ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ನಲ್ಲಿ ಕೋವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಏಪ್ರಿಲ್ 22ರಂದು ಪುಣೆಯಲ್ಲಿ ನಡೆಯಬೇಕಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸ್ಥಳಾಂತರ ಮಾಡಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಏಪ್ರಿಲ್ 16ರಿಂದ ಕೋವಿಡ್ 19 ಪಾಸಿಟಿವ್ ಪ್ರಕರಣ ಆರಂಭವಾಗಿದ್ದು, ಇಂದಿಗೆ ಒಟ್ಟು ಇಬ್ಬರು ಆಟಗಾರರ ಸೇರಿದಂತೆ ಒಟ್ಟು 6 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಮೊದಲ ಫಿಸಿಯೋ ಫರ್ಹಾರ್ತ್, ನಂತರ ಆಲ್ರೌಂಡರ್ ಮಿಚೆಲ್ ಮಾರ್ಷ್ ಹಾಗೂ 3 ಮಂದಿ ಬೆಂಬಲ ಸಿಬ್ಬಂದಿ, ಇದೀಗ ಕಿವೀಸ್ ಬ್ಯಾಟರ್ ಟಿಮ್ ಸೀಫರ್ಟ್ ಆ ಪಟ್ಟಿಗೆ ಸೇರಿದ್ದಾರೆ.
-
🚨UPDATE: Our game against the @DelhiCapitals will now be played at the Wankhede Stadium in Mumbai instead of Pune on 22nd April at 7.30 PM IST. pic.twitter.com/EMW1iese61
— Rajasthan Royals (@rajasthanroyals) April 20, 2022 " class="align-text-top noRightClick twitterSection" data="
">🚨UPDATE: Our game against the @DelhiCapitals will now be played at the Wankhede Stadium in Mumbai instead of Pune on 22nd April at 7.30 PM IST. pic.twitter.com/EMW1iese61
— Rajasthan Royals (@rajasthanroyals) April 20, 2022🚨UPDATE: Our game against the @DelhiCapitals will now be played at the Wankhede Stadium in Mumbai instead of Pune on 22nd April at 7.30 PM IST. pic.twitter.com/EMW1iese61
— Rajasthan Royals (@rajasthanroyals) April 20, 2022
ಈಗಾಗಲೆ ಬುಧವಾರ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂಬೈನ ಬ್ರೆಬೋರ್ನ್ನಲ್ಲಿ ನಡೆಸಲಾಗುತ್ತಿದೆ. ಶುಕ್ರವಾರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆಯಬೇಕಿರುವ ಪಂದ್ಯವನ್ನು ವಾಂಖೆಡೆಯಲ್ಲಿ ನಡೆಸಲು ಐಪಿಎಲ್ ಮಂಡಳಿ ನಿರ್ಣಯಿಸಿದೆ. ಬಸ್ನಲ್ಲಿ ದೀರ್ಘ ಪ್ರಯಾಣ ನಡೆಸುವುದರಿಂದ ಕೋವಿಡ್ 19 ವೈರಸ್ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಕೊಹ್ಲಿ ಇನ್ನೂ ಐದಾರು ವರ್ಷ ಕ್ರಿಕೆಟ್ ಆಡಬೇಕಾದ್ರೆ, ಸದ್ಯಕ್ಕೆ ಒಂದು ಬ್ರೇಕ್ ಅಗತ್ಯ: ರವಿಶಾಸ್ತ್ರಿ