ಚೆನ್ನೈ(ತವಿಳುನಾಡು): ಇಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಮ್ಯಾಚ್ನಲ್ಲಿ ತಮಿಳು ಮತ್ತು ತೆಲುಗಿನ ಹೋರಾಟ ಎಂದರೆ ತಪ್ಪಾಗದು. ಇಲ್ಲಿನ ಚೆಪಾಕ್ ಕ್ರೀಡಾಂಗಣ ಐಪಿಎಲ್ನ 29ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಕಣಕ್ಕಿಳಿಯುತ್ತಿದೆ. ಎರಡೂ ತಂಡಗಳು ಈ ಆವೃತ್ತಿಯನ್ನು ಸೋಲಿನಿಂದ ಆರಂಭಿಸಿದರೂ, ಚೆನ್ನೈ ಉತ್ತಮ ಕಂ ಬ್ಯಾಕ್ ಕಂಡಿದೆ. ಆದರೆ ಸನ್ ರೈಸರ್ಸ್ ಮಾತ್ರ ಕುಂಟುತ್ತಿದೆ.
-
Will @ChennaiIPL ride on their Midas touch tonight or will @SunRisers find one of their own?#IPL2023 #CSKvSRH #TATAIPL #IPLonJioCinema pic.twitter.com/fzjX5ZYCun
— JioCinema (@JioCinema) April 21, 2023 " class="align-text-top noRightClick twitterSection" data="
">Will @ChennaiIPL ride on their Midas touch tonight or will @SunRisers find one of their own?#IPL2023 #CSKvSRH #TATAIPL #IPLonJioCinema pic.twitter.com/fzjX5ZYCun
— JioCinema (@JioCinema) April 21, 2023Will @ChennaiIPL ride on their Midas touch tonight or will @SunRisers find one of their own?#IPL2023 #CSKvSRH #TATAIPL #IPLonJioCinema pic.twitter.com/fzjX5ZYCun
— JioCinema (@JioCinema) April 21, 2023
ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಅನ್ನು ಬೆಂಗಳೂರಿನಲ್ಲೇ ಸೋಲಿಸಿದ್ದು, ಇಂದಿನ ತವರಿನ ಪಿಚ್ನಲ್ಲಿ ಇನ್ನಷ್ಟೂ ಹುಮ್ಮಸ್ಸಿನಿಂದ ಕಣಕ್ಕಿಳಿಯುತ್ತಿದೆ. ಆರು ಪಂದ್ಯದಲ್ಲಿ ಎರಡರಲ್ಲಿ ಸೋತಿರುವ ಚೆನ್ನೈ ಅಂಕ ಪಟ್ಟಿಯಲ್ಲಿ ಆರು ಅಂಕದಿಂದ ಮೂರನೇ ಸ್ಥಾನದಲ್ಲಿದೆ. ಇಂದಿನ ಗೆಲುವು ಸ್ಥಾನವನ್ನು ಉಳಿಸಿಕೊಳ್ಳಲು ಚೆನ್ನೈಗೆ ಸಹಕಾರವಾಗಲಿದೆ.
-
Stoked with the great 🅐🅓🅜🅞sphere at Anbuden 🤩 pic.twitter.com/mC9NBPeSIE
— SunRisers Hyderabad (@SunRisers) April 20, 2023 " class="align-text-top noRightClick twitterSection" data="
">Stoked with the great 🅐🅓🅜🅞sphere at Anbuden 🤩 pic.twitter.com/mC9NBPeSIE
— SunRisers Hyderabad (@SunRisers) April 20, 2023Stoked with the great 🅐🅓🅜🅞sphere at Anbuden 🤩 pic.twitter.com/mC9NBPeSIE
— SunRisers Hyderabad (@SunRisers) April 20, 2023
ಆರಂಭಿಕ ಎರಡು ಪಂದ್ಯಗಳ ಸೋಲಿನಿಂದ ಆವೃತ್ತಿ ಆರಂಭಿಸಿದ ಸನ್ ರೈಸರ್ಸ್ ಐದು ಪಂದ್ಯದಲ್ಲಿ ಎರಡನ್ನು ಮಾತ್ರ ಗೆದ್ದು ಕೊಂಡಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 14 ರನ್ ಸೋಲನುಭವಿಸಿರುವ ಐಡೆನ್ ಮಾರ್ಕ್ರಾಮ್ ಪಡೆ, ಇಂದು ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ಚೆನ್ನೈ ತಂಡದ ಆಡುವ ಹನ್ನೊಂದರ ಬಳಗಕ್ಕೆ ಬೆನ್ ಸ್ಟೋಕ್ಸ್ ಬರುವ ಸಾಧ್ಯತೆ ಇದೆ. ಅವರು ಕಾಲು ಬೆರಳ ಗಾಯದಿಂದ ಚೇತರಿಸಿಕೊಂಡಿದ್ದು, ನೆಟ್ಸ್ನಲ್ಲಿ ಅಭ್ಯಾಸದಲ್ಲಿ ತೊಡಗಿ ಕೊಂಡಿದ್ದಾರೆ. ಮಹೇಶ್ ತೀಕ್ಷಣ ಮತ್ತು ಮಥೀಶ ಪತಿರಣ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಜಿಂಕ್ಯ ರಹಾನೆ ಫಾರ್ಮ್ ಮೂರನೇ ಕ್ರಮಾಂಕದಲ್ಲಿ ರನ್ ವೇಗ ಹೆಚ್ಚುತ್ತಿದೆ.
-
Knock Knock! Here we roar! 🦁#CSKvSRH #WhistlePodu #Yellove 💛 pic.twitter.com/tf4TIaWL1h
— Chennai Super Kings (@ChennaiIPL) April 21, 2023 " class="align-text-top noRightClick twitterSection" data="
">Knock Knock! Here we roar! 🦁#CSKvSRH #WhistlePodu #Yellove 💛 pic.twitter.com/tf4TIaWL1h
— Chennai Super Kings (@ChennaiIPL) April 21, 2023Knock Knock! Here we roar! 🦁#CSKvSRH #WhistlePodu #Yellove 💛 pic.twitter.com/tf4TIaWL1h
— Chennai Super Kings (@ChennaiIPL) April 21, 2023
ಸನ್ ರೈಸರ್ಸ್ನಲ್ಲಿ ಒಗ್ಗಟ್ಟಿನ ಪ್ರದರ್ಶನ ಕೊರತೆ ಕಂಡು ಬರುತ್ತಿದೆ. ಬೃಹತ್ ಜೊತೆಯಾಟ ತಂಡದಲ್ಲಿ ನಿರ್ಮಾಣ ಆಗದಿರುವುದು ದೊಡ್ಡ ಮೊತ್ತವನ್ನು ಗಳಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಂಡ ಜೊತೆಯಾಟವನ್ನು ನಿರ್ಮಾಣ ಮಾಡುವತ್ತ ಪ್ರಯತ್ನಿಸ ಬೇಕಿದೆ. ಬೌಲಿಂಗ್ ಬಲಿಷ್ಠವಾಗಿದ್ದರೂ ಬ್ಯಾಟಿಂಗ್ ಕೊರತೆ ತಂಡವನ್ನು ಕಾಡುತ್ತಿದೆ. ಶತಕ ಗಳಿಸಿರುವ ಹ್ಯಾರಿ ಬ್ರೂಕ್ ಬ್ಯಾಟ್ನಿಂದ ಹೈದರಾಬಾದ್ ಅಭಿಮಾನಿಗಳು ಇನ್ನಷ್ಟೂ ರನ್ ನಿರೀಕ್ಷೆಯಲ್ಲಿದ್ದು, ಕಳೆದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಸಹ ಫಾರ್ಮ್ನಲ್ಲಿ ಕಂಡಿದ್ದಾರೆ.
ಸಂಭಾವ್ಯ ತಂಡಗಳು ಇಂತಿವೆ..: ಸನ್ ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆದಿಲ್ ರಶೀದ್ / ಅಕೇಲ್ ಹೊಸೈನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಮಯಾಂಕ್ ಮಾರ್ಕಾಂಡೆ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ/ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮಥೀಶ ಪತಿರಣ, ಆಕಾಶ್ ಸಿಂಗ್
ಇದನ್ನೂ ಓದಿ: ಕೊಹ್ಲಿ ಕಮ್ ಬ್ಯಾಕ್... ಫ್ಯಾನ್ಸ್ ಫುಲ್ ಖುಷ್: ಆರ್ಸಿಬಿ, ಪಂಜಾಬ್ ಕಿಂಗ್ಸ್ ಮ್ಯಾಚ್ ಹೈಲೈಟ್ಸ್