ETV Bharat / sports

ಕೆರಿಬಿಯನ್ ಕ್ರಿಕೆಟಿಗನಿಗೆ 16 ಕೋಟಿ ರೂ! ಕೆ.ಎಲ್‌ ರಾಹುಲ್‌ ತಂಡದಲ್ಲಿ ಪೂರನ್ ಆಟ - ಕೆರಿಬಿಯನ್ ಆಟಗಾರ ಪೂರನ್

ಈ ಹಿಂದಿನ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ 10.75 ಕೋಟಿ ರೂ.ಗೆ ಮಾರಾಟವಾಗಿದ್ದ ವೆಸ್ಟ್​​ ಇಂಡೀಸ್​ನ ನಿಕೋಲಸ್ ಪೂರನ್ ಈ ಬಾರಿ 16 ಕೋಟಿ ರೂ.ಗೆ ಬಿಕರಿ ಆದರು.

ipl-auction-nicholas-pooran-is-sold-to-lsg-for-inr-16-crore
IPL Auction: ಕೆಎಲ್ ರಾಹುಲ್ ತಂಡ ಸೇರಿದ 16 ಕೋಟಿ ಬೆಲೆಯ ಕೆರಿಬಿಯನ್ ಆಟಗಾರ ಪೂರನ್
author img

By

Published : Dec 23, 2022, 5:24 PM IST

ಕೊಚ್ಚಿ (ಕೇರಳ): 2023ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್)​ ಹರಾಜಿನಲ್ಲಿ ವಿದೇಶಿ ಆಟಗಾರರು ಭಾರಿ ಬೆಲೆಗೆ ಮಾರಾಟವಾಗುತ್ತಿದ್ದಾರೆ. ವೆಸ್ಟ್​​ ಇಂಡೀಸ್​ನ ನಿಕೋಲಸ್ ಪೂರನ್ ಅವರನ್ನು 16 ಕೋಟಿ ರೂ. ಕೊಟ್ಟು ಲಖನೌ ಸೂಪರ್ ಜೈಂಟ್ಸ್‌ (ಎಲ್​ಎಸ್​ಜಿ) ಖರೀದಿಸಿದೆ.

ಕೊಚ್ಚಿಯಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರಲ್ಲಿ ಕೆರಿಬಿಯನ್ ವಿಕೆಟ್ ಕೀಪರ್, ಬ್ಯಾಟರ್ ನಿಕೋಲಸ್ ಪೂರನ್ ಸಹ ಒಬ್ಬರು. ಇಂಗ್ಲೆಂಡ್​ನ ಸ್ಯಾಮ್ ಕರ್ರಾನ್ ದಾಖಲೆಯ 18.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್‌ ತಂಡದ ಪಾಲಾಗಿದ್ದರೆ, ಆಸ್ಟ್ರೇಲಿಯಾದ ಕ್ಯಾಮರಾನ್ ಗ್ರೀನ್ ಅವರನ್ನು 17.5 ಕೋಟಿ ರೂ ಕೊಟ್ಟು ಮುಂಬೈ ಇಂಡಿಯನ್ಸ್​​ ತಂಡ ಖರೀದಿಸಿದೆ.

ಇದನ್ನೂ ಓದಿ: IPL ಹರಾಜು: ಸ್ಯಾಮ್‌ ಕರ್ರಾನ್‌ಗೆ ₹18 ಕೋಟಿ ಕೊಟ್ಟ ಪಂಜಾಬ್‌! ಚೆನ್ನೈ ತಂಡಕ್ಕೆ ಬೆನ್‌ ಸ್ಟೋಕ್ಸ್‌

ಬೆನ್ ಸ್ಟೋಕ್ಸ್ 16.25 ಕೋಟಿ ರೂಪಾಯಿಗೆ ಚೆನ್ನೈ ಫ್ರಾಂಚೈಸಿ ಸೇರಿಕೊಂಡಿದ್ದಾರೆ. ನಿಕೋಲಸ್ ಪೂರನ್ ಸಹ ದಾಖಲೆಯ ಬೆಲೆಗೆ ಮಾರಾಟವಾಗಿದ್ದಾರೆ. ಆರಂಭದಲ್ಲಿ ಚೆನ್ನೈ, ಆರ್​ಆರ್​ ಮತ್ತು ದೆಹಲಿ ತಂಡಗಳು ಪೂರನ್ ಮೇಲೆ ಕಣ್ಣಿಟ್ಟಿದ್ದವು. ಆದರೆ, ಲಖನೌ ಸೂಪರ್ ಜೈಂಟ್ಸ್‌ 7.5 ಕೋಟಿ ರೂ. ಬೃಹತ್ ಬಿಡ್ ಮಾಡಿತು. ಬಿಡ್‌ 16 ಕೋಟಿ ರೂ.ಗೆ ತಲುಪಿದ ನಂತರ ದೆಹಲಿ ಬಿಡ್ಡಿಂಗ್ ರೇಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿತು.

ಅಂತೆಯೇ ಪೂರನ್ ಅವರನ್ನು ಲಖನೌ ತಂಡ 16 ಕೋಟಿ ರೂ.ಗೆ ಖರೀದಿ ಮಾಡಿತು. ಹಿಂದಿನ ಆವೃತ್ತಿಯ ಹರಾಜಿನಲ್ಲಿ ಪೂರನ್​ 10.75 ಕೋಟಿ ರೂ.ಗೆ ಮಾರಾಟವಾಗಿದ್ದರು. ಇವರು ಮುಂದಿನ ಆವೃತ್ತಿಯಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಎಲ್​ಎಸ್​ಜಿ ಪರ ಆಡಲಿದ್ದಾರೆ. ಐಪಿಎಲ್​ ಹರಾಜಿನಲ್ಲಿ ನಿಕೋಲಸ್ ಪೂರನ್ ಮೂಲ ಬೆಲೆ 2 ಕೋಟಿ ರೂ ಇತ್ತು.

ಇದನ್ನೂ ಓದಿ: ₹18.5 ಕೋಟಿ! ಐಪಿಎಲ್​ ಟೂರ್ನಿ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಸ್ಯಾಮ್ ಕರ್ರಾನ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.