ದುಬೈ: ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾಗಿ ಆಡುತ್ತಿದ್ದ ಹರ್ಷಲ್ ಪಟೇಲ್ ಈ ಬಾರಿ ದೊಡ್ಡ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. 2024ರ ಮಿನಿ ಹರಾಜಿನಲ್ಲಿ ಪಟೇಲ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಅದರಂತೆ ಹರ್ಷಲ್ ಪಟೇಲ್ 11.75 ಕೋಟಿಗೆ ಬಿಕರಿ ಆಗಿದ್ದಾರೆ.
-
The Punjab Kings have a valuable buy in the form of Harshal Patel for a whopping price of INR 11.75 Crore 🔥🔥#IPLAuction | #IPL pic.twitter.com/YNyDPOzaQk
— IndianPremierLeague (@IPL) December 19, 2023 " class="align-text-top noRightClick twitterSection" data="
">The Punjab Kings have a valuable buy in the form of Harshal Patel for a whopping price of INR 11.75 Crore 🔥🔥#IPLAuction | #IPL pic.twitter.com/YNyDPOzaQk
— IndianPremierLeague (@IPL) December 19, 2023The Punjab Kings have a valuable buy in the form of Harshal Patel for a whopping price of INR 11.75 Crore 🔥🔥#IPLAuction | #IPL pic.twitter.com/YNyDPOzaQk
— IndianPremierLeague (@IPL) December 19, 2023
33 ವರ್ಷದ ಹರ್ಷಲ್ ಪಟೇಲ್ ಡೆತ್ ಓವರ್ ಸ್ಪೆಷಲಿಸ್ಟ್ ಮತ್ತು ಅವರು ದೇಶೀಯ ಟೂರ್ನಿಗಳಲ್ಲಿ ಹರಿಯಾಣ ಪರ ಆಡುತ್ತಾರೆ. ಎರಡು ಕೋಟಿ ಮೂಲ ಬೆಲೆಯೊಂದಿಗೆ ಬಿಡ್ ಪ್ರವೇಶಿಸಿದ್ದರು. 2023ರ ಐಪಿಎಲ್ ಆವೃತ್ತಿಯಲ್ಲಿ ಹರ್ಷಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದಲ್ಲಿ ಆಡಿದ್ದರು. 16ನೇ ಆವೃತ್ತಿ ಐಪಿಎಲ್ನಲ್ಲಿ 9.66ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ಅವರು, ಕೇವಲ 14 ವಿಕೆಟ್ ಕಬಳಿಸಿದ್ದರು. ಇದರಿಂದ ಆರ್ಸಿಬಿ ಅವರನ್ನು ಈ ವರ್ಷ ಕೈಬಿಟ್ಟಿತ್ತು.
-
Started off with a base price of INR 2 Crore and SOLD to @SunRisers 🧡 for INR 6.8 Crore 💰#SRH fans, what do you make of this purchase❓#IPLAuction | #IPL pic.twitter.com/yskMiiGotb
— IndianPremierLeague (@IPL) December 19, 2023 " class="align-text-top noRightClick twitterSection" data="
">Started off with a base price of INR 2 Crore and SOLD to @SunRisers 🧡 for INR 6.8 Crore 💰#SRH fans, what do you make of this purchase❓#IPLAuction | #IPL pic.twitter.com/yskMiiGotb
— IndianPremierLeague (@IPL) December 19, 2023Started off with a base price of INR 2 Crore and SOLD to @SunRisers 🧡 for INR 6.8 Crore 💰#SRH fans, what do you make of this purchase❓#IPLAuction | #IPL pic.twitter.com/yskMiiGotb
— IndianPremierLeague (@IPL) December 19, 2023
ಬಲಗೈ ವೇಗಿ ಹರ್ಷಲ್ ಪಟೇಲ್ ಅವರು ಟಿ20 ಪಂದ್ಯಗಳಲ್ಲಿ ಡೆತ್ ಓವರ್‌ಗಳಲ್ಲಿ ನಿಧಾನಗತಿಯ ಎಸೆತಗಳಿಗೆ ಹೆಸರುವಾಸಿಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಕ್ಕೆ ಪ್ರಮುಖ ಕಾರಣರಾಗಿದ್ದರು. ಆ ಆವೃತ್ತಿಯಲ್ಲಿ 32 ವಿಕೆಟ್ ಪಡೆದಿದ್ದರು. ಹೀಗಾಗಿ ಅವರನ್ನು 'ಪರ್ಪಲ್ ಪಟೇಲ್' ಎಂಬ ಅಡ್ಡ ಹೆಸರಿನಿಂದ ಕರೆಯಲಾಗಿತ್ತು.
ಹೆಡ್ಗೆ 6.80 ಕೋಟಿ: ವಿಶ್ವಕಪ್ ಫೈನಲ್‌ನಲ್ಲಿ ಬಿರುಸಿನ ಶತಕ ಸಿಡಿಸಿದ್ದ ಆಸ್ಟ್ರೇಲಿಯದ ಗೆಲುವಿಗೆ ಪ್ರಮುಖ ಕಾರಣರಾಗಿರುವ ಟ್ರಾವಿಸ್ ಹೆಡ್ ಮಿನಿ ಹರಾಜಿನಲ್ಲಿ 6.80 ಕೋಟಿ ರೂ.ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು. 2 ಕೋಟಿ ಮೂಲ ಬೆಲೆ ಹೊಂದಿದ್ದ 29 ವರ್ಷದ ಆಸ್ಟ್ರೇಲಿಯಾದ ಆರಂಭಿಕ ಆಟಗಾರನಿಗೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಉತ್ಸಾಹ ತೋರಿದರು. ಬಿಡ್ 6.50 ದಾಟುತ್ತಿದ್ದಂತೆ ಚೆನ್ನೈ ತಂಡ ಹಿಂದೆ ಸರಿಯಿತು. ಇದರಿಂದ ಹೆಡ್ ಎಸ್ಆರ್ಹೆಚ್ ಪಾಲಾದರು.
-
Yellove is where the heart is! 💛 pic.twitter.com/zt3ICTZK83
— Chennai Super Kings (@ChennaiIPL) December 19, 2023 " class="align-text-top noRightClick twitterSection" data="
">Yellove is where the heart is! 💛 pic.twitter.com/zt3ICTZK83
— Chennai Super Kings (@ChennaiIPL) December 19, 2023Yellove is where the heart is! 💛 pic.twitter.com/zt3ICTZK83
— Chennai Super Kings (@ChennaiIPL) December 19, 2023
ಚೆನ್ನೈ ಪಾಲಾದ ಶಾರ್ದೂಲ್: ಆಲ್ರೌಂಡರ್ಗಳ ಬಿಡ್ನಲ್ಲಿ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುವ ಭಾರತದ ಆಟಗಾರ ಎಂಬ ನಿರೀಕ್ಷೆ ಹುಟ್ಟುಹಾಕಿದ್ದ ಶಾರ್ದೂಲ್ ಠಾಕೂರ್ 4.00 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಶಾರ್ದೂಲ್ ಠಾಕೂರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು. ಬಿಡ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪೈಪೋಟಿ ಏರ್ಪಟ್ಟಿತು. 2 ಕೋಟಿ ಮೂಲ ಬೆಲೆಯ ಆಟಗಾರ ದೊಡ್ಡ ಬಿಡ್ಗೆ ಹೋಗದಿದ್ದರೂ, 4 ಕೋಟಿಗೆ ಮತ್ತೆ ತಮ್ಮ ಹಳೆಯ ತಂಡವನ್ನು ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಗೆದ್ದ ನಾಯಕ ಪ್ಯಾಟ್ ಕಮಿನ್ಸ್ಗೆ ಐತಿಹಾಸಿಕ ಬಿಡ್: 20.5 ಕೋಟಿ ನೀಡಿ ಖರೀದಿಸಿದ ಎಸ್ಆರ್ಹೆಚ್