ಚೆನ್ನೈ(ತಮಿಳುನಾಡು): ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅದರಲ್ಲೂ ಬೌಲರ್ಗಳ ಆಟದ ಬಗ್ಗೆ ಚಕಾರ ಎತ್ತಿದ್ದಾರೆ.
ಬೌಲರ್‌ಗಳು ನೋ ಬಾಲ್ ಮತ್ತು ಕಡಿಮೆ ವೈಡ್‌ಗಳನ್ನು ಎಸೆಯಬೇಕು ಎಂದು ಎಚ್ಚರಿಕೆ ನೀಡಿದ ಅವರು, ಇದು ಮುಂದುವರಿದರೆ ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ. ತವರಿನಲ್ಲಿ ನಡೆದ ಪಂದ್ಯದಲ್ಲಿ 12 ರನ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ಅನ್ನು ಸೋಲಿಸಿತು. ಆದರೆ, ತಂಡ 3 ನೋ ಬಾಲ್‌ಗಳು ಮತ್ತು 13 ವೈಡ್‌ಗಳನ್ನು ಬೌಲ್ ಮಾಡಿರುವುದು ಧೋನಿ ಸಿಟ್ಟಿಗೆ ಕಾರಣವಾಗಿದೆ.
ಆಟ ಮುಗಿದ ಬಳಿಕ ಮಾತನಾಡಿದ ಸಿಎಸ್ಕೆ ತಂಡದ ನಾಯಕ, ನೋ ಬಾಲ್ ಮತ್ತು ಕಡಿಮೆ ವೈಡ್‌ಗಳನ್ನು ಬೌಲ್ ಮಾಡಿ, ಹೆಚ್ಚುವರಿ ಎಸೆತಗಳನ್ನು ಹಾಕುತ್ತಿದ್ದೇವೆ. ಅವುಗಳನ್ನು ಕಡಿತಗೊಳಿಸಬೇಕಾಗಿದೆ. ಇಲ್ಲದಿದ್ದರೆ ಆಟದ ಮೇಲೆ ಪರಿಣಾಮ ಬೀರಲಿದೆ. ಇದು ಮುಂದುವರಿಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಿಚ್ ಬಗ್ಗೆ ಅಚ್ಚರಿ: ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು 200 ಕ್ಕೂ ಅಧಿಕ ಮೊತ್ತ ಪೇರಿಸಿದೆವು. ಇದು ಪಿಚ್ ಬಗ್ಗೆ ನನ್ನಲ್ಲಿ ಅಚ್ಚರಿ ಉಂಟು ಮಾಡಿತು. "ಇದೊಂದು ಸೊಗಸಾದ ಆಟ, ಹೆಚ್ಚು ಸ್ಕೋರಿಂಗ್ ಆಟವಾಗಿತ್ತು. ನಾವೆಲ್ಲರೂ ವಿಕೆಟ್ ಹೇಗೆ ಪಡೆಯುವುದು ಎಂದು ಯೋಚಿಸುತ್ತಿದ್ದೆವು. ಈ ಬಗ್ಗೆ ನಮಗೆ ಅನುಮಾನವಿದ್ದವು. ಇದೊಂದು ಪರಿಪೂರ್ಣ ಪಂದ್ಯ ಎಂದು ನಾನು ಭಾವಿಸುತ್ತೇನೆ. 5- 6 ವರ್ಷಗಳ ಬಳಿಕ ಕ್ರೀಡಾಂಗಣ ಭರ್ತಿಯಾಗಿದೆ. ಇದು ಸಂತಸದ ವಿಚಾರ ಎಂದು ಹೇಳಿದರು.
ತವರಿನಲ್ಲಿ ಮುಂದೆ 6 ಪಂದ್ಯಗಳು ನಡೆಯಲಿದ್ದು, ಅಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ, ನಾವಿಲ್ಲಿ ಉತ್ತಮ ಸ್ಕೋರ್ ಮಾಡಬಹುದು. ಆದರೆ, ವೇಗಿಗಳ ವಿಭಾಗ ಸುಧಾರಣೆ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಬೌಲ್ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ನಮ್ಮ ಆಟ ಉತ್ತಮವಾಗಿರಲಿಲ್ಲ: ಇನ್ನೊಂದೆಡೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಟಾಸ್ ಗೆದ್ದ ಬಳಿಕ ಚೆನ್ನೈ ಬ್ಯಾಟಿಂಗ್ಗೆ ಆಹ್ವಾನಿಸಿ ಮೇಲುಗೈ ಸಾಧಿಸಲಾಗಲಿಲ್ಲ. ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆರಂಭ ಕಳಪೆಯಾಗಿತ್ತು. ಎದುರಾಳಿ ತಂಡದಲ್ಲಿ ಗುಣಮಟ್ಟದ ಬ್ಯಾಟರ್‌ಗಳು ಇದ್ದರೆ, ಅವರನ್ನು ಕಟ್ಟಿ ಹಾಕುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.
ಹೊಸ ಪಿಚ್ನಲ್ಲಿ ಬೌಲ್ ಮಾಡುವಾಗ ಉತ್ತಮ ವೇಗ ಮತ್ತು ಲೈನ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಡೆವೊನ್ ಕಾನ್ವೇ ಮತ್ತು ಋತುರಾಜ್ ಗಾಯಕ್ವಾಡ್ ಅದ್ಭುತವಾಗಿ ಆಡಿದರು. ಈ ಸೋಲು ಪಾಠ ಕಲಿಯಲು ಉತ್ತಮವಾಗಿದೆ. ಬ್ಯಾಟಿಂಗ್ ವೇಳೆ 6 ಓವರ್‌ಗಳಲ್ಲಿ 70 ರನ್ ನೀಡುವುದು ಪಂದ್ಯದ ಕೊನೆಯಲ್ಲಿ ಇದು ದುಬಾರಿಯಾಗುತ್ತದೆ ಎಂದು ಹೇಳಿದರು.
"ಕೈಲ್ ಮೇಯರ್ಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಆಡಿದ ಕೆಲವು ಪಂದ್ಯಗಳನ್ನು ನೋಡಿದ್ದೇನೆ. ಅವರು ಚೆಂಡನ್ನು ಗಾಳಿಯಲ್ಲಿ ತೇಲಿಸುತ್ತಿರುತ್ತಾರೆ. ಅದೇ ಲಯದಲ್ಲಿರುವುದು ತಂಡಕ್ಕೆ ಒಳ್ಳೆಯದು. ಕಳೆದ ಪಂದ್ಯದಂತೆಯೇ ಈ ಪಂದ್ಯದಲ್ಲೂ ಅದ್ಭುತ ಹೊಡೆತಗಳನ್ನು ಬಾರಿಸಿದರು. ಸಿಕ್ಕ ಅವಕಾಶವನ್ನು ಬಳಸಿಕೊಂಡರು ಎಂದು ಹೇಳಿದರು.
ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಚೆನ್ನಾಗಿ ಆಡಿದರು. ಪಂದ್ಯವನ್ನು ಗೆಲ್ಲಲು ನಡೆಸುವ ಹೋರಾಟದಿಂದ ತಂಡ ಬಲ ಪಡೆದುಕೊಳ್ಳುತ್ತದೆ. ಇದು ತಂಡಕ್ಕೆ ಉತ್ತಮವೇ. ಇದು ಇಡೀ ಪಂದ್ಯಾವಳಿಯಲ್ಲಿ ಮುಂದುವರಿಯಬೇಕು. ಉತ್ತಮ ಆರಂಭದ ಹೊರತಾಗಿಯೂ ಕುಸಿದೆವು. ಕೆಲವೊಮ್ಮೆ ಟಿ20 ಯಲ್ಲಿ ನಮ್ಮ ಅಂದಾಜುಗಳು ಲೆಕ್ಕ ಸಿಗುವುದಿಲ್ಲ ಎಂದು ಹೇಳಿದರು.
ಓದಿ: IPL 2023: ಸೂಪರ್ ಮ್ಯಾಚ್ಗೆ ಸಾಕ್ಷಿಯಾದ ಚೆನ್ನೈ, ಧೋನಿ ಪಡೆಗೆ ಮೊದಲ ಗೆಲುವು.. ಹೋರಾಡಿ ಸೋತ ರಾಹುಲ್ ಟೀಂ