ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ 11 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿದೆ. ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ಯೋರ್ವ ಈ ತಂಡದ ವಿಚಾರವಾಗಿ ಮಹತ್ವದ ಮಾಹಿತಿವೊಂದನ್ನ ಹೊರಹಾಕಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹಾಗೂ ಕೋಚ್ ಬ್ರೆಂಡನ್ ಮೆಕಲಮ್ ಮಧ್ಯೆ ಎಲ್ಲವೂ ಸರಿ ಎಲ್ಲ ಎಂಬ ಅಭಿಪ್ರಾಯವನ್ನ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ ಅವರು ಕೆಕೆಆರ್ ತಂಡದ ಕುರಿತು ಮಾತನಾಡಿದ್ದಾರೆ. 2022ರ ಐಪಿಎಲ್ನಲ್ಲಿ ತಂಡ ಇಲ್ಲಿಯವರೆಗೆ ಆಡಿರುವ 11 ಪಂದ್ಯಗಳ ಪೈಕಿ ಒಟ್ಟು 20 ಆಟಗಾರರನ್ನ ಮೈದಾನಕ್ಕಿಳಿಸಿದ್ದು, ಉತ್ತಮವಾದ ಸಂಯೋಜನೆ ಸಿಕ್ಕಿಲ್ಲ.
ಇಂದಿನ ಮುಂಬೈ ವಿರುದ್ಧದ ಪಂದ್ಯದಲ್ಲೂ ಕೆಕೆಆರ್ ತಂಡ ಒಟ್ಟು ಐದು ಬದಲಾವಣೆ ಮಾಡಿ, ಕಣಕ್ಕಿಳಿದಿದೆ. ಹೀಗಾಗಿ, ಇಬ್ಬರ ನಡುವಿನ ಹೊಂದಾಣಿಕೆ ಸರಿಯಿಲ್ಲ ಎಂದು ಮೊಹಮ್ಮದ್ ಕೈಫ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕೆಕೆಆರ್ ಉತ್ತಮ ಪಡೆ ಹೊಂದಿದ್ದರೂ ಕೂಡ, ಮೇಲಿಂದ ಮೇಲೆ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಿದೆ. ಇದೇ ಕಾರಣಕ್ಕಾಗಿ ಪ್ಲೇಯರ್ಸ್ ಒತ್ತಡಕ್ಕೊಳಗಾಗಿ ಉತ್ತಮವಾದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.
ಇದನ್ನೂ ಓದಿ: ಮುಂಬೈ ತಂಡಕ್ಕೆ ಗಾಯದ ಮೇಲೆ ಬರೆ.. ಐಪಿಎಲ್ನಿಂದ ಹೊರಬಿದ್ದ ಸೂರ್ಯಕುಮಾರ್
ಡ್ರೆಸ್ಸಿಂಗ್ ರೂಮ್ ವಾತಾವರಣದ ಬಗ್ಗೆ ಮಾತನಾಡಿರುವ ಕೈಫ್, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚಹಲ್ ಓವರ್ನಲ್ಲಿ ಅಯ್ಯರ್ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಡಗೌಟ್ ಕಡೆಗೆ ಹೊಗುತ್ತಿದ್ದ ಅಯ್ಯರ್, ಬ್ರೆಂಡನ್ ಮೆಕಲಮ್ ಜೊತೆ ಮಾತನಾಡಿದ್ದರು. ಈ ವೇಳೆ ಅಯ್ಯರ್ ಯಾವುದೋ ವಿಷಯಕ್ಕೆ ಅವರ ಮೇಲೆ ಕೋಪಗೊಂಡಿರುವಂತೆ ಕಾಣಿಸುತ್ತಿತ್ತು ಎಂದಿದ್ದಾರೆ. ಇದು ನಾಯಕ ಮತ್ತು ಕೋಚ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನ ತೋರಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.