ನವದೆಹಲಿ: ಒಲಿಂಪಿಕ್ಸ್ನಲ್ಲಿ 125 ವರ್ಷಗಳಿಂದ ಚಿನ್ನದ ಪದಕಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಭಾರತೀಯರ ಕನಸನ್ನು ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ನೆರೆವೇರಿಸಿದ್ದಾರೆ. ಅವರ ಈ ಸಾಧನೆಗೆ ಮೆಚ್ಚಿ ಈಗಾಗಲೆ ಹಲವಾರು ರಾಜ್ಯ ಸರ್ಕಾರಗಳು, ಬಿಸಿಸಿಐ ನೀರಜ್ಗೆ ನಗದು ಬಹುಮಾನ ಘೋಷಣೆ ಮಾಡಿವೆ. ಇದೀಗ ಆ ಸಾಲಿಗೆ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸೇರಿಕೊಂಡಿದೆ.
ನೀರಜ್ ಚಿನ್ನ ಗೆದ್ದ ನಂತರ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ಸಿಎಸ್ಕೆ, " ಶತಮಾನದ ಎಸೆತದ ಮೂಲಕ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು. 87.58 ಮೀಟರ್ ಎಸೆದು ಚಿನ್ನ ಗೆದ್ದ ಸಾಧನೆಯನ್ನು ಗೌರವ ಸಲ್ಲಿಸುವುದಕ್ಕಾಗಿ ನೀರಜ್ ಚೋಪ್ರಾರಿಗೆ ಒಂದು ಕೋಟಿ ರೂಪಾಯಿಗಳನ್ನು ನೀಡುತ್ತಿದ್ದೇವೆ" ಎಂದು ಸಿಎಸ್ಕೆ ಟ್ವೀಟ್ ಮಾಡಿದೆ.
-
Anbuden saluting the golden arm of India, for the Throw of the Century!
— Chennai Super Kings - Mask P😷du Whistle P🥳du! (@ChennaiIPL) August 7, 2021 " class="align-text-top noRightClick twitterSection" data="
8️⃣7⃣.5⃣8⃣ 🥇🔥
CSK honours the stellar achievement by @Neeraj_chopra1
with Rs. 1 Crore. @msdhoni
Read: https://t.co/zcIyYwSQ5E#WhistleforIndia #Tokyo2020 #Olympics #WhistlePodu 🦁💛 📸: Getty Images pic.twitter.com/lVBRCz1G5m
">Anbuden saluting the golden arm of India, for the Throw of the Century!
— Chennai Super Kings - Mask P😷du Whistle P🥳du! (@ChennaiIPL) August 7, 2021
8️⃣7⃣.5⃣8⃣ 🥇🔥
CSK honours the stellar achievement by @Neeraj_chopra1
with Rs. 1 Crore. @msdhoni
Read: https://t.co/zcIyYwSQ5E#WhistleforIndia #Tokyo2020 #Olympics #WhistlePodu 🦁💛 📸: Getty Images pic.twitter.com/lVBRCz1G5mAnbuden saluting the golden arm of India, for the Throw of the Century!
— Chennai Super Kings - Mask P😷du Whistle P🥳du! (@ChennaiIPL) August 7, 2021
8️⃣7⃣.5⃣8⃣ 🥇🔥
CSK honours the stellar achievement by @Neeraj_chopra1
with Rs. 1 Crore. @msdhoni
Read: https://t.co/zcIyYwSQ5E#WhistleforIndia #Tokyo2020 #Olympics #WhistlePodu 🦁💛 📸: Getty Images pic.twitter.com/lVBRCz1G5m
ಇದಕ್ಕೂ ಮುನ್ನ ಹರಿಯಾಣ ಸರ್ಕಾರ 6 ಕೋಟಿ ರೂ, ಮಣಿಪುರ ಸರ್ಕಾರ ಒಂದು ಕೋಟಿ ರೂ, ಬಿಸಿಸಿಐ ಒಂದು ಕೋಟಿ ರೂ ಹಾಗೂ ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಕಂಪನಿಯ XUV 700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿ ನೀರಜ್ ಚೋಪ್ರಾ ಸಾಧನೆಗೆ ಗೌರವ ಸಮರ್ಪಿಸಿದ್ದಾರೆ.
ನೀರಜ್ ಚೋಪ್ರಾ ಶನಿವಾರ ನಡೆದ ಜಾವಲಿನ್ ಥ್ರೋ ಫೈನಲ್ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 87.03 ಎಸೆದು ಪದಕ ಖಚಿತಪಡಿಸಿಕೊಂಡರು. ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದು ಚಿನ್ನದ ಪದಕ ಪಡೆದರು. ಇದು ಭಾರತೀಯ ಕ್ರೀಡಾಪಟು ವೈಯಕ್ತಿಕ ವಿಭಾಗದಲ್ಲಿ ಪಡೆದ 2ನೇ ಚಿನ್ನದ ಪದಕ ಮತ್ತು ಅಥ್ಲೆಟಿಕ್ಸ್ನಲ್ಲಿ ಪಡೆದ ಮೊದಲ ಚಿನ್ನದ ಪದಕವಾಗಿದೆ.
ಇದನ್ನು ಓದಿ:ಕಾರಿನಿಂದ ಕ್ಯಾಷ್‌ಪ್ರೈಸ್‌ವರೆಗೂ.. ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆ..