ಶಾರ್ಜಾ: ನಿರ್ಣಾಯಕ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಚೇಸಿಂಗ್ ಮಾಡಲು ನಿರ್ಧರಿಸಿದ್ದ ಕೆಕೆಆರ್, ಬಲಿಷ್ಠ ಡೆಲ್ಲಿ ತಂಡವನ್ನು ಕೇವಲ 127 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಸುನೀಲ್ ನರೈನ್ 18ಕ್ಕೆ 2, ವೆಂಕಟೇಶ್ ಅಯ್ಯರ್ 29ಕ್ಕೆ2, ಲಾಕಿ ಫರ್ಗುಸನ್ 10ಕ್ಕೆ2 ಮತ್ತು ಟಿಮ್ ಸೌಥಿ 29ಕ್ಕೆ1 ರನ್ ನೀಡಿದ ವಿಕೆಟ್ ಪಡೆದು ಡೆಲ್ಲಿ ತಂಡ ಬೃಹತ್ ಮೊತ್ತ ಕಲೆಯಾಕುವುದನ್ನು ತಡೆದರು.
ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ 39, ಸ್ಟೀವ್ ಸ್ಮಿತ್ 39 ಹಾಗೂ ಧವನ್ 24 ರನ್ಗಳಿಸಿದರು. ಇವರನ್ನು ಹೊರೆತುಪಡಿಸಿದರೇ ಉಳಿದ ಯಾವೊಬ್ಬ ಬ್ಯಾಟ್ಸ್ಮನ್ ಎರಡಂಕಿ ಮೊತ್ತ ದಾಟುವಲ್ಲಿ ವಿಫಲರಾದರು. ಅಶ್ವಿನ್ 9 ಶ್ರೇಯಸ್ ಅಯ್ಯರ್ 1, ಶಿಮ್ರಾನ್ ಹೆಟ್ಮಾಯರ್ 4, ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
-
Victory for @KKRiders! 👏👏
— IndianPremierLeague (@IPL) September 28, 2021 " class="align-text-top noRightClick twitterSection" data="
The #KKR unit return to winnings ways after beating #DelhiCapitals by three wickets. 👍 👍 #VIVOIPL #KKRvDC
Scorecard 👉 https://t.co/TVHaNsR1LN pic.twitter.com/nsR7oeMVRj
">Victory for @KKRiders! 👏👏
— IndianPremierLeague (@IPL) September 28, 2021
The #KKR unit return to winnings ways after beating #DelhiCapitals by three wickets. 👍 👍 #VIVOIPL #KKRvDC
Scorecard 👉 https://t.co/TVHaNsR1LN pic.twitter.com/nsR7oeMVRjVictory for @KKRiders! 👏👏
— IndianPremierLeague (@IPL) September 28, 2021
The #KKR unit return to winnings ways after beating #DelhiCapitals by three wickets. 👍 👍 #VIVOIPL #KKRvDC
Scorecard 👉 https://t.co/TVHaNsR1LN pic.twitter.com/nsR7oeMVRj
ಇನ್ನು 128 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ 18.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಶುಬ್ನನ್ ಗಿಲ್ 33 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್ ಸಹಿತ 30, ನಿತೀಶ್ ರಾಣಾ 27 ಎಸೆತಗಳಲ್ಲಿ ಅಜೇಯ 36 ಮತ್ತು ಸುನೀಲ್ ನರೇನ್ 10 ಎಸೆತಗಳಲ್ಲಿ 21 ರನ್ಗಳಿಸಿ ಗೆಲುವಿನ ರೂವಾರಿಗಳಾದರು . ಕೆಕೆಆರ್ ಕೂಡ ಮಧ್ಯಂತರದಲ್ಲಿ ದಿಢೀರ್ ಗಿಲ್, ಮಾರ್ಗನ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಕಳೆದುಕೊಂಡಿತಾದರೂ ರಾಣಾ ಮತ್ತು ನರೈನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಆಘಾತದಿಂದ ಪಾರು ಮಾಡಿದರಲ್ಲದೆ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಆವೇಶ್ ಖಾನ್ 13ಕ್ಕೆ 3, ಕಗಿಸೋ ರಬಾಡ 28ಕ್ಕೆ1, ಅಶ್ವಿನ್ 24ಕ್ಕೆ 2, ನಾರ್ಟ್ಜ್ 15ಕ್ಕೆ1 ವಿಕೆಟ್ ಪಡೆದು ಕೆಕೆಆರ್ ವಿರುದ್ಧ ಪ್ರಬಲ ಪೈಪೋಟಿ ನಡೆಸಿದರಾದರೂ ಗೆಲುವು ತಂದುಕೊಡಲು ವಿಫಲರಾದರು.