ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಭಾರತೀಯ ಕ್ರಿಕೆಟ್ ರಂಗವನ್ನೇ ಬದಲಿಸಿದ ಟೂರ್ನಿ. ಈ ಟೂರ್ನಿಯನ್ನು ಆಟವಾಗಿ ಮಾತ್ರ ನೋಡದೇ ಹಬ್ಬವನ್ನಾಗಿಯೂ ಆಚರಿಸಲಾಗುತ್ತದೆ. ಟೂರ್ನಿಯನ್ನು ಪರಿಚಯಿಸಿದ ಬಳಿಕ ಹಲವಾರು ಪ್ರತಿಭೆಗಳು ಬೆಳಕಿಗೆ ಬಂದಿವೆ. ಯುವ ಆಟಗಾರರಿಗೆ ನೀಡಲಾಗುವ ಉದಯೋನ್ಮುಖ ಆಟಗಾರ ಪ್ರಶಸ್ತಿಯೂ ಅವರ ಕ್ರಿಕೆಟ್ ಬದುಕನ್ನೇ ಬದಲಿಸಿದೆ.
ಈ ಪ್ರಶಸ್ತಿ ಪಡೆದ ಹಲವು ಯುವ ಪ್ರತಿಭೆಗಳು ಇಂದಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಪದಾರ್ಪಣೆ ಮಾಡಿ ಮಿಂಚು ಹರಿಸುತ್ತಿದ್ದಾರೆ. ಈ ಋತುವಿನ ಟೂರ್ನಿಯಲ್ಲಿ ಜಮ್ಮು- ಕಾಶ್ಮೀರದ ಉಮರ್ ಮಲಿಕ್ಗೆ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿ ನೀಡಲಾಗಿದೆ. ಇದಲ್ಲದೇ, ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯ ತಂಡದಲ್ಲಿ ಉಮ್ರಾನ್ಗೆ ಸ್ಥಾನ ನೀಡಲಾಗಿದೆ.
ಭಾರತ ತಂಡ ಸೇರಲು ಹೆದ್ದಾರಿ ಈ ಪ್ರಶಸ್ತಿ: ಇನ್ನು ಈ ಪ್ರಶಸ್ತಿ ಪಡೆದ ಹಲವು ಕ್ರಿಕೆಟಿಗರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಕೆಲವು ಕಾಯಂ ಆಗಿ ಸ್ಥಾನ ಉಳಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುವ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನ ಭವಿಷ್ಯದ ತಾರೆಯನ್ನಾಗಿ ಈ ಪ್ರಶಸ್ತಿ ರೂಪಿಸುತ್ತದೆ.
-
With 2️⃣2️⃣ wickets in his first full IPL season, Umran Malik wins the #IPL2022 Emerging Player of the Year award 🏆🟠#OrangeArmy #CricketTwitter pic.twitter.com/Brpc6AdZv5
— Sportskeeda (@Sportskeeda) May 29, 2022 " class="align-text-top noRightClick twitterSection" data="
">With 2️⃣2️⃣ wickets in his first full IPL season, Umran Malik wins the #IPL2022 Emerging Player of the Year award 🏆🟠#OrangeArmy #CricketTwitter pic.twitter.com/Brpc6AdZv5
— Sportskeeda (@Sportskeeda) May 29, 2022With 2️⃣2️⃣ wickets in his first full IPL season, Umran Malik wins the #IPL2022 Emerging Player of the Year award 🏆🟠#OrangeArmy #CricketTwitter pic.twitter.com/Brpc6AdZv5
— Sportskeeda (@Sportskeeda) May 29, 2022
ಪ್ರಶಸ್ತಿ ಪಡೆಯಲು ಮಾನದಂಡಗಳು
- 1 ಏಪ್ರಿಲ್ 1996 ರ ನಂತರ ಜನಿಸಿರಬೇಕು
- 5ಕ್ಕಿಂತ ಕಡಿಮೆ ಟೆಸ್ಟ್ ಪಂದ್ಯ, 20ಕ್ಕಿಂತ ಕಡಿಮೆ ಏಕದಿನ ಪಂದ್ಯ ಆಡಿರಬೇಕು
- 25 ಅಥವಾ ಅದಕ್ಕಿಂತ ಕಡಿಮೆ ಐಪಿಎಲ್ ಪಂದ್ಯಗಳಲ್ಲಿ ಆಡಿರಬೇಕು
- ಈ ಹಿಂದೆ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಪಡೆದಿರಬಾರದು
- www.iplt20.com ನಲ್ಲಿ ಸಾರ್ವಜನಿಕ ಮತ ಮತ್ತು ನಿರೂಪಕರ ಆಯ್ಕೆಯ ಮೇಲೆ ವಿಜೇತರ ಪರಿಗಣನೆ
2022 ರ ಟೂರ್ನಿಯಲ್ಲಿ ಮುಂಚೂಣಿಯಲ್ಲಿದ್ದವರು
1. ಉಮ್ರಾನ್ ಮಲಿಕ್ (ಹೈದರಾಬಾದ್) ಶೇ22 ಮತಗಳು: ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಉಮ್ರಾನ್ ಮಲಿಕ್, 14 ಪಂದ್ಯಗಳಲ್ಲಿ 22 ವಿಕೆಟ್ ಗಳಿಸಿದ್ದಾರೆ. ಭಾರತ ಕಂಡ ಅತ್ಯಂತ ವೇಗದ ಬೌಲರ್ ಗುರುತಿಸಿಕೊಂಡಿದ್ದಾರೆ. 157 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದು ಟೂರ್ನಿಯಲ್ಲಿಯೇ ಅತ್ಯಧಿಕ ವೇಗದ ಬೌಲಿಂಗ್ ಆಗಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಗುಜರಾತ್ನ ಲೂಕಿ ಫರ್ಗ್ಯುಸನ್ 157.7 ವೇಗದಲ್ಲಿ ಬೌಲಿಂಗ್ ಮಾಡಿ ಈ ದಾಖಲೆ ಮುರಿದಿದ್ದರು. ಟೂರ್ನಿ ಮುಕ್ತಾಯದ ಬಳಿಕ ಅತಿ ಹೆಚ್ಚು ಅಂಕ ಗಳಿಸಿದ ಉಮ್ರಾನ್ಗೆ ಈ ಪ್ರಶಸ್ತಿ ನೀಡಲಾಗಿದೆ.
2. ತಿಲಕ್ ವರ್ಮಾ (ಮುಂಬೈ) - 20% ಮತ: ಮುಂಬೈ ತಂಡದ ಆಟಗಾರ ತಿಲಕ್ ವರ್ಮಾ ಭರವಸೆಯ ಕ್ರಿಕೆಟಿಗನಾಗಿದ್ದಾನೆ. 131.02 ಸ್ಟ್ರೈಕ್ ರೇಟ್‌ನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 397 ರನ್ ಗಳಿಸಿ ತಂಡದ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಗಾಯಗೊಂಡ ನಂತರ ಬದಲಿ ಆಟಗಾರನಾಗಿ ಬಂದ ತಿಲಕ್ ವರ್ಮಾ ಅತ್ಯುತ್ತಮ ಪ್ರದರ್ಶನ ನೀಡಿದರು.
3. ಮುಖೇಶ್ ಚೌಧರಿ (ಸಿಎಸ್ಕೆ) - ಶೇ 11ರಷ್ಟು ಮತ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಮುಖೇಶ್ ಚೌದರಿ, ತಾವಾಡಿದ ಮೊದಲ ಸೀಸನ್ನಲ್ಲೇ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಗಾಯಗೊಂಡ ದೀಪಕ್ ಚಹಾರ್ ಬದಲಿಗೆ ಸ್ಥಾನ ಪಡೆದ ಮುಖೇಶ್ 13 ಪಂದ್ಯಗಳಲ್ಲಿ 16 ವಿಕೆಟ್ ಕಿತ್ತಿದ್ದಾರೆ.
4. ಆಯುಷ್ ಬದೋನಿ (ಲಖನೌ) - ಶೇ 4ರಷ್ಟು ಮತ: ಟೂರ್ನಿಯಲ್ಲಿ ಮೊದಲ ಬಾರಿಗೆ ಆಡಿದ ಆಯುಷ್ ಬದೋನಿ ಚಿಕ್ಕ ವಯಸ್ಸಿನಲ್ಲೇ ಪ್ರಭಾವ ಬೀರಿದ್ದಾರೆ. ನೋಡಲು ಸಣ್ಣದಾಗಿ ಇದ್ದರೂ ಸಿಕ್ಸರ್ ಬಾರಿಸುವ ಸಾಮರ್ಥ್ಯ ಅವರಲ್ಲಿದೆ. ಟೂರ್ನಿಯಲ್ಲಿ 1 ಅರ್ಧಶತಕ ಬಾರಿಸಿದ್ದು, ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.
5. ಅರ್ಷದೀಪ್ ಸಿಂಗ್ (ಪಂಜಾಬ್): ಪಂಜಾಬಿ ಬೌಲರ್ ಅರ್ಷದೀಪ್ ಸಿಂಗ್ ಯಾರ್ಕರ್‌ಗಳ ಮೂಲಕ ಗಮನ ಸೆಳೆದಿದ್ದಾರೆ. ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡ ಸಿಂಗ್ 14 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.
-
Congratulations Umran Malik for 2022 IPL Emerging Player award#IPL2022 #IPL #CricketTwitter #Cricket #ranjitrophy #UmranMalik pic.twitter.com/sZOwRljUVG
— Indian Domestic Cricket Forum - IDCF (@IndianIdcf) May 31, 2022 " class="align-text-top noRightClick twitterSection" data="
">Congratulations Umran Malik for 2022 IPL Emerging Player award#IPL2022 #IPL #CricketTwitter #Cricket #ranjitrophy #UmranMalik pic.twitter.com/sZOwRljUVG
— Indian Domestic Cricket Forum - IDCF (@IndianIdcf) May 31, 2022Congratulations Umran Malik for 2022 IPL Emerging Player award#IPL2022 #IPL #CricketTwitter #Cricket #ranjitrophy #UmranMalik pic.twitter.com/sZOwRljUVG
— Indian Domestic Cricket Forum - IDCF (@IndianIdcf) May 31, 2022
ಐಪಿಎಲ್ನಲ್ಲಿ ಪ್ರಶಸ್ತಿ ಪಡೆದ ಆಟಗಾರರ ವಿವರ
2008 - ಶ್ರೀವತ್ಸ್ ಗೋಸ್ವಾಮಿ - ಆರ್ಸಿಬಿ
2009 - ರೋಹಿತ್ ಶರ್ಮಾ - ಡೆಕ್ಕನ್ ಚಾರ್ಜರ್ಸ್
2010 - ಸೌರಭ್ ತಿವಾರಿ - ಮುಂಬೈ ಇಂಡಿಯನ್ಸ್
2011 - ಇಕ್ಬಾಲ್ ಅಬ್ದುಲ್ಲಾ - ಕೆಕೆಆರ್
2012 - ಮನ್ದೀಪ್ ಸಿಂಗ್ - ಕಿಂಗ್ಸ್ ಇಲೆವೆನ್ ಪಂಜಾಬ್
2013 - ಸಂಜು ಸ್ಯಾಮ್ಸನ್ - ರಾಜಸ್ತಾನ ರಾಯಲ್ಸ್
2014 - ಅಕ್ಸರ್ ಪಟೇಲ್ - ಕಿಂಗ್ಸ್ ಇಲೆವೆನ್ ಪಂಜಾಬ್
2015 - ಶ್ರೇಯಸ್ ಅಯ್ಯರ್ - ಡೆಲ್ಲಿ ಡೇರ್ ಡೆವಿಲ್ಸ್
2016 - ಮುಸ್ತಫಿಜುರ್ ರೆಹಮಾನ್ - ಸನ್ರೈಸರ್ಸ್ ಹೈದರಾಬಾದ್
2017 - ಬೆಸಿಲ್ ಥಂಪಿ - ಗುಜರಾತ್ ಲಯನ್ಸ್
2018 - ರಿಷಬ್ ಪಂತ್ - ದೆಹಲಿ
2019 - ಶುಭಮನ್ ಗಿಲ್ - ಕೆಕೆಆರ್
2020 - ದೇವದತ್ ಪಡಿಕ್ಕಲ್ - ಆರ್ಸಿಬಿ
2021 - ಋತುರಾಜ್ ಗಾಯಕ್ವಾಡ್ - ಸಿಎಸ್ಕೆ
2022 - ಉಮ್ರಾನ್ ಮಲಿಕ್ - ಸನ್ರೈಸರ್ಸ್ ಹೈದರಾಬಾದ್
ಓದಿ: IPL ಯಶಸ್ಸಿಗೆ ಶ್ರಮಿಸಿದ ಕ್ರೀಡಾಂಗಣದ ಸಿಬ್ಬಂದಿಗೆ ಬಿಸಿಸಿಐ ಭರ್ಜರಿ ಗಿಫ್ಟ್.. ₹1.25 ಕೋಟಿ ಬಹುಮಾನ ಘೋಷಣೆ