ETV Bharat / sports

IPL Auction : ಆಲ್​ರೌಂಡರ್ಸ್​ಗೆ ಭಾರಿ ಬೇಡಿಕೆ.. ಕೋಟಿ ಕೋಟಿ ಬಾಚಿದ ಕೃನಾಲ್​, ಸುಂದರ್, ಹಸರಂಗ - ದೀಪಕ್​ ಹೂಡ

ಭಾರತ ತಂಡದ ವಾಷಿಂಗ್ಟನ್​ ಸುಂದರ್ ಅವರನ್ನು 8.25 ಕೋಟಿ ರೂ. ನೀಡಿ ಸನ್​ ರೈಸರ್ಸ್ ಹೈದರಾಬಾದ್​, ಶ್ರೀಲಂಕಾದ ವನಿಡು ಹಸರಂಗಾ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ₹10.75 ಕೋಟಿ ನೀಡಿ ಖರೀದಿಸಿದೆ..

IPL Auction: Some most Expensive All-rounders here
IPL Auction: ಆಲ್​ರೌಂಡರ್ಸ್​ಗೆ ಭಾರಿ ಬೇಡಿಕೆ... ಕೋಟಿ ಕೋಟಿ ಬಾಚಿದ ಕೃನಾಲ್​, ಸುಂದರ್, ಹಸರಂಗ
author img

By

Published : Feb 12, 2022, 5:11 PM IST

ಬೆಂಗಳೂರು : 2022ರ ಮೆಗಾ ಹರಾಜಿನಲ್ಲಿ ಆಲ್​ರೌಂಡರ್​ಗಳಿಗೆ ಫ್ರಾಂಚೈಸಿಗಳು ಮಣೆ ಹಾಕುತ್ತಿದ್ದು, ಕೋಟಿ ಕೋಟಿ ನೀಡಿ ಖರೀದಿಸುತ್ತಿದ್ದಾರೆ. ಭಾರತ ತಂಡದ ವಾಷಿಂಗ್ಟನ್​ ಸುಂದರ್ ಅವರನ್ನು 8.25 ಕೋಟಿ ರೂ. ನೀಡಿ ಸನ್‌ ರೈಸರ್ಸ್ ಹೈದರಾಬಾದ್​, ಶ್ರೀಲಂಕಾದ ವನಿಡು ಹಸರಂಗಾ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 10.75 ಕೋಟಿ ರೂ. ನೀಡಿ ಖರೀದಿಸಿದೆ.

ಭಾರತ ತಂಡದಿಂದ ಹೊರ ಬಿದ್ದಿರುವ ಕೃನಾಲ್ ಪಾಂಡ್ಯರನ್ನು ಕೆ ಎಲ್ ರಾಹುಲ್ ನಾಯಕತ್ವದ ಲಖನೌ ಫ್ರಾಂಚೈಸಿ 8.25 ಕೋಟಿ ರೂ.ಗೆ ಖರೀದಿಸಿದೆ. ಆಶ್ಚರ್ಯಕರ ಸಂಗತಿಯೆಂದರೆ ಬರೋಡಾ ತಂಡದಲ್ಲಿದ್ದ ವೇಳೆ ಪಾಂಡ್ಯರೊಂದಿಗೆ ಜಗಳವಾಡಿ ತಂಡವನ್ನು ತ್ಯಜಿಸಿ ರಾಜಸ್ಥಾನ್​ ತಂಡ ಸೇರಿದ್ದ ದೀಪಕ್​ ಹೂಡಾರನ್ನು ಕೂಡ 5.75 ಕೋಟಿ ರೂ.ಗೆ ಖರೀದಿಸಿದೆ.

ಆಸ್ಟ್ರೇಲಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಹಾಗೂ 2021-22ರ ಬಿಗ್​ ಬ್ಯಾಶ್​ ಲೀಗ್​ನಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದ ಆಲ್​ರೌಂಡರ್​ ಮಿಚೆಲ್ ಮಾರ್ಷ್​ರನ್ನು ಡೆಲ್ಲಿ ಕ್ಯಾಪಿಟಲ್ಸ್ 6.5 ಕೋಟಿ ರೂ. ನೀಡಿ ಖರೀದಿಸಿದೆ.

ಇದನ್ನೂ ಓದಿ: ರೈನಾ, ಸ್ಟೀವ್​ ಸ್ಮಿತ್ ಸೇರಿದಂತೆ ಅನ್​ಸೋಲ್ಡ್ ಆದ ಸ್ಟಾರ್​ ಕ್ರಿಕೆಟಿಗರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.