ETV Bharat / sports

ಕಪ್​ ಗೆಲ್ಲಲು ನಾವಷ್ಟೇ ಕಷ್ಟಪಟ್ಟಿಲ್ಲ, ನೆಹ್ರಾ, ಗ್ಯಾರಿ ಕರ್ಸ್ಟನ್‌ರಿಂದ ಹಿಡಿದು ಎಲ್ಲರ ಶ್ರಮವಿದೆ: ಪಾಂಡ್ಯ - ಐಪಿಎಲ್ ಟ್ರೋಫಿ ವಿಜೇತ ಹಾರ್ದಿಕ್ ಪಾಂಡ್ಯ ಸುದ್ದಿ

ಐಪಿಎಲ್ 2022ರಲ್ಲಿ ಗುಜರಾತ್ ಟೈಟಾನ್ಸ್ ಅದ್ಭುತ ಪ್ರದರ್ಶನ ನೀಡಿದೆ. ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಹಾರ್ದಿಕ್‌ ಪಾಂಡ್ಯಾ ಬಳಗ ಪ್ರತಿಷ್ಟಿತ ಪ್ರಶಸ್ತಿಗೆ ಮುತ್ತಿಕ್ಕಿತು. ಪಂದ್ಯದ ನಂತರ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದರು.

Five time IPL winner Hardik Pandya reaction on Match win, first time trophy win by Gujarat Titans, IPL trophy winner Hardik Pandya news, IPL trophy 2022 news, ಪಂದ್ಯದ ಗೆಲುವಿನ ಬಗ್ಗೆ ಐದು ಬಾರಿ ಐಪಿಎಲ್ ವಿಜೇತ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ, ಗುಜರಾತ್ ಟೈಟಾನ್ಸ್‌ನಿಂದ ಮೊದಲ ಬಾರಿಗೆ ಟ್ರೋಫಿ ಗೆಲುವು, ಐಪಿಎಲ್ ಟ್ರೋಫಿ ವಿಜೇತ ಹಾರ್ದಿಕ್ ಪಾಂಡ್ಯ ಸುದ್ದಿ, ಐಪಿಎಲ್ ಟ್ರೋಫಿ 2022 ಸುದ್ದಿ,
ಕೃಪೆ: Twitter
author img

By

Published : May 30, 2022, 7:45 AM IST

Updated : May 30, 2022, 9:49 AM IST

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಫೈನಲ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್​ ಟೈಟಾನ್ಸ್​ ಜಯಭೇರಿ ಬಾರಿಸಿ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿತು. ರೋಚಕ ಗೆಲುವಿನ ಹಾದಿಯ ಬಗ್ಗೆ ನಾಯಕ ಹಾರ್ದಿಕ್​ ಪಾಂಡ್ಯ ಹರ್ಷ ವ್ಯಕ್ತಪಡಿಸಿದರು.

'ನಾನು ಶ್ರಮಪಟ್ಟಿದ್ದನ್ನು ಸರಿಯಾದ ಸಮಯದಲ್ಲಿ ತೋರಿಸಲು ಬಯಸುತ್ತೇನೆ. ಇಂದು ಆ ದಿನವಾಗಿತ್ತು. ನನ್ನ ಉತ್ತಮ ಪ್ರದರ್ಶನವನ್ನು ಉಳಿಸಿಕೊಂಡಿದ್ದೆ. ಸಂಜು ಔಟಾದ ನಂತರ ನಾನು ಬೌಲಿಂಗ್ ಮಾಡುವಾಗ ಲೈನ್& ಲೆಂತ್‌ ಅನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಅರಿತುಕೊಂಡೆ. ಅದೇ ರೀತಿ ಬೌಲಿಂಗ್​ ಮುಂದುವರಿಸಿದೆ.'

'ಬ್ಯಾಟಿಂಗ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಮೆಗಾ ಹರಾಜಿನ ನಂತರ ನಾನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದು ಸ್ಪಷ್ಟವಾಯಿತು. ಹೀಗಾಗಿ ಅದೇ ಕ್ರಮದಲ್ಲಿ ಬ್ಯಾಟಿಂಗ್​ ಮಾಡಲು ಕಣಕ್ಕಿಳಿಯುತ್ತಿದ್ದೆ.'

ಇದನ್ನೂ ಓದಿ: ಫೈನಲ್​ ಗೆದ್ದು ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್​ ಪಟ್ಟ ಅಲಂಕರಿಸಿದ ಗುಜರಾತ್​... ರಾಜಸ್ಥಾನ ಕನಸು ಭಗ್ನ

'ತಂಡದ ಚಿಂತನೆಯ ವಿಷಯದಲ್ಲಿ ನಾನು ಮತ್ತು 'ಅಶು ಪಾ' (ಕೋಚ್ ಆಶಿಶ್ ನೆಹ್ರಾ) ಸಮಾನರು. ಸ್ವಂತ ಬಲದಿಂದ ಪಂದ್ಯಗಳನ್ನು ಗೆಲ್ಲಿಸುವ ಆಟಗಾರರನ್ನು ನಾವು ಇಷ್ಟಪಡುತ್ತೇವೆ. ಬೌಲರ್‌ಗಳು ಪಂದ್ಯಗಳನ್ನು ಗೆಲ್ಲಿಸಲು ಶ್ರಮವಹಿಸುತ್ತಾರೆ. ಈ ಟ್ರೋಫಿ ಪಡೆಯಲು ನಾವಷ್ಟೇ ಕಷ್ಟಪಟ್ಟಿಲ್ಲ, ಕೋಚ್ ಆಶಿಶ್ ನೆಹ್ರಾ, ಗ್ಯಾರಿ ಕರ್ಸ್ಟನ್‌ರಿಂದ ಹಿಡಿದು ಲಾಜಿಸ್ಟಿಕ್ಸ್ ಸಿಬ್ಬಂದಿಯವರೆಗೂ ಎಲ್ಲರೂ ಕೊಡುಗೆ ನೀಡಿದ್ದಾರೆ' ಎಂದು ಹಾರ್ದಿಕ್​ ಪಾಂಡ್ಯ ಸ್ಮರಿಸಲು ಮರೆಯಲಿಲ್ಲ.

Last Updated : May 30, 2022, 9:49 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.