ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿನ್ನೆ ಪಡೆದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ರನ್ಗಳ ಗೆಲುವಿನ ನಗೆ ಬೀರಿದೆ. ಆದರೆ, ಡುಪ್ಲೆಸಿ ವಿಕೆಟ್ ಪತನಗೊಳ್ಳುತ್ತಿದ್ದಂತೆ ವಿರಾಟ್ ಜೊತೆ ಕ್ರೀಸ್ ಹಂಚಿಕೊಂಡಿದ್ದ ಮ್ಯಾಕ್ಸ್ವೆಲ್ ಕೇವಲ 3 ರನ್ಗಳಿಕೆ ಮಾಡಿ, ಕೊಹ್ಲಿ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ರನೌಟ್ ಆದರು.
ಪಂದ್ಯ ಮುಕ್ತಾಯವಾದ ಬಳಿಕ ಆರ್ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಾಚರಣೆ ಮಾಡಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿರುವ ಮ್ಯಾಕ್ಸ್ವೆಲ್, 'ನಾನು ನಿಮ್ಮ ಜೊತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ' ಎಂದು ಅವರ ಕಾಲೆಳೆದಿದ್ದಾರೆ.
-
RCB v CSK, Dressing Room Celebrations
— Royal Challengers Bangalore (@RCBTweets) May 5, 2022 " class="align-text-top noRightClick twitterSection" data="
The smiles and laughter returned & the players celebrated the win with the customary victory song. We also asked Maxi, Harshal, Siraj and the coaches about last night’s win against CSK.#PlayBold #WeAreChallengers #IPL2022 #RCB #ನಮ್ಮRCB pic.twitter.com/uW5hl7b4ko
">RCB v CSK, Dressing Room Celebrations
— Royal Challengers Bangalore (@RCBTweets) May 5, 2022
The smiles and laughter returned & the players celebrated the win with the customary victory song. We also asked Maxi, Harshal, Siraj and the coaches about last night’s win against CSK.#PlayBold #WeAreChallengers #IPL2022 #RCB #ನಮ್ಮRCB pic.twitter.com/uW5hl7b4koRCB v CSK, Dressing Room Celebrations
— Royal Challengers Bangalore (@RCBTweets) May 5, 2022
The smiles and laughter returned & the players celebrated the win with the customary victory song. We also asked Maxi, Harshal, Siraj and the coaches about last night’s win against CSK.#PlayBold #WeAreChallengers #IPL2022 #RCB #ನಮ್ಮRCB pic.twitter.com/uW5hl7b4ko
ಮೈದಾನದಲ್ಲಿ ಬ್ಯಾಟ್ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ಗಳ ಮಧ್ಯೆ ತುಂಬಾ ವೇಗವಾಗಿ ಓಡುತ್ತಾರೆ. ಹೀಗಾಗಿ, ಕೆಲ ಪ್ಲೇಯರ್ಸ್ಗೆ ಅವರೊಂದಿಗೆ ಹೊಂದಾಣಿಕೆ ಆಗಲ್ಲ. ನಿನ್ನೆಯ ಪಂದ್ಯದಲ್ಲೂ ಅದೇ ಆಗಿದ್ದು, ಹೀಗಾಗಿ ಮ್ಯಾಕ್ಸ್ವೆಲ್ ರನೌಟ್ ಆದರು. ಬ್ಯಾಟಿಂಗ್ನಲ್ಲಿ ವಿಫಲವಾದ ಮ್ಯಾಕ್ಸ್ವೆಲ್, ತದನಂತರ ಬೌಲಿಂಗ್ನಲ್ಲಿ ಮಿಂಚು ಹರಿಸಿದರು. ತಾವು ಎಸೆದ 4ಓವರ್ಗಳಲ್ಲಿ ಕೇವಲ 22ರನ್ ನೀಡಿ, ಪ್ರಮುಖ 2 ವಿಕೆಟ್ ಪಡೆದುಕೊಂಡು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ಇದನ್ನೂ ಓದಿ: CSK - RCB ಪಂದ್ಯದ ವೇಳೆ ಅಪರೂಪದ ಘಟನೆ.. ಆರ್ಸಿಬಿ ಜೆರ್ಸಿ ತೊಟ್ಟು ಲವ್ ಪ್ರಪೋಸ್ ಮಾಡಿದ ಯುವತಿ!
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 11 ಪಂದ್ಯಗಳನ್ನಾಡಿದ್ದು, ಇದರಲ್ಲಿ ಆರರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಸದ್ಯ 4ನೇ ಸ್ಥಾನದಲ್ಲಿದೆ.