ಮುಂಬೈ: ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಆಟದ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಬ್ರಿಯಾನ್ ಲಾರಾ ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಆಟಗಾರರು ಇಂಡಿಯನ್ ಟೀಮ್ಗೆ ಆಯ್ಕೆಯಾಗುವ ಒತ್ತಡದಲ್ಲಿದ್ದಾರೆ ಅಥವಾ ಅವರ ಗೆಲುವಿನ ಹಸಿವು ( ಗೆಲುವಿಗಾಗಿ ಇರಬೇಕಾದ ಉತ್ಸಾಹ ತೋರುತ್ತಿಲ್ಲ) ಮುಗಿದಿರಬೇಕು ಎಂದು ಹೇಳಿದ್ದಾರೆ.
ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿರುವುದು ನಿಜ. ಆದರೆ, ಇಶಾನ್ ಕಿಶಾನ್ನನ್ನು ಕೈಬಿಟ್ಟ ನಂತರ ಸೂರ್ಯಕುಮಾರ್ ಅವರ ಕಳಪೆ ಪ್ರದರ್ಶನ ಮುಂದುವರೆಯಿತು ಎಂದಿದ್ದಾರೆ.
ಇಬ್ಬರೂ ಕ್ರಿಕೆಟಿಗರು ಈ ವರ್ಷ ಅಕ್ಟೋಬರ್ - ನವೆಂಬರ್‌ನಲ್ಲಿ ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಭಾರತದ ಐಸಿಸಿ ಟಿ-20 ವಿಶ್ವಕಪ್ ತಂಡದ ಭಾಗವಾಗಿದ್ದಾರೆ.
ಇದನ್ನೂ ಓದಿ: ಐಪಿಎಲ್ 2021: ಆರ್‌ಆರ್ ವಿರುದ್ಧ ಆರ್‌ಸಿಬಿಗೆ 7 ವಿಕೆಟ್‌ಗಳ ಭರ್ಜರಿ ಗೆಲುವು
ಇಂಡಿಯನ್ ಟೀಮ್ಗೆ ಆಯ್ಕೆಯಾಗುವ ಒತ್ತಡ ಆಟದ ಮೇಲೆ ಪರಿಣಾಮ ಬೀರಬಹುದು, ನಿರಾಶಾದಾಯಕವಾಗಬಹುದು ಎಂದು ಮಂಗಳವಾರ ಬ್ರಿಯಾನ್ ಲಾರಾ ತಿಳಿಸಿದ್ದಾರೆ. ಸೌರಭ್ ತಿವಾರಿಯನ್ನು ನೋಡಿದರೆ ಅವರು ಸೂರ್ಯಕುಮಾರ್ ಮತ್ತು ಇಶಾನ್ ಗಿಂತ ಅಧಿಕ ರನ್ ಗಳಿಸಲು ಹೆಚ್ಚು ಉತ್ಸಾಹ ತೋರಿದ್ದಾರೆ ಎಂದು ಶಹಬ್ಬಾಶ್ಗಿರಿ ಕೊಟ್ಟರು.
ಇನ್ನು ಸೌರಭ್ 37 ಎಸೆತಗಳಲ್ಲಿ 45 ರನ್ ಗಳಿಸಿ ಉತ್ತಮ ಸ್ಕೋರ್ ಮಾಡಿದರು. ಅಷ್ಟೇ ಅಲ್ಲ ಮಂಗಳವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುರಿ ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಲಾರಾ ಹೇಳಿದರು.
ಸೂರ್ಯಕುಮಾರ್ ಮತ್ತು ಇಶಾನ್ ಇನ್ನೂ ಹೆಚ್ಚು ವೃತ್ತಿಪರರಾಗಿರಬೇಕು ಮತ್ತು ಅವರ ತಂಡವು ಪಂದ್ಯ ಗೆಲ್ಲಲು ಸಹಾಯ ಮಾಡುವಂತಿರಬೇಕು. ಸದ್ಯಕ್ಕೆ ಅವರು ತಮ್ಮ ತಂಡವನ್ನು ಟೂರ್ನಿಯಲ್ಲಿ ಜಯದ ಹಳಿಗೆ ಮರಳಿ ತರುವುದು ಹೇಗೆ ಎಂಬುದರ ಕುರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.