ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ನ 2022ನೇ ಆವೃತ್ತಿಯನ್ನು ಭಾರತದಲ್ಲೇ ನಡೆಸಲು ಫ್ರಾಂಚೈಸಿ ಮಾಲೀಕರು ಶನಿವಾರ ನಡೆದ ಬಿಸಿಸಿಐ ಸಭೆಯಲ್ಲಿ ಸಲಹೆ ನೀಡಿದ್ದಾರೆ. 15ನೇ ಆವೃತ್ತಿಗಾಗಿ ಮುಂಬೈ ಅಥವಾ ಪುಣೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಬಿಸಿಸಿಐ ಮತ್ತು ಐಪಿಎಲ್ ಮಾಲೀಕರ ನಡುವೆ 2022ರ ಐಪಿಎಲ್ ಎಲ್ಲಿ ನಡೆಸಬೇಕೆಂಬುವುದರ ಕುರಿತು ಸಭೆ ನಡೆಸಲಾಗಿದೆ. ಇದರಲ್ಲಿ ಮುಂಬೈನಲ್ಲಿ ನಡೆಸಲು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.
"2022ರ ಐಪಿಎಲ್ ಭಾರತದಲ್ಲಿ ನಡೆಯಲಿದೆ ಮತ್ತು ಪ್ರೇಕ್ಷಕರಿಲ್ಲದೆ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. ವಾಂಖೆಡೆ ಸ್ಟೇಡಿಯಂ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ), ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂಗಳ ಸಂಭಾವ್ಯ ಸ್ಥಳಗಳಾಗಿವೆ. ಅಗತ್ಯವಾದರೆ, ನಾವು ಪುಣೆಯ ಕಡೆಗೂ ನೋಡಬಹುದು" ಎಂದು ಮೂಲಗಳು ಎಎನ್ಐಗೆ ತಿಳಿಸಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹಾಗೆಯೇ ಮಾಲೀಕರು ಕಳೆದೆರಡು ಆವೃತ್ತಿಗಳನ್ನು ಬಯೋಬಬಲ್ನಲ್ಲಿ ಯಶಸ್ವಿಯಾಗಿ ನಡೆಸಿರುವ ಯುಎಇಯನ್ನ ಎರಡನೇ ಆಯ್ಕೆಯಾಗಿ ತೆಗೆದುಕೊಳ್ಳಲು ಸಹಾ ತಿಳಿಸಿದ್ದಾರೆ ಎನ್ನಲಾಗಿದೆ.
ದಕ್ಷಿಣ ಆಫ್ರಿಕಾ ಮತ್ತೊಂದು ಆಯ್ಕೆಯಾಗಿದೆ. ಆದರೆ, ಪ್ರಸ್ತುತ ಅದನ್ನು ಆಯ್ಕೆಯಾಗಿ ನಾವು ಆಲೋಚಿಸುತ್ತಿಲ್ಲ. ಅದು ಕೊನೆಯ ಆಯ್ಕೆಯಷ್ಟೇ.. ಆದರೆ, ಪ್ರೇಕ್ಷಕರ ಪ್ರವೇಶ ಕುರಿತಂತೆ ಈಗಲೇ ಸುಲಭವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಟೂರ್ನಮೆಂಟ್ ಹತ್ತಿರವಾಗುತ್ತಿದ್ದಂತೆ ನಾವು ಅದರ ಕಡೆಗೆ ಗಮನ ಹರಿಸಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ಮೆಗಾ ಹರಾಜು: ವಾರ್ನರ್, ಅಯ್ಯರ್ ಸೇರಿದಂತೆ ದುಬಾರಿಯಾಗಬಹುದಾದ ಟಾಪ್ ಆಟಗಾರರು ಇವರೇ!