ಮುಂಬೈ: ಮೊದಲ ಗೆಲುವಿಗಾಗಿ ಹಾತೊರೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮುಖಾಮುಖಾಯಾಗುತ್ತಿದ್ದು, ಟಾಸ್ ಗೆದ್ದಿರುವ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಇಬ್ಬರು ಪದಾರ್ಪಣೆ ಮಾಡುತ್ತಿದ್ದಾರೆ. ಶಶಾಂಕ್ ಸಿಂಗ್ ಮತ್ತು ಮಾರ್ಕೊ ಜಾನ್ಸನ್ ತಂಡ ಸೇರಿಕೊಂಡಿದ್ದಾರೆ, ಶೆಫರ್ಡ್,ಸಮದ್ ಹೊರಗುಳಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಒಂದು ಬದಲಾವಣೆಯಾಗಿದ್ದು, ಪ್ರಿಟೋರಿಯಸ್ ಬದಲಾಗಿ ಮಿಸ್ಟರಿ ಸ್ಪಿನ್ನರ್ ಮಹೀಶ್ ತೀಕ್ಷಣ ಐಪಿಎಲ್ಗೆ ಪದಾರ್ಪಣೆ ಮಾಡಿದ್ದಾರೆ.
ಎರಡು ತಂಡಗಳು ಪಸ್ತುತ ಐಪಿಎಲ್ನಲ್ಲಿ ಗೆಲುವು ಕಂಡಿಲ್ಲ. ಹೈದರಾಬಾದ್ ತಂಡ 2 ಸೋಲು ಕಂಡಿದ್ದರೆ, ಚೆನ್ನೈ ಆಡಿರುವ ಮೂರರಲ್ಲೂ ಸೋಲು ಕಂಡಿದೆ.
-
Kane Williamson wins the toss and elects to bowl first against #CSK.
— IndianPremierLeague (@IPL) April 9, 2022 " class="align-text-top noRightClick twitterSection" data="
Live - https://t.co/8pocfkHpDe #CSKvSRH #TATAIPL pic.twitter.com/y9pk2oYIIy
">Kane Williamson wins the toss and elects to bowl first against #CSK.
— IndianPremierLeague (@IPL) April 9, 2022
Live - https://t.co/8pocfkHpDe #CSKvSRH #TATAIPL pic.twitter.com/y9pk2oYIIyKane Williamson wins the toss and elects to bowl first against #CSK.
— IndianPremierLeague (@IPL) April 9, 2022
Live - https://t.co/8pocfkHpDe #CSKvSRH #TATAIPL pic.twitter.com/y9pk2oYIIy
ಇನ್ನು ಎರಡೂ ತಂಡಗಳು ಇದುವರೆಗೂ ಐಪಿಎಲ್ನಲ್ಲಿ 16 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್ಕೆ 12-ರಲ್ಲಿ ಮುನ್ನಡೆ ಪಡೆದುಕೊಂಡಿದೆ. 2018ರ ಸಿಎಸ್ಕೆ ಕಮ್ಬ್ಯಾಕ್ ನಂತರ ಆಡಿರುವ 10 ಪಂದ್ಯಗಳಲ್ಲಿ 2018ರಲ್ಲಿ 4 ಸೇರಿದಂತೆ ಒಟ್ಟು 8 ಪಂದ್ಯಗಳು ಸಿಎಸ್ಕೆ ಪಾಲಾಗಿದ್ದರೆ, ಹೈದರಾಬಾದ್ 4 ರಲ್ಲಿ ಗೆಲುವು ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್: ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಮಹೀಶ್ ತೀಕ್ಷಣ, ಕ್ರಿಸ್ ಜೋರ್ಡಾನ್, ಮುಖೇಶ್ ಚೌಧರಿ
ಸನ್ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್,ಶಶಾಂಕ್ ಸಿಂಗ್,ಮಾರ್ಕೊ ಜಾನ್ಸನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್