ಚೆನ್ನೈ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಭಾರತದಲ್ಲೇ ಆಯೋಜಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಖಚಿತಪಡಿಸಿದ್ದಾರೆ. ಕೋವಿಡ್-19 ಭೀತಿಯಿಂದ 2020 ಮತ್ತು 2021ರ ಎರಡನೇ ಭಾಗ ಯುಎಇಯಲ್ಲಿ ಆಯೋಜಿಸಲಾಗಿತ್ತು.
2022ರ ಆವೃತ್ತಿಯಲ್ಲಿ 2 ಹೊಸ ತಂಡಗಳಾದ ಅಹ್ಮದಾಬಾದ್ ಮತ್ತು ಲಕ್ನೋ ಭಾಗವಹಿಸಲಿದ್ದು, ಫೆಬ್ರವರಿಯಲ್ಲಿ ಮೆಗಾ ಹರಾಜು ನಡೆಯಲಿದ್ದು, ಟೂರ್ನಮೆಂಟ್ ಹಿಂದಿನ ಆವೃತ್ತಿಗಳಿಗಿಂತಲೂ ರೋಚಕವಾಗಿ ಕೂಡಿರಲಿದೆ.
ಚೆನ್ನೈನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರೂ, "ನೀವೆಲ್ಲರೂ ಚೆಪಾಕ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡುವುದನ್ನ ನೋಡಲು ಎದುರು ನೋಡುತ್ತಿದ್ದೀರಾ ಎಂಬುದು ನನಗೆ ಗೊತ್ತಿಗೆ. ಆ ಕ್ಷಣ ದೂರ ಉಳಿದಿಲ್ಲ. 15ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆ" ಎಂದು ಶಾ ಹೇಳಿದ್ದಾರೆ.
ಈಗಾಗಲೇ ಬಿಸಿಸಿಐ 2022ರ ಐಪಿಎಲ್ಗೆ ರೀಟೈನ್ ಪಾಲಿಸಿಯನ್ನು ಘೋಷಿಸಿದೆ. ಹಳೆಯ 8 ತಂಡಗಳು ಒಟ್ಟು 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು.
ಅದರೂ 3 ದೇಶಿ ಮತ್ತು ಒಬ್ಬ ವಿದೇಶಿ ಆಟಗಾರ ಆಥವಾ ತಲಾ ಇಬ್ಬರು ದೇಶಿ ಮತ್ತು ವಿದೇಶಿ ಆಟಗಾರರನ್ನು ರೀಟೈನ್ ಮಾಡಿಕೊಳ್ಳುವುದಕ್ಕೆ ಘೋಷಿಸಿದೆ. ಇನ್ನು, ಹೊಸ ಎರಡೂ ತಂಡಗಳು ಮೂವರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ನಮ್ಮ ಪಾಲಿನ ಆಪತ್ಪಾಂಧವ, ನಾವು ಸದಾ ನಿಮಗೆ ಚಿರಋಣಿ.. ಟ್ವೀಟ್ ಮೂಲಕ ಆರ್ಸಿಬಿಯಿಂದ 360 ಕೃತಜ್ಞತೆ..