ಪುಣೆ: ಸೂರ್ಯಕುಮಾರ್ ಯಾದವ್(68) ಅವರ ಏಕಾಂಗಿ ಹೋರಾಟದ ನೆರವಿನಿಂದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 151 ರನ್ಗಳಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ಗೆ 50 ರನ್ಸೇರಿಸಿತು. ಆದರೆ 15 ಎಸೆತಗಳಲ್ಲಿ 26 ರನ್ಗಳಿಸಿದ್ದ ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಮುಂಬೈ ಪೆವಿಲಿಯನ್ ಪರೇಡ್ ನಡೆಸಿತು.
ನಂತರ ಕೇವಲ 12 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. ರೋಹಿನ್ ಬೆನ್ನಲ್ಲೇ ಡೆವಾಲ್ಡ್ ಬ್ರೇವಿಸ್(8), ಇಶಾನ್ ಕಿಶನ್ 26(28), ತಿಲಕ್ ವರ್ಮಾ(0) ಮತ್ತು ಕೀರನ್ ಪೊಲಾರ್ಡ್(0) ಬಂದ ದಾರಿಯಲ್ಲೇ ವಾಪಸ್ ಆದರು.
ಇಂದೇ ಐಪಿಎಲ್ಗೆ ಪದಾರ್ಪಣೆ ಮಾಡಿದ ರಮಣ್ದೀಪ್ ಸಿಂಗ್ 12 ಎಸೆತಗಳಲ್ಲಿ 6 ರನ್ಗಳಿಸಿ ಹರ್ಷಲ್ ಪಟೇಲ್ಗೆ 2ನೇ ಬಲಿಯಾದರು. ಆದರೆ 7ನೇ ವಿಕೆಟ್ಗೆ ಇನ್ಫಾರ್ಮ್ ಸೂರ್ಯಕುಮಾರ್ ಯಾದವ್ ಜೊತೆಗೂಡಿದ ಜಯದೇವ್ ಉನಾದ್ಕಟ್ 72 ರನ್ ಸೇರಿಸಿದರು. ಇದರಲ್ಲಿ ಉನಾದ್ಕಟ್ 13 ರನ್ಗಳಿಸಿದದರೆ, ಯಾದವ್ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ಗಳ ಸಹಿತ ಅಜೇಯ 68 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್ಸಿಬಿ ಪರ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಹರ್ಷಲ್ ಪಟೆಲ್ 23ಕ್ಕೆ 2, ಆಕಾಶ್ ದೀಪ್ 20ಕ್ಕೆ1, ವನಿಂಡು ಹಸರಂಗ 28ಕ್ಕೆ 2, ವಿಕೆಟ್ ಪಡೆದು ಮಿಂಚಿದರು. ಆದರೆ ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲೂ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಟಾಸ್ ಅಪ್ಡೇಟ್
ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯಲ್ಲಿ ಸತತ 3 ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್ ಮಾಡಿಕೊಂಡಿದ್ದಾರೆ. ಇಂದಿನ ಹೈ ವೋಲ್ಟೋಜ್ ಪಂದ್ಯದಲ್ಲಿ ಅರ್ಸಿಬಿ ಪರ ಸ್ಟಾರ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಮರಳಿದ್ದಾರೆ. ಮುಂಬೈ ಕೇವಲ ಇಬ್ಬರು ವಿದೇಶಿ ಕ್ರಿಕೆಟಿಗರ ಸಂಯೋಜನೆಯಲ್ಲಿ ಕಣಕ್ಕಿಳಿದಿದೆ.
ಐಪಿಎಲ್ ಇತಿಹಾಸದಲ್ಲಿ ಕೇವಲ ಇಬ್ಬರು ವಿದೇಶಿ ಕ್ರಿಕೆಟಿಗರನ್ನು ಮಾತ್ರ ಆಡಿಸುತ್ತಿರುವುದು ಇದೇ ಮೂರನೇ ನಿದರ್ಶನ. 2011ರಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್, ಇದೇ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ಕಣಕ್ಕಿಳಿಸಿತ್ತು.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ರಮಣದೀಪ್ ಸಿಂಗ್, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ಜಸ್ಪ್ರೀತ್ ಬುಮ್ರಾ, ಬಾಸಿಲ್ ಥಂಪಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಡೇವಿಡ್ ವಿಲ್ಲಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್