ಮುಂಬೈ: 2022ರ 0ಇಂಡಿಯನ್ ಪ್ರೀಮಿಯರ್ ಲೀಗ್ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಉದ್ಯಮಿ ಸಂಜೀವ್ ಗೋಯಂಕ ನೇತೃತ್ವದ RPSG ಗ್ರೂಪ್ ಮಾಲೀಕತ್ವದ ಲಖನೌ ಮೂಲದ ಫ್ರಾಂಚೈಸಿಗೆ ಲಲಖನೌ ಸೂಪರ್ ಜೈಂಟ್ಸ್ ಎಂದು ಸೋಮವಾರ ನಾಮಕರಣ ಮಾಡಲಾಗಿದೆ.
ಕಳೆದ ಅಕ್ಟೋಬರ್ನಲ್ಲಿ ನಡೆದಿದ್ದ ಬಿಡ್ನಲ್ಲಿ ಬರೋಬ್ಬರಿ 7090 ಕೋಟಿ ರೂ. ನೀಡಿ RPSG ಗ್ರೂಪ್ ಲಖನೌ ಫ್ರಾಂಚೈಸಿಯನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ತಂಡ ಎಂಬ ಖ್ಯಾತಿಗೂ ಪಾತ್ರವಾಗಿತ್ತು.
ಮತ್ತೊಂದು ತಂಡ ಅಹ್ಮದಾಬಾದ್ ಫ್ರಾಂಚೈಸಿಯನ್ನು ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್ನರ್ಸ್ ಎಂಬ ಖಾಸಗಿ ಇಕ್ವಿಟಿ ಕಂಪನಿ 5625 ಕೋಟಿ ರೂ. ನೀಡಿ ಖರೀದಿಸಿತ್ತು.
-
Team owner, Dr. Sanjiv Goenka, Chairman @rpsggroup unveils the name for the Lucknow IPL team. 😊👏🏼#LucknowSuperGiants #NaamBanaoNaamKamao #IPL2022 @IPL @BCCI @GautamGambhir @klrahul11 pic.twitter.com/TvGaZlIgFR
— Lucknow Super Giants (@TeamLucknowIPL) January 24, 2022 " class="align-text-top noRightClick twitterSection" data="
">Team owner, Dr. Sanjiv Goenka, Chairman @rpsggroup unveils the name for the Lucknow IPL team. 😊👏🏼#LucknowSuperGiants #NaamBanaoNaamKamao #IPL2022 @IPL @BCCI @GautamGambhir @klrahul11 pic.twitter.com/TvGaZlIgFR
— Lucknow Super Giants (@TeamLucknowIPL) January 24, 2022Team owner, Dr. Sanjiv Goenka, Chairman @rpsggroup unveils the name for the Lucknow IPL team. 😊👏🏼#LucknowSuperGiants #NaamBanaoNaamKamao #IPL2022 @IPL @BCCI @GautamGambhir @klrahul11 pic.twitter.com/TvGaZlIgFR
— Lucknow Super Giants (@TeamLucknowIPL) January 24, 2022
ಕಳೆದ ವಾರವಷ್ಟೆ ಲಖನೌ ಫ್ರಾಂಚೈಸಿ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ದಾಖಲೆಯ 17 ಕೋಟಿ ರೂ. ನೀಡಿ ಡ್ರಾಫ್ಟ್ ಮಾಡಿಕೊಂಡಿದ್ದ ಫ್ರಾಂಚೈಸಿ ಅವರನ್ನೇ ನಾಯಕನನ್ನಾಗಿ ನೇಮಿಸಿತ್ತು. ಇವರ ಜೊತೆಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಕ್ರಮವಾಗಿ 9.5 ಮತ್ತು 4 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿತ್ತು.
-
And here it is,
— Lucknow Super Giants (@TeamLucknowIPL) January 24, 2022 " class="align-text-top noRightClick twitterSection" data="
Our identity,
Our name.... 🤩🙌#NaamBanaoNaamKamao #LucknowSuperGiants @BCCI @IPL @GautamGambhir @klrahul11 pic.twitter.com/OVQaw39l3A
">And here it is,
— Lucknow Super Giants (@TeamLucknowIPL) January 24, 2022
Our identity,
Our name.... 🤩🙌#NaamBanaoNaamKamao #LucknowSuperGiants @BCCI @IPL @GautamGambhir @klrahul11 pic.twitter.com/OVQaw39l3AAnd here it is,
— Lucknow Super Giants (@TeamLucknowIPL) January 24, 2022
Our identity,
Our name.... 🤩🙌#NaamBanaoNaamKamao #LucknowSuperGiants @BCCI @IPL @GautamGambhir @klrahul11 pic.twitter.com/OVQaw39l3A
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದೀಗ ಲಖನೌ ಸೂಪರ್ ಜೈಂಟ್ಸ್ ಎಂದು ತಂಡದ ಹೆಸರನ್ನು ಬಹಿರಂಗಪಡಿಸಿದೆ. 2016 ಮತ್ತು 17ರಲ್ಲಿ ಇದೇ ಸಂಸ್ಥೆ ಪುಣೆ ತಂಡವನ್ನು ಖರೀದಿಸಿ ಅದಕ್ಕೆ ಪುಣೆ ಸೂಪರ್ ಜೇಂಟ್ಸ್ ಎಂದು ನಾಮಕರಣ ಮಾಡಿತ್ತು. ಇದೀಗ ಮತ್ತೆ ಅದೇ ಹೆಸರನ್ನು ತಮ್ಮ ನೂತನ ತಂಡಕ್ಕೂ ಮುಂದುವರಿಸಿದೆ.
ಟ್ವಿಟರ್ಗೆ ಪ್ರವೇಶ ಮಾಡಿದ್ದ ದಿನದಿಂದ ಲಖನೌ ನಾಮ್ ಬನೋವ್ ನಾಮ್ ಕಮಾವ್ ಎಂಬ ಅಭಿಮಾಯನದಡಿ ಅಭಿಮಾನಿಗಳಿಗೆ ತಂಡಕ್ಕೆ ಹೆಸರನ್ನು ಸೂಚಿಸಲು ಕೋರಿಕೊಂಡಿದ್ದರು. ಇದಕ್ಕೆ ಲಕ್ಷಾಂತರ ಅಭಿಮಾನಿಗಳು ಸಾಕಷ್ಟು ಹೆಸರನ್ನು ನೀಡಿದ್ದರು. ಆದರೆ, ಫ್ರಾಂಚೈಸಿ ತಮ್ಮ ಹಳೆಯ ಹೆಸರನ್ನೇ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ:2ನೇ ಬಾರಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಪಡೆದ ಮಂಧಾನ.. ಈ ವರ್ಷ ಏಕೈಕ ಭಾರತೀಯೆ