ETV Bharat / sports

ಈ ಮೂವರು ಆಟಗಾರರ ಮೇಲೆ ಅಹ್ಮದಾಬಾದ್ ಕಣ್ಣು,​​ ಹಾರ್ದಿಕ್​ ಪಾಂಡ್ಯಗೆ ಕ್ಯಾಪ್ಟನ್​ ಪಟ್ಟ: ವರದಿ - ರಶೀದ್ ಖಾನ್

2022ರ ಐಪಿಎಲ್​ಗಾಗಿ ಬರೋಬ್ಬರಿ ₹5,625 ಕೋಟಿ ನೀಡಿ ಅಹ್ಮದಾಬಾದ್​ ಫ್ರಾಂಚೈಸಿ ಖರೀದಿಸಿರುವ ಸಿವಿಸಿ ಕ್ಯಾಪಿಟಲ್ಸ್ ಗ್ರೂಪ್ ಈಗಾಗಲೇ ಆಶಿಷ್​ ನೆಹ್ರಾರನ್ನು ತಂಡದ ಮುಖ್ಯ ಕೋಚ್​ ಆಗಿ, ಭಾರತ ತಂಡಕ್ಕೆ ಏಕದಿನ ವಿಶ್ವಕಪ್​ ತಂದುಕೊಟ್ಟ ಕೋಚ್​ ಗ್ಯಾರಿ ಕಸ್ಟರ್ನ್​ ಮೆಂಟರ್​ ಆಗಿ ಮತ್ತು ವಿಕ್ರಮ್ ಸೋಲಂಕಿ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕವಾಗಿದ್ದಾರೆ.

Hardik Pandya will lead to Ahmedabad franchise: report
ಹಾರ್ದಿಕ್ ಪಾಂಡ್ಯ ಅಹ್ಮದಾಬಾದ್ ನಾಯಕ
author img

By

Published : Jan 10, 2022, 6:06 PM IST

ಮುಂಬೈ: ಟೀಮ್ ಇಂಡಿಯಾ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ 2022ರ ಐಪಿಎಲ್​ಗೆ ಸೇರ್ಪಡೆಯಾಗಿರುವ ನೂತನ ಫ್ರಾಂಚೈಸಿ ಅಹ್ಮದಾಬಾದ್​​ಗೆ ನಾಯಕನಾಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

2022ರ ಐಪಿಎಲ್​ಗಾಗಿ ಬರೋಬ್ಬರಿ 5,625 ಕೋಟಿ ರೂ. ನೀಡಿ ಅಹ್ಮದಾಬಾದ್​ ಫ್ರಾಂಚೈಸಿ ಖರೀದಿಸಿರುವ ಸಿವಿಸಿ ಕ್ಯಾಪಿಟಲ್ಸ್ ಗ್ರೂಪ್ ಈಗಾಗಲೇ ಆಶಿಷ್​ ನೆಹ್ರಾರನ್ನು ತಂಡದ ಮುಖ್ಯ ಕೋಚ್​ ಆಗಿ, ಭಾರತ ತಂಡಕ್ಕೆ ಏಕದಿನ ವಿಶ್ವಕಪ್​ ತಂದುಕೊಟ್ಟ ಕೋಚ್​ ಗ್ಯಾರಿ ಕಸ್ಟರ್ನ್​ ಮೆಂಟರ್​ ಆಗಿ ಮತ್ತು ವಿಕ್ರಮ್ ಸೋಲಂಕಿ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕವಾಗಿದ್ದಾರೆ.

ಇದೀಗ ಮುಂಬೈ ಇಂಡಿಯನ್ಸ್​ 4 ಐಪಿಎಲ್ ಟ್ರೋಪಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಹಾರ್ದಿಕ್ ಮೂಲತಃ ಗುಜರಾತ್ ರಾಜ್ಯದವರಾಗಿರುವುದರಿಂದ ಅವರನ್ನೇ ಕ್ಯಾಪ್ಟನ್​ಆಗಿ ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.

ನೇರವಾಗಿ ಆಯ್ಕೆ ಮಾಡಬಹುದಾದ ಮೂವರು ಆಟಗಾರರು..

ಬಿಸಿಸಿಐ ಸೋಮವಾರ ಬೆಡ್ಡಿಂಗ್​ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಅಹ್ಮದಾಬಾದ್​ ಫ್ರಾಂಚೈಸಿಗೆ ಕ್ಲೀನ್​ ಚಿಟ್ ನೀಡಿದ್ದು, ಫ್ರಾಂಚೈಸಿಯಲ್ಲಿ ಮುಂದುವರಿಯಲು ಅಧಿಕೃತ ಒಪ್ಪಂದ ಪತ್ರವನ್ನು ನೀಡಿದೆ. ಆದ್ದರಿಂದ ಫ್ರಾಂಚೈಸಿ ಇದೇ ತಿಂಗಳ 31ರೊಳಗೆ ನೇರವಾಗಿ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಬರೋಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಲು ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇವರ ಜೊತೆಗೆ ಮುಂಬೈ ಇಂಡಿಯನ್ಸ್​ನ ಸಹ ಆಟಗಾರ ವಿಕೆಟ್ ಕೀಪರ್ ಇಶಾನ್ ಕಿಶನ್​ ಮತ್ತು ಅಫ್ಘಾನಿಸ್ತಾನ ಸ್ಟಾರ್ ಸ್ಪಿನ್ನರ್​ ರಶೀದ್ ಖಾನ್​ರನ್ನು ಡ್ರಾಪ್ ಮಾಡಿಕೊಳ್ಳಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ:3ನೇ ಟೆಸ್ಟ್​ಗೆ ನಾನು ಸಂಪೂರ್ಣ ಫಿಟ್​, ಆದರೆ ಆತ ಆಡುವುದು ಡೌಟ್​: ವಿರಾಟ್ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.