ಶಾರ್ಜಾ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ದಾಖಲು ಮಾಡಿರುವ ಕೋಲ್ಕತ್ತಾ ಮೂರನೇ ಸಲ ಫೈನಲ್ಗೆ ಲಗ್ಗೆ ಹಾಕಿದ್ದು, ನಾಳೆ ಚೆನ್ನೈ ವಿರುದ್ಧ ಪ್ರಶಸ್ತಿಗಾಗಿ ಫೈಟ್ ನಡೆಸಲಿದೆ. ರಿಷಭ್ ಪಂತ್ ನೇತೃತ್ವದ ಗೆಲುವು ದಾಖಲು ಮಾಡಿದ ಬಳಿಕ ಕೆಕೆಆರ್ ಕ್ಯಾಪ್ಟನ್ ಮಾರ್ಗನ್ ಸಂತಸ ಹೊರಹಾಕಿದ್ದಾರೆ.
ಆರಂಭಿಕರಾದ ವೆಂಕಟೇಶ್ ಅಯ್ಯರ್ ಹಾಗೂ ಶುಭ್ಮನ್ ಗಿಲ್ ಅವರ ಉತ್ತಮ ಆರಂಭದಿಂದಾಗಿ ನಾವು ಸುಲಭ ಗೆಲುವು ದಾಖಲು ಮಾಡುವ ಇರಾದೆ ಇಟ್ಟುಕೊಂಡಿದ್ದೆವು. ಆದರೆ ಕೊನೆಯಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡಿದ್ದರಿಂದ ನಮಗೆ ಹಾದಿ ಕಠಿಣವಾಯಿತು. ಆದರೆ, ಕೊನೆಯ ಓವರ್ನಲ್ಲಿ ಗೆಲುವು ದಾಖಲು ಮಾಡಿದ್ದಕ್ಕಾಗಿ ತುಂಬಾ ಖುಷಿ ಇದೆ ಎಂದರು.
ಸುಲಭವಾಗಿ ಗೆಲುವು ಸಾಧಿಸಬಹುದಾಗಿತ್ತು. ಆದರೆ, ಎದುರಾಳಿ ತಂಡ ಡೆಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಕೊನೆಯ ಎರಡು ಎಸೆತಗಳಲ್ಲಿ 6 ರನ್ಗಳ ಅವಶ್ಯಕತೆ ಇದ್ದಾಗ ತ್ರಿಪಾಠಿ ಸಿಡಿಸಿದ ಸಿಕ್ಸರ್ ನಿಜಕ್ಕೂ ಅದ್ಭುತವಾಗಿತ್ತು. ಯುವ ಆಟಗಾರರಿಂದ ಕೂಡಿರುವ ತಂಡ ಮುನ್ನಡೆಸಲು ಸಂತೋಷವಾಗುತ್ತದೆ ಎಂದರು.
ಇದನ್ನೂ ಓದಿರಿ: ವೈರಲ್ ವಿಡಿಯೋ: ಶೌಚಾಲಯದಲ್ಲಿ ಪತ್ತೆಯಾಯ್ತು ಬೃಹತ್ ಕಾಳಿಂಗ ಸರ್ಪ
ಅಯ್ಯರ್ ಬಗ್ಗೆ ಮಾತನಾಡಿದ ಮಾರ್ಗನ್, ಅವರನ್ನ ಓಪನರ್ ಆಗಿ ಕಳುಹಿಸುವುದು ಕೋಚ್ ನಿರ್ಧಾರವಾಗಿತ್ತು. ಅತನೋರ್ವ ಅದ್ಭುತ ಪ್ರತಿಭೆ. ಅನೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ನಾವು ಸುಲಭವಾಗಿ ಗೆಲುವು ದಾಖಲು ಮಾಡಲು ಸಹಾಯ ಮಾಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ಅವರಿಂದ ಮೂಡಿ ಬರಲಿ ಎಂದು ಬಯಸುತ್ತೇವೆ ಎಂದರು.
ದುಬೈನಲ್ಲಿ ನಾಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯ ನಡೆಯಲಿದ್ದು, 2012ರ ನಂತರ ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.