ಲಿತ್ತು. 50 ರನ್ ನಂತರ ಸಹಾ ಬ್ಯಾಟಿಂಗ್ ಅಬ್ಬರ ಸ್ವಲ್ಪ ಕುಗ್ಗಿತು. ಮತ್ತೆ 23 ಬಾಲ್ ಎದುರಿಸಿ ಕೇವಲ 31 ರನ್ ಕಲೆಹಾಕಿದರು.
ಗಿಲ್ - ಸಹಾ ಜೋಡಿಯನ್ನು ಆವೇಶ್ ಖಾನ್ ಬೇರ್ಪಡಿಸಿದರು. 43 ಬಾಲ್ನಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ನಿಂದ 81 ರನ್ ಗಳಿಸಿದ ಸಹಾ ಕ್ಯಾಚ್ ಇತ್ತು ಔಟ್ ಆದರು. ಈ ಆರಂಭಿಕ ಜೋಡಿ ಗಳಿಸಿದ 142 ರನ್ನ ಜೊತೆಯಾಟ ಈ ಆವೃತ್ತಿಯ ಎರಡನೇ ಅತೀ ಹೆಚ್ಚು ರನ್ ಆಗಿದೆ. ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಮ್ಯಾಚ್ನಲ್ಲಿ ಫಾಫ್ ಮತ್ತು ವಿರಾಟ್ ಕೊಹ್ಲಿ 148 ರನ್ ಜೊತೆಯಾಟ ಮಾಡಿದ್ದು ಮೊದಲ ಸ್ಥಾನದಲ್ಲಿದೆ.
ಸಹಾ ವಿಕೆಟ್ ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ಸಹ ಅಬ್ಬರಿಸಿದರು. ಗಿಲ್ ಜೊತೆ ಸೇರಿದ ಹಾರ್ದಿಕ್ 42 ರನ್ ಚುಟುಕು ಜೊತೆಯಾಟ ಮಾಡಿದರು. 15 ಬಾಲ್ನಲ್ಲಿ 2 ಸಿಕ್ಸ್ ಮತ್ತು 1 ಬೌಂಡರಿಯ ಸಹಾಯದಿಂದ 25 ರನ್ ಗಳಿಸಿ ಹಾರ್ದಿಕ್ ಮೊಹ್ಸಿನ್ ಖಾನ್ಗೆ ವಿಕೆಟ್ ಕೊಟ್ಟರು. ನಂತರ ಡೇವಿಡ್ ಮಿಲ್ಲರ್ ಗಿಲ್ ಒಟ್ಟಿಗೆ ಇನ್ನಿಂಗ್ಸ್ ಮುಂದುವರೆಸಿದರು.
6 ರನ್ನಿಂದ ಶತಕ ವಂಚಿತರಾದ ಗಿಲ್: ಶುಭಮನ್ ಗಿಲ್ ಆಡಿದ ಎಲ್ಲಾ ಅಂತರಾಷ್ಟ್ರೀಯ ಮಾದರಿಯಲ್ಲಿ ಶತಕ ಗಳಿಸಿದ್ದಾರೆ. ಲೀಗ್ನಲ್ಲಿ ಒಂದು ಶತಕದ ಕೊರತೆ ಇತ್ತು. ಇಂದು ಅವರ ಬ್ಯಾಟ್ನಿಂದ ಶತಕದ ಆಟ ಬರುವ ನಿರೀಕ್ಷೆ ಇತ್ತಾದರೂ 6 ರನ್ನಿಂದ ಹಿಂದೆ ಉಳಿದರು. 51 ಬಾಲ್ ಎದುರಿಸಿದ ಗಿಲ್ 2 ಬೌಂಡರಿ ಮತ್ತು 7 ಸಿಕ್ಸ್ನಿಂದ ಅಜೇಯ 94 ರನ್ ಗಳಿಸಿದರು.
ನಾಯಕ ಹಾರ್ದಿಕ್ ವಿಕೆಟ್ ನಂತರ ಬಂದ ಡೇವಿಡ್ ಮಿಲ್ಲರ್ ಸಹ ಅಬ್ಬರಿಸಿದರು. ಗಿಲ್ ಮಿಲ್ಲರ್ ಜೋಡಿ ಕೊನೆಯ ಐದು ಓವರ್ನಲ್ಲಿ 51 ರನ್ ಕಲೆಹಾಕಿತು. ಮಿಲ್ಲರ್ 12 ಬಾಲ್ನಲ್ಲಿ 2 ಬೌಂಡರಿ ಮತ್ತು 1 ಸಿಕ್ಸ್ನಿಂದ ಅಜೇಯ 21 ರನ್ ಕಲೆಹಾಕಿದರು.
ಇದನ್ನೂ ಓದಿ: ಫಿಲಿಫ್ ಸಾಲ್ಟ್ ವಿರುದ್ಧ ಕೋಪ ಹೊರಹಾಕಿದ ಸಿರಾಜ್.. ಪಂದ್ಯದ ನಂತರ ಆಲಂಗಿಸಿ ಶಹಬ್ಬಾಶ್ ಗಿರಿ