ಹೈದರಾಬಾದ್(ಡೆಸ್ಕ್): 2022ರ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಆರಂಭವನ್ನು ಕಾಣಲು ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ನಾಯಕನನ್ನು ಹುಡುಕುತ್ತಿದೆ.
14 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ತಲುಪಿರುವ ಆರ್ಸಿಬಿಗೆ ಚಾಂಪಿಯನ್ ಪಟ್ಟ ಮರೀಚಿಕೆಯಾಗಿಯೇ ಉಳಿದಿದೆ. ವಿರಾಟ್ ಕೊಹ್ಲಿ 2021ರಲ್ಲಿ ನಾಯಕತ್ವ ತ್ಯಜಿಸಿರುವುದರಿಂದ ಮೆಗಾ ಹರಾಜಿನಲ್ಲಿ ಕೆಲವು ಸ್ಟಾರ್ ಆಟಗಾರರನ್ನು ಖರೀದಿಸಿರುವ ಬೆಂಗಳೂರು ಫ್ರಾಂಚೈಸಿ ಇದೀಗ ಹೊಸ ಆಟಗಾರರಿಗೆ ನಾಯಕತ್ವ ನೀಡುವುದಕ್ಕೆ ಮುಂದಾಗಿದೆ.
ಈ ಮೆಗಾ ಹರಾಜಿನಲ್ಲಿ ಆರ್ಸಿಬಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿ ರೂಗಳಿಗೆ ಖರೀದಿಸಿದೆ. ಅನುಭವಿ ಬ್ಯಾಟರ್ ಆಗಿರುವ ಡುಪ್ಲೆಸಿಸ್ರನ್ನು ಸಿಎಸ್ಕೆ ಖರೀದಿಸಲು ಬಯಸಿತ್ತಾದರೂ, ಆರ್ಸಿಬಿ ಭಾರಿ ಪೈಪೋಟಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಹಾಗಾಗಿ ನಾಯಕತ್ವದ ಹುಡುಕಾಟದಲ್ಲಿರುವ ಫ್ರಾಂಚೈಸಿ ನಾಯಕನಾಗಿ ಅಪಾರ ಅನುಭವ ಹೊಂದಿರುವ ಪ್ಲೆಸಿಸ್ರನ್ನು ಪ್ರಬಲ ಪೈಪೋಟಿಯ ಹೊರತಾಗಿಯೂ ಖರೀದಿಸಿದ್ದರಿಂದ ಕೆಲವು ಕ್ರಿಕೆಟ್ ಪಂಡಿತರು ನಾಯಕನ ಸ್ಥಾನಕ್ಕಾಗಿ ಆವರ ಆಯ್ಕೆ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಇದೀಗ ಅದಕ್ಕೆ ಪುಷ್ಠಿ ನೀಡುವ ಫೋಟೋವನ್ನು ಶೇರ್ ಮಾಡಕೊಂಡಿರುವುದರಿಂದ ಕ್ರಿಕೆಟ್ ತಜ್ಞರ ಅಭಿಪ್ರಾಯ ನಿಜವಾಗಬಹುದೇ ಎನ್ನಲಾಗುತ್ತಿದೆ.
-
Just a picture from the future. 😉
— Royal Challengers Bangalore (@RCBTweets) March 2, 2022 " class="align-text-top noRightClick twitterSection" data="
Excited to see these✌🏻stars in a partnership, 12th Man Army? 🤜🏻🤛🏻#PlayBold #WeAreChallengers #IPL2022 pic.twitter.com/NB7NpogCWE
">Just a picture from the future. 😉
— Royal Challengers Bangalore (@RCBTweets) March 2, 2022
Excited to see these✌🏻stars in a partnership, 12th Man Army? 🤜🏻🤛🏻#PlayBold #WeAreChallengers #IPL2022 pic.twitter.com/NB7NpogCWEJust a picture from the future. 😉
— Royal Challengers Bangalore (@RCBTweets) March 2, 2022
Excited to see these✌🏻stars in a partnership, 12th Man Army? 🤜🏻🤛🏻#PlayBold #WeAreChallengers #IPL2022 pic.twitter.com/NB7NpogCWE
"ಇದು ಭವಿಷ್ಯದ ಒಂದು ಚಿತ್ರ. ಈ ಇಬ್ಬರು ಸ್ಟಾರ್ಗಳ ಜೊತೆಯಾಟವನ್ನು ನೋಡಲು ಉತ್ಸುಕರಾಗಿದ್ದೇವೆ. ನೀವು ಕೂಡ ಉತ್ಸಾಹದಿಂದ ಇದ್ದೀರಾ?" ಎಂದು ಅಭಿಮಾನಿಗಳಿಗೆ ಟ್ವೀಟ್ ಪ್ರಶ್ನೆ ಮಾಡಿದೆ.
ವಿರಾಟ್ ಕೊಹ್ಲಿ 2021ರ ಆವೃತ್ತಿ ಮುಗಿಯುತ್ತಿದ್ದಂತೆ ಆರ್ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಅಂದಿನಿಂದಲೂ ಕ್ರಿಕೆಟ್ ವಲಯದಲ್ಲಿ ಬೆಂಗಳೂರು ಪ್ರಾಂಚೈಸಿಯನ್ನು ಮುನ್ನಡೆಸುವುದಕ್ಕೆ ಯಾರು ಸೂಕ್ತ ಎನ್ನುವ ಚರ್ಚೆ ಸಾಗುತ್ತಲೇ ಇದೆ.
ತಂಡದಲ್ಲಿ ಫಾಫ್ ಡು ಪ್ಲೆಸಿಸ್ ಅಲ್ಲದೇ, ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ಹೆಸರುಗಳು ಆರ್ಸಿಬಿ ನಾಯಕತ್ವದ ಚರ್ಚೆಯಲ್ಲಿ ಬಳಕೆಯಾಗುತ್ತಿದೆ. ಆದರೆ ಗ್ಲೇನ್ ಮ್ಯಾಕ್ಸ್ವೆಲ್ ವಿವಾಹವಾಗುತ್ತಿದ್ದು ಸೀಸನ್ ಆರಂಭಕ್ಕೆ ಅಲಭ್ಯರಾಗಲಿದ್ದಾರೆ. ಹಾಗಾಗಿ ಫ್ರಾಂಚೈಸಿ ಪ್ಲೆಸಿಸ್ ಅಥವಾ ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿತ್ತು, ಇದೀಗ ಆರ್ಸಿಬಿ ಫೋಟೋವೊಂದನ್ನು ಶೇರ್ ಮಾಡಿ ಅಭಿಮಾನಿಗಳ ಮನಸ್ಸಲ್ಲಿ ಗೊಂದಲ ತಂದಿಟ್ಟಿದೆ.
ಈಗಾಗಲೆ 10 ತಂಡಗಳಲ್ಲಿ 9 ತಂಡಗಳು ತಮ್ಮ ನಾಯಕನನ್ನು ಘೋಷಣೆ ಮಾಡಿಕೊಂಡಿವೆ. ಗಮನಾರ್ಹ ಸಂಗತಿಯೆಂದರೆ, 9ರಲ್ಲಿ 8 ನಾಯಕರು ಭಾರತದವರೇ ಆಗಿದ್ದಾರೆ. ಐಪಿಎಲ್ ಆರಂಭಕ್ಕೆ 3 ವಾರ ಸಮಯವಿದ್ದು, ಆರ್ಸಿಬಿ ಮಾತ್ರ ಇನ್ನೂ ತನ್ನ ನಾಯಕನನ್ನು ಘೋಷಣೆ ಮಾಡಿಲ್ಲ.
ಇದನ್ನೂ ಓದಿ:ಮಾರ್ಚ್ 14 ಅಥವಾ 15ರಿಂದ ಈ ಸ್ಥಳಗಳಲ್ಲಿ ಐಪಿಎಲ್ ತಂಡಗಳ ತರಬೇತಿ ಆರಂಭ