ETV Bharat / sports

8ನೇ ಬಾರಿ 100ರೊಳಗೆ ಬೆಂಗಳೂರು ಆಲೌಟ್, ಆರ್​ಸಿಬಿಗಿಂತಲೂ ಕಳಪೆ ದಾಖಲೆ ಹೊಂದಿದ ತಂಡಗಳಿವು.. - ಹೆಚ್ಚು ಬಾರಿ 100ರೊಳಗೆ ಆಲೌಟ್ ಆದ ತಂಡಗಳು

ಶನಿವಾರ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ಫ್ರಾಂಚೈಸಿ ಕೇವಲ 68 ರನ್​ ಗಳಿಸಿತು. ಈ ಮೊತ್ತವನ್ನು ಹೈದರಾಬಾದ್​ 1 ವಿಕೆಟ್ ಕಳೆದುಕೊಂಡು 8 ಓವರ್​ಗಳಲ್ಲಿ ತಲುಪಿದೆ.

Royal Challengers Bangalore
Royal Challengers Bangalore
author img

By

Published : Apr 23, 2022, 10:58 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ 36ನೇ ಪಂದ್ಯದಲ್ಲಿ​ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 68 ರನ್​ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಮಂತ ಕ್ರಿಕೆಟ್‌ ಲೀಗ್ ಇತಿಹಾಸದಲ್ಲಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಹೆಚ್ಚು ಬಾರಿ ಆಲೌಟ್ ಆದ 2ನೇ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ಫ್ರಾಂಚೈಸಿ ಕೇವಲ 68 ರನ್ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ​ಈ ಮೊತ್ತವನ್ನು ಹೈದರಾಬಾದ್​ 1 ವಿಕೆಟ್ ಕಳೆದುಕೊಂಡು 8 ಓವರ್​ಗಳಲ್ಲೇ ತಲುಪಿ ಗೆಲುವಿನ ನಗೆ ಬೀರಿತು.

ಅತಿ ಹೆಚ್ಚು ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡಗಳು:

  • ಡೆಲ್ಲಿ ಕ್ಯಾಪಿಟಲ್ಸ್(ಡೆಲ್ಲಿ ಡೇರ್​ ಡೇವಿಲ್ಸ್)- 9 ಬಾರಿ
  • ರಾಯಲ್ ಚಾಲೆಂಜರ್ಸ್ ಬೆಂಗಳೂರು-8 ಬಾರಿ
  • ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​- 6 ಬಾರಿ
  • ಪಂಜಾಬ್ ಕಿಂಗ್ಸ್​(ಕಿಂಗ್ಸ್ ಇಲೆವೆನ್ ಪಂಜಾಬ್)-5 ಬಾರಿ
  • ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ಡೆಕ್ಕನ್ ಚಾರ್ಜಸ್​​- 3 ಬಾರಿ
  • ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​-1 ಬಾರಿ

ಟಾಪ್ 5: ಅತ್ಯಂತ ಕಡಿಮೆ ಮೊತ್ತ ದಾಖಲಿಸಿದ ತಂಡಗಳು:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು- 49
  • ರಾಜಸ್ಥಾನ್ ರಾಯಲ್ಸ್-58
  • ಡೆಲ್ಲಿ ಕ್ಯಾಪಿಟಲ್ಸ್-66
  • ಡೆಲ್ಲಿ ಕ್ಯಾಪಿಟಲ್ಸ್-67
  • ಕೋಲ್ಕತ್ತಾ ನೈಟ್​ ರೈಡರ್ಸ್-67
  • ರಾಯಲ್ ಚಾಲೆಂಜರ್ಸ್ ಬೆಂಗಳೂರು-68

ಇದನ್ನೂ ಓದಿ:ಆರ್​ಸಿಬಿಗೆ ಮತ್ತೊಮ್ಮೆ ಕರಾಳದಿನವಾದ ಏಪ್ರಿಲ್ 23! ಅಂದು 49, ಇಂದು 68ಕ್ಕೆ ಆಲೌಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.