ETV Bharat / sports

ಮರಳಿ ಆರ್​ಸಿಬಿ ಸೇರಿದ ಹರ್ಷಲ್​, ಹಸರಂಗಾಗೆ ತಲಾ 10.75 ಕೋಟಿ.. ಅನುಭವಿ ಪ್ಲೆಸಿಸ್​ಗೆ ಮಣೆ - ವನಿಡು ಹಸರಂಗಾ

2021ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್​ ಪಟ್ಟಕ್ಕೇರಲು ನಿರ್ಣಾಯಕ ಪಾತ್ರವಹಿಸಿದ್ದ ಫಾಫ್​ ಡು ಪ್ಲೆಸಿಸ್​ ಅವರನ್ನು 7 ಕೋಟಿ ರೂ. ನೀಡಿ ಆರ್​ಸಿಬಿ ಖರೀದಿಸಿದೆ..

IPL 2022 Mega Auction: Wanindu Hasaranga, harshal patel SOLD to RCB
ಮರಳಿ ಆರ್​ಸಿಬಿ ಸೇರಿದ ಹರ್ಷಲ್​, ಹಸರಂಗಾ... ಅನುಭವಿ ಪ್ಲೆಸಿಸ್​ಗೆ 7 ಕೋಟಿ ನೀಡಿದ ಬೆಂಗಳೂರು
author img

By

Published : Feb 12, 2022, 4:20 PM IST

ಬೆಂಗಳೂರು : ಕಳೆದ ವರ್ಷ ಪರ್ಪಲ್ ಕ್ಯಾಪ್​ ಪಡೆದಿದ್ದ ಹರ್ಷಲ್ ಪಟೇಲ್​ ಮತ್ತು ವಿಶ್ವದ ನಂಬರ್ 1 ಟಿ-20 ಸ್ಪಿನ್ನರ್​ ಶ್ರೀಲಂಕಾದ ವನಿಡು ಹಸರಂಗಾ ಅವರನ್ನು ಬರೋಬ್ಬರಿ 10.75 ಕೋಟಿ ರೂ. ನೀಡಿ ಖರೀದಿಸಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ 2022ರ ಐಪಿಎಲ್​ ಮೆಗಾ ಹರಾಜಿನಲ್ಲಿ ಆರ್​ಸಿಬಿ ಮೊದಲ ದಿನವೇ ಕೆಲವು ಅಚ್ಚರಿಯ ಖರೀದಿ ಮಾಡಿದೆ. 20 ಲಕ್ಷ ಮೂಲ ಬೆಲೆಯ ಹರ್ಷಲ್ ಪಟೇಲ್​ರನ್ನು ಭಾರಿ ಪೈಪೋಟಿ ನಡೆಸಿ 10.75 ಕೋಟಿ ರೂ. ನೀಡಿ ಖರಿದೀಸಿತು.

ಒಂದು ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಹಸರಂಗಾರನ್ನು ಕೂಡ ಪಂಜಾಬ್ ಕಿಂಗ್ಸ್ ಜೊತೆಗೆ ಪ್ರಬಲ ಪೈಪೋಟಿ ನೀಡಿ 10.75 ಕೋಟಿ ರೂ.ಗೆ ಖರೀದಿಸಿತು.

2021ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್​ ಪಟ್ಟಕ್ಕೇರಲು ನಿರ್ಣಾಯಕ ಪಾತ್ರವಹಿಸಿದ್ದ ಫಾಫ್​ ಡು ಪ್ಲೆಸಿಸ್​ ಅವರನ್ನು 7 ಕೋಟಿ ರೂ. ನೀಡಿ ಖರೀದಿಸಿದೆ.

ಹರ್ಷಲ್ ಪಟೇಲ್ 63 ಐಪಿಎಲ್ ಸೇರಿದಂತೆ 118 ಟಿ-20 ಪಂದ್ಯಗಳಿಂದ 142 ವಿಕೆಟ್​ ಪಡೆದಿದ್ದಾರೆ. ಹಸರಂಗಾ 84 ಟಿ-20 ಪಂದ್ಯಗಳಿಂದ 113 ವಿಕೆಟ್ ಮತ್ತು 992 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ನಂತರ ಮತ್ತೆ ಡೆಲ್ಲಿ ಸೇರಿದ ವಾರ್ನರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.