ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಪಂಜಾಬ್ ತಂಡ ಮುಖಾಮುಖಿಯಾಗಿವೆ. ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಭರ್ಜರಿ 67ರನ್ಗಳ ನೆರವಿನಿಂದ ಮಾರ್ಗನ್ ಪಡೆ 165ರನ್ ಗಳಿಕೆ ಮಾಡಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮಾರ್ಗನ್ ಪಡೆ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಶುಬ್ಮನ್ ಗಿಲ್ ಕೇವಲ 7ರನ್ಗಳಿಕೆ ಮಾಡಿದ್ದ ವೇಳೆ ಅರ್ಷದೀಪ್ ಓವರ್ನಲ್ಲಿ ವಿಕೆಟ್ ಒಪ್ಪಿಸಿ, ನಿರಾಸೆ ಅನುಭವಿಸಿದರು. ಇದಾದ ಬಳಿಕ ಒಂದಾದ ಅಯ್ಯರ್-ತ್ರಿಪಾಠಿ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿತು.
-
The sound of TIMBER! 👌 👌@arshdeepsinghh bowled a cracker of a ball and dismissed Shubman Gill. 👍 👍 #VIVOIPL #KKRvPBKS @PunjabKingsIPL
— IndianPremierLeague (@IPL) October 1, 2021 " class="align-text-top noRightClick twitterSection" data="
Watch that wicket 🎥 👇https://t.co/MNEbeFbskQ
">The sound of TIMBER! 👌 👌@arshdeepsinghh bowled a cracker of a ball and dismissed Shubman Gill. 👍 👍 #VIVOIPL #KKRvPBKS @PunjabKingsIPL
— IndianPremierLeague (@IPL) October 1, 2021
Watch that wicket 🎥 👇https://t.co/MNEbeFbskQThe sound of TIMBER! 👌 👌@arshdeepsinghh bowled a cracker of a ball and dismissed Shubman Gill. 👍 👍 #VIVOIPL #KKRvPBKS @PunjabKingsIPL
— IndianPremierLeague (@IPL) October 1, 2021
Watch that wicket 🎥 👇https://t.co/MNEbeFbskQ
ಅಯ್ಯರ್-ತ್ರಿಪಾಠಿ ಅರ್ಧಶತಕದ ಜೊತೆಯಾಟ
ಕೇವಲ 18ರನ್ಗಳಿಕೆ ಮಾಡುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ತಂಡಕ್ಕೆ ಅಯ್ಯರ್-ತ್ರಿಪಾಠಿ ಜೋಡಿ ಉತ್ತಮ ಜೊತೆಯಾಟವಾಡಿದರು. 10 ಓವರ್ಗಳಲ್ಲಿ 76ರನ್ಗಳಿಕೆ ಮಾಡಿದರು. ಅಯ್ಯರ್ ಕೇವಲ 39 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಐಪಿಎಲ್ನಲ್ಲಿ ಅಯ್ಯರ್ ಬ್ಯಾಟ್ನಿಂದ ಮೂಡಿ ಬಂದ ಎರಡನೇ ಅರ್ಧಶತಕ ಇದಾಗಿದೆ.
ವಿಕೆಟ್ ಪಡೆದು ಮಿಂಚಿದ ಬಿಷ್ಣೋಯ್
67ರನ್ಗಳಿಕೆ ಮಾಡಿ ಉತ್ತಮವಾಗಿ ಆಡ್ತಿದ್ದ ವೆಂಕಟೇಶ್ ಅಯ್ಯರ್ ಹಾಗೂ 34ರನ್ಗಳಿಸಿದ್ದ ತ್ರಿಪಾಠಿ ವಿಕೆಟ್ ಪಡೆದುಕೊಳ್ಳುವಲ್ಲಿ ರವಿ ಬಿಷ್ಣೋಯ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಬಂದ ಕ್ಯಾಪ್ಟನ್ ಮಾರ್ಗನ್ ಕೂಡ 2ರನ್ಗಳಿಕೆ ಮಾಡಿದ್ದ ವೇಳೆ ಎಲ್ಬಿ ಬಲೆಗೆ ಬಿದ್ದರು.
ಮಿಂಚಿದ ರಾಣಾ
ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ವಿಕೆಟ್ ಬಿದ್ದ ವೇಳೆ ತಂಡಕ್ಕೆ ಆಧಾರವಾದ ರಾಣಾ, ಉತ್ತಮ ರನ್ ಕಾಣಿಕೆ ನೀಡಿದರು.ಕೇವಲ 18 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿ ಸೇರಿ 31ರನ್ಗಳಿಕೆ ಮಾಡಿ ಅರ್ಷದೀಪ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ದಿನೇಶ್ ಕಾರ್ತಿಕ್ 11,ಸಿಫರ್ಟ್ 2 ಹಾಗೂ ರಾಣಾ 3 ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 165ರನ್ಗಳಿಕೆ ಮಾಡಿತು.
ಪಂಜಾಬ್ ತಂಡದ ಪರ ಅರ್ಷದೀಪ್ 3 ವಿಕೆಟ್, ಬಿಷ್ಣೋಯ್ 2 ಹಾಗೂ ಶಮಿ 1 ವಿಕೆಟ್ ಪಡೆದುಕೊಂಡರು.ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳುವ ನಿಟ್ಟಿನಲ್ಲಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.