ETV Bharat / sports

WATCH: ಅಫ್ಘಾನಿಸ್ತಾನದ ಪ್ರತಿಯೊಬ್ಬರೂ ಭಾರತದ ಜೊತೆಗಿದ್ದಾರೆ- ಕ್ರಿಕೆಟಿಗ ರಶೀದ್​​ ಖಾನ್ - ಅಫ್ಘಾನ್​ ಕ್ರಿಕೆಟರ್​ ರಶೀದ್ ಖಾನ್

ಕೋವಿಡ್‌ ಬಿಕ್ಕಟ್ಟಿನ ಕಠಿಣ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಪ್ರತಿಯೊಬ್ಬರೂ ಭಾರತದ ಜೊತೆಗಿದ್ದಾರೆ ಎನ್ನುವ ವಿಡಿಯೋ ಸಂದೇಶವನ್ನು ಅಫ್ಘಾನಿಸ್ತಾನ ಕ್ರಿಕೆಟಿಗ ರಶೀದ್‌ ಖಾನ್‌ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ಕೋವಿಡ್ ವಿರುದ್ಧ ಹೋರಾಡುತ್ತಿರುವ ಭಾರತದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ರಶೀದ್​​ ಖಾನ್ ಟ್ವೀಟ್​
ರಶೀದ್​​ ಖಾನ್ ಟ್ವೀಟ್​
author img

By

Published : Apr 30, 2021, 12:44 PM IST

Updated : Apr 30, 2021, 1:56 PM IST

ಹೈದರಾಬಾದ್: ಭಾರತದಲ್ಲಿ ಕೊರೊನಾ ಸಾವು-ನೋವು ತೀವ್ರ ಸ್ವರೂಪ ಪಡೆದುಕೊಳ್ತಿದೆ. ಮಹಾಮಾರಿಯ ನಿರ್ವಹಣೆಗೆ ಭಾರತ ಅವಿರತವಾಗಿ ಹೋರಾಡುತ್ತಿದ್ದು, ಕ್ರಿಕೆಟ್​​ ಆಟಗಾರರು ಕೂಡಾ ಸಾಥ್​ ನೀಡುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್, ಬ್ರೆಟ್ ಲೀ ಮತ್ತು ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಧನಸಹಾಯ ಮಾಡಿದ್ದಾರೆ.

ಇದೀಗ ಅಫ್ಘಾನ್​ ಕ್ರಿಕೆಟರ್​ ರಶೀದ್ ಖಾನ್ ತಮ್ಮ ಟ್ವಿಟರ್​ ಖಾತೆಯಲ್ಲಿ ಮನಮುಟ್ಟುವ ವಿಶೇಷವಾದ ವಿಡಿಯೋ​ ಪೋಸ್ಟ್‌ ಮಾಡಿ ಭಾರತೀಯರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.

'ಅಫ್ಘಾನಿಸ್ತಾನದ ಪ್ರತಿಯೊಬ್ಬರೂ ಈ ಕಠಿಣ ಸಮಯದಲ್ಲಿ ನಿಮ್ಮೊಂದಿಗೆ ಇರುತ್ತಾರೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ, ಮನೆಯಲ್ಲಿಯೇ ಉಳಿಯಿರಿ, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಿ ಮತ್ತು ಮಾಸ್ಕ್ ಹಾಕಿ' ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ನಮ್ಮ ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ರೂ ಅವರಿಂದ ಉತ್ತಮ ಪ್ರದರ್ಶನ ಬರುತ್ತಿಲ್ಲ : ಮಾರ್ಗನ್

Last Updated : Apr 30, 2021, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.