ಟೀಂ ಇಂಡಿಯಾದ ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಇತ್ತೀಚೆಗೆ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು ಇದನ್ನು ನೋಡಿದ ನೆಟ್ಟಿಗರು ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ. ಈ ಫೋಟೋ ಹಂಚಿಕೊಳ್ಳಲು ಕಾರಣ ಏನಿರಬಹುದು? ನಿಮ್ಮ ಗರ್ಲ್‌ಫ್ರೆಂಡ್ ಕೈಕೊಟ್ಟಿದ್ದಾರಾ? ಎಂದು ಕಮೆಂಟ್ ಮಾಡಿದ್ದಾರೆ.
ಫೋಟೋದಲ್ಲಿ ಕಪ್ಪು ಟಿ-ಶರ್ಟ್ ತೊಟ್ಟು ಕನ್ನಡಿ ಮುಂದೆ ಕಾಣಿಸಿಕೊಂಡಿರುವ ಗಿಲ್, "ದೇವತೆಗಳೊಂದಿಗೆ ಪ್ರೀತಿಯಲ್ಲಿ ಬೀಳಬೇಡಿ" ಎಂದು ಶೀರ್ಷಿಕೆ ಬರೆದು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅವರಿಗೆ ಬ್ರೇಕಪ್ ಆಗಿದೆ ಎಂದು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಗಿಲ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಓಡಾಡುತ್ತಿದ್ದು ಇಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡ ಉದಾಹರಣೆಗಳಿವೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟೊಟ್ಟಿಗೆ ಫೋಟೋಗಳನ್ನು ಶೇರ್ ಮಾಡಿಕೊಂಡು ಸುದ್ದಿಗೂ ಆಹಾರವಾಗಿದ್ದರು.
- " class="align-text-top noRightClick twitterSection" data="
">
ಗಿಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋವನ್ನು ಈ ವಿಚಾರಕ್ಕೆ ಹೋಲಿಸಿಕೊಂಡಿರುವ ನೆಟಿಜನ್ಸ್, ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಭಾವಿಸಿಕೊಂಡು ಕಾಮೆಂಟ್ ಹಾಕುತ್ತಿದ್ದಾರೆ. ಆದರೆ, ಈ ವದಂತಿಗೆ ಶುಭ್‌ಮನ್ ಗಿಲ್ ಆಗಲಿ ಅಥವಾ ಸಾರಾ ತೆಂಡೂಲ್ಕರ್ ಆಗಲಿ ತಾವು ಪ್ರೀತಿಯಲ್ಲಿ ಬಿದ್ದಿರುವ ಮತ್ತು ಬ್ರೇಕಪ್ ಆಗಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಟಿ20 ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿರುವ ಯುವ ಕ್ರಿಕೆಟಿಗ ಇದೀಗ ವಿಶ್ರಾಂತಿಯಲ್ಲಿದ್ದಾರೆ. ಮನೆ ಸದಸ್ಯರೊಂದಿಗೆ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಗಿಲ್ ತಾವು ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಹೆಚ್ಚು ಗಮನ ಸೆಳೆದಿದ್ದು, ಇದುವರೆಗೆ ಆಡಿರುವ 8 ಟೆಸ್ಟ್ ಪಂದ್ಯಗಳಲ್ಲಿ 414 ರನ್ ಗಳಿಸಿದ್ದಾರೆ. ಗಬ್ಬಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತದ ಪರ 91 ರನ್ ಗಳಿಸಿ ಸರಣಿ ಗೆಲುವಿನ ರೂವಾರಿಯಾಗಿದ್ದರು.