ETV Bharat / sports

ಕ್ರಿಕೆಟ್ ದಿಗ್ಗಜನಿಗೆ ಹೈದರಾಬಾದ್ ಮಣೆ​.. ತಂಡದ ಕೋಚ್​ ಆಗಿ ಬ್ರಿಯಾನ್ ಲಾರಾ ನೇಮಕ

author img

By

Published : Sep 3, 2022, 1:05 PM IST

ಇಂಡಿಯನ್​ ಪ್ರೀಮಿಯರ್ ಲೀಗ್​​ನ ಫ್ರಾಂಚೈಸಿ ಸನ್​​ರೈಸರ್ಸ್ ಹೈದರಾಬಾದ್​ ಮಹತ್ವದ ನಿರ್ಧಾರ ಕೈಗೊಂಡಿದ್ದು, ದಿಗ್ಗಜ ಆಟಗಾರ ಬ್ರಿಯಾನ್​ ಲಾರಾ ಅವರನ್ನು ಕೋಚ್​ ಆಗಿ ನೇಮಕ ಮಾಡಿಕೊಂಡಿದೆ.

Brian Lara SRH
Brian Lara SRH

ಹೈದರಾಬಾದ್​​: 2023ರ ಇಂಡಿಯನ್​ ಪ್ರೀಮಿಯರ್​​ಗೋಸ್ಕರ ಕೆಲವೊಂದು ಫ್ರಾಂಚೈಸಿ ಮಹತ್ವದ ನಿರ್ಧಾರ ಕೈಗೊಳ್ಳುತ್ತಿವೆ. ಇದರ ಮುಂದುವರೆದ ಭಾಗವಾಗಿ ಸನ್​​ರೈಸರ್ಸ್ ಹೈದರಾಬಾದ್​ ತಂಡ ಕೂಡ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ತಂಡದ ಮುಖ್ಯ ಕೋಚ್​​​ ಆಗಿ ಕ್ರಿಕೆಟ್​ ದಿಗ್ಗಜ ಬ್ರಿಯಾನ್​ ಲಾರಾ ಅವರನ್ನು ನೇಮಕ ಮಾಡಿಕೊಂಡಿದೆ.

2023ರ ಐಪಿಎಲ್​​​ಗೋಸ್ಕರ ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಮ್ಮ ಕೋಚ್​ ಬದಲಾವಣೆ ಮಾಡಿದ್ದು, ಆ ಪಟ್ಟಿಗೆ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಕೂಡ ಸೇರ್ಪಡೆಯಾಗಿದೆ. ಎಸ್​ಆರ್​ಹೆಚ್ ಫ್ರಾಂಚೈಸಿ ತಂಡದ ಮುಖ್ಯ ಕೋಚ್ ಸ್ಥಾನದಿಂದ ಆಸ್ಟ್ರೇಲಿಯಾದ ಟಾಮ್ ಮೂಡಿ ಅವರನ್ನು ಕಳೆದ ಕೆಲ ದಿನಗಳ ಹಿಂದೆ ವಜಾಗೊಳಿಸಿತ್ತು. ಆ ಜಾಗಕ್ಕೆ ಇದೀಗ ವೆಸ್ಟ್​ ಇಂಡೀಸ್​​ನ ದಿಗ್ಗಜ ಆಟಗಾರನಿಗೆ ಮಣೆ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.

As his term with us draws to an end, we would like thank Tom for his contributions to SRH. It has been a much cherished journey over the years, and we wish him the very best for future endeavours. pic.twitter.com/aGKmNuZmq8

— SunRisers Hyderabad (@SunRisers) September 3, 2022 " class="align-text-top noRightClick twitterSection" data=" ">

ಕಳೆದ ಸೀಸನ್​​​ನಲ್ಲಿ ಸನ್​​ರೈಸರ್ಸ್ ತಂಡದ ಸಲಹೆಗಾರ ಹಾಗೂ ಬ್ಯಾಟಿಂಗ್​ ಕೋಚ್​ ಆಗಿ ಲಾರಾ ಕೆಲಸ ಮಾಡಿದ್ದರು. 2013 ರಿಂದ 2019ರವರೆಗೆ ಬಲಿಷ್ಠ ತಂಡ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಟಾಮ್​ ಮೂಡಿ, 2016ರಲ್ಲಿ ಹೈದರಾಬಾದ್ ತಂಡವನ್ನ ಚಾಂಪಿಯನ್​​ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ 2019ರಲ್ಲಿ ತಮ್ಮ ಕೋಚ್​ ಸ್ಥಾನ ತ್ಯಜಿಸಿದ್ದರು.ಆದರೆ, 2021 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಟಾಮ್ ಮೂಡಿ ಅವರನ್ನು ಮತ್ತೆ ಕರೆಸಿಕೊಂಡಿತು. ಆದರೆ, 2022 ಐಪಿಎಲ್​ ಬಳಿಕ ಅವರನ್ನ ಕೋಚ್​​ ಸ್ಥಾನದಿಂದ ವಜಾ ಮಾಡಿತ್ತು. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಬ್ರಿಯಾನ್​ ಲಾರಾ ವೆಸ್ಟ್​ ಇಂಡೀಸ್​ ಹಾಗೂ ವಿಶ್ವ ಕಂಡಿರುವ ಅಪ್ರತಿಮ ಬ್ಯಾಟಿಂಗ್​ ದಿಗ್ಗಜರಾಗಿದ್ದು, ತಂಡದ ಪರ 131 ಟೆಸ್ಟ್​ ಹಾಗೂ 299 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಇದನ್ನೂ ಓದಿ: ದೇಶಿ ಪ್ರತಿಭೆಗೆ ಕೆಕೆಆರ್ ಮಣೆ: ತಂಡದ ಮುಖ್ಯ ಕೋಚ್​ ಆಗಿ ಚಂದ್ರಕಾಂತ್ ಪಂಡಿತ್​ ನೇಮಕ

2022ರ ಆವೃತ್ತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಪ್ರದರ್ಶನ ನೀಡಿತ್ತು. ತಾನು ಆಡಿದ 14 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಗೆಲುವು ದಾಖಲು ಮಾಡಿ ಅಭಿಯಾನ ಮುಕ್ತಾಯ ಮಾಡಿತ್ತು. ಮುಂದಿನ ಆವೃತ್ತಿ ಐಪಿಎಲ್​​ 2023ರ ಜನವರಿಯಲ್ಲಿ ನಡೆಯಲಿದೆ. ಈಗಾಗಲೇ ಪಂಜಾಬ್ ತಂಡ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನ ಕೋಚ್​ ಸ್ಥಾನದಿಂದ ಕೆಳಗಿಳಿಸಿದ್ದು, ಕೋಲ್ಕತ್ತಾ ನೈಟ್​ ರೈಡರ್ಸ್​​​ ಬ್ರೆಂಡಮ್ ಮೆಕಲಂ ಅವರ ಸ್ಥಾನಕ್ಕೆ ದೇಶಿ ಪ್ರತಿಭೆ ಚಂದ್ರಕಾಂತ್ ಪಂಡಿತ್ ಅವರಿಗೆ ಮಣೆ ಹಾಕಿದೆ.

ಹೈದರಾಬಾದ್​​: 2023ರ ಇಂಡಿಯನ್​ ಪ್ರೀಮಿಯರ್​​ಗೋಸ್ಕರ ಕೆಲವೊಂದು ಫ್ರಾಂಚೈಸಿ ಮಹತ್ವದ ನಿರ್ಧಾರ ಕೈಗೊಳ್ಳುತ್ತಿವೆ. ಇದರ ಮುಂದುವರೆದ ಭಾಗವಾಗಿ ಸನ್​​ರೈಸರ್ಸ್ ಹೈದರಾಬಾದ್​ ತಂಡ ಕೂಡ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ತಂಡದ ಮುಖ್ಯ ಕೋಚ್​​​ ಆಗಿ ಕ್ರಿಕೆಟ್​ ದಿಗ್ಗಜ ಬ್ರಿಯಾನ್​ ಲಾರಾ ಅವರನ್ನು ನೇಮಕ ಮಾಡಿಕೊಂಡಿದೆ.

2023ರ ಐಪಿಎಲ್​​​ಗೋಸ್ಕರ ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಮ್ಮ ಕೋಚ್​ ಬದಲಾವಣೆ ಮಾಡಿದ್ದು, ಆ ಪಟ್ಟಿಗೆ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಕೂಡ ಸೇರ್ಪಡೆಯಾಗಿದೆ. ಎಸ್​ಆರ್​ಹೆಚ್ ಫ್ರಾಂಚೈಸಿ ತಂಡದ ಮುಖ್ಯ ಕೋಚ್ ಸ್ಥಾನದಿಂದ ಆಸ್ಟ್ರೇಲಿಯಾದ ಟಾಮ್ ಮೂಡಿ ಅವರನ್ನು ಕಳೆದ ಕೆಲ ದಿನಗಳ ಹಿಂದೆ ವಜಾಗೊಳಿಸಿತ್ತು. ಆ ಜಾಗಕ್ಕೆ ಇದೀಗ ವೆಸ್ಟ್​ ಇಂಡೀಸ್​​ನ ದಿಗ್ಗಜ ಆಟಗಾರನಿಗೆ ಮಣೆ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.

  • As his term with us draws to an end, we would like thank Tom for his contributions to SRH. It has been a much cherished journey over the years, and we wish him the very best for future endeavours. pic.twitter.com/aGKmNuZmq8

    — SunRisers Hyderabad (@SunRisers) September 3, 2022 " class="align-text-top noRightClick twitterSection" data=" ">

ಕಳೆದ ಸೀಸನ್​​​ನಲ್ಲಿ ಸನ್​​ರೈಸರ್ಸ್ ತಂಡದ ಸಲಹೆಗಾರ ಹಾಗೂ ಬ್ಯಾಟಿಂಗ್​ ಕೋಚ್​ ಆಗಿ ಲಾರಾ ಕೆಲಸ ಮಾಡಿದ್ದರು. 2013 ರಿಂದ 2019ರವರೆಗೆ ಬಲಿಷ್ಠ ತಂಡ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಟಾಮ್​ ಮೂಡಿ, 2016ರಲ್ಲಿ ಹೈದರಾಬಾದ್ ತಂಡವನ್ನ ಚಾಂಪಿಯನ್​​ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ 2019ರಲ್ಲಿ ತಮ್ಮ ಕೋಚ್​ ಸ್ಥಾನ ತ್ಯಜಿಸಿದ್ದರು.ಆದರೆ, 2021 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಟಾಮ್ ಮೂಡಿ ಅವರನ್ನು ಮತ್ತೆ ಕರೆಸಿಕೊಂಡಿತು. ಆದರೆ, 2022 ಐಪಿಎಲ್​ ಬಳಿಕ ಅವರನ್ನ ಕೋಚ್​​ ಸ್ಥಾನದಿಂದ ವಜಾ ಮಾಡಿತ್ತು. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಬ್ರಿಯಾನ್​ ಲಾರಾ ವೆಸ್ಟ್​ ಇಂಡೀಸ್​ ಹಾಗೂ ವಿಶ್ವ ಕಂಡಿರುವ ಅಪ್ರತಿಮ ಬ್ಯಾಟಿಂಗ್​ ದಿಗ್ಗಜರಾಗಿದ್ದು, ತಂಡದ ಪರ 131 ಟೆಸ್ಟ್​ ಹಾಗೂ 299 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಇದನ್ನೂ ಓದಿ: ದೇಶಿ ಪ್ರತಿಭೆಗೆ ಕೆಕೆಆರ್ ಮಣೆ: ತಂಡದ ಮುಖ್ಯ ಕೋಚ್​ ಆಗಿ ಚಂದ್ರಕಾಂತ್ ಪಂಡಿತ್​ ನೇಮಕ

2022ರ ಆವೃತ್ತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಪ್ರದರ್ಶನ ನೀಡಿತ್ತು. ತಾನು ಆಡಿದ 14 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಗೆಲುವು ದಾಖಲು ಮಾಡಿ ಅಭಿಯಾನ ಮುಕ್ತಾಯ ಮಾಡಿತ್ತು. ಮುಂದಿನ ಆವೃತ್ತಿ ಐಪಿಎಲ್​​ 2023ರ ಜನವರಿಯಲ್ಲಿ ನಡೆಯಲಿದೆ. ಈಗಾಗಲೇ ಪಂಜಾಬ್ ತಂಡ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನ ಕೋಚ್​ ಸ್ಥಾನದಿಂದ ಕೆಳಗಿಳಿಸಿದ್ದು, ಕೋಲ್ಕತ್ತಾ ನೈಟ್​ ರೈಡರ್ಸ್​​​ ಬ್ರೆಂಡಮ್ ಮೆಕಲಂ ಅವರ ಸ್ಥಾನಕ್ಕೆ ದೇಶಿ ಪ್ರತಿಭೆ ಚಂದ್ರಕಾಂತ್ ಪಂಡಿತ್ ಅವರಿಗೆ ಮಣೆ ಹಾಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.