ETV Bharat / sports

2ನೇ ಹಂತದ ಐಪಿಎಲ್​​ನಲ್ಲಿ ಡೆಲ್ಲಿ ತಂಡ ಸೇರಿಕೊಳ್ಳಲು ದುಬೈ ತಲುಪಿದ ಸ್ಟೀವ್ ಸ್ಮಿತ್​

author img

By

Published : Sep 1, 2021, 4:53 PM IST

ಸ್ಮಿತ್​ ಮೊಣಕೈ ಗಾಯದ ಕಾರಣ ವೆಸ್ಟ್​ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಸೀಮಿತ ಓವರ್​ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಮೊದಲಾರ್ಧದ ಐಪಿಎಲ್ ಸಂದರ್ಭದಲ್ಲಿ ಸ್ಮಿತ್​ ಗಾಯದ ಸಮಸ್ಯೆಗೆ ಒಳಗಾಗಿದ್ದರು.

Steve Smith reaches Dubai
ಸ್ಟೀವ್ ಸ್ಮಿತ್​

ದುಬೈ: ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್​ 2ನೇ ಆವೃತ್ತಿಯ ಐಪಿಎಲ್​ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬುಧವಾರ ದುಬೈ ತಲುಪಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳುವ ಮುನ್ನ ಹೋಟೆಲ್​ನಲ್ಲಿ 6 ದಿನಗಳ ಕ್ವಾರಂಟೈನ್​ಗೆ ಒಳಗಾಗಲಿದ್ದಾರೆ.

2020ರ ಐಪಿಎಲ್ ರನ್ನರ್​ ಅಪ್​ ಆಗಿರುವ ಡೆಲ್ಲಿ ಫ್ರಾಂಚೈಸಿ 32 ವರ್ಷದ ಆಸೀಸ್​ ಸ್ಟಾರ್ ಹೋಟೆಲ್ ಪ್ರವೇಶಿಸುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ. "ನೋಡಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್​ ಸೇರಲು ಯಾರು ಆಗಮಿಸುತ್ತಿದ್ದಾರೆ. ಯುಎಇಗೆ ಸ್ವಾಗತ ಸ್ಮಿತ್​, ನಿಮ್ಮನ್ನು ನಮ್ಮ ಜೊತೆಗೆ ಸೇರಿಸಿಕೊಳ್ಳಲು ಕಾಯಲು ಸಾಧ್ಯವಾಗುತ್ತಿಲ್ಲ" ಎಂದು ಬರೆದುಕೊಂಡಿದೆ.

Look who's set foot in the DC camp 🤩

Welcome to 🇦🇪 Smudge, can't wait for you to enthrall all of us 💙#YehHaiNayiDilli #IPL2021 @stevesmith49 @SofitelDXBPalm pic.twitter.com/3GtN7xJnPj

— Delhi Capitals (@DelhiCapitals) September 1, 2021

ಸ್ಮಿತ್​ ಮೊಣಕೈ ಗಾಯದ ಕಾರಣ ವೆಸ್ಟ್​ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಸೀಮಿತ ಓವರ್​ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಮೊದಲಾರ್ಧದ ಐಪಿಎಲ್ ಸಂದರ್ಭದಲ್ಲಿ ಸ್ಮಿತ್​ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಸ್ಮಿತ್​ ಡೆಲ್ಲಿಪರ 3ನೇ ಕ್ರಮಾಂಕದಲ್ಲಿ ಆಡಿದ್ದರು. ಇದೀಗ ಶ್ರೇಯಸ್​ ಅಯ್ಯರ್ ಗಾಯದಿಂದ ಚೇತರಿಸಿಕೊಂಡಿರುವುದರಿಂದ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ಕೂತೂಹಲಕರ ಸಂಗತಿಯಾಗಿದೆ.

ಏಕೆಂದರೆ ಡೆಲ್ಲಿ ತಂಡದಲ್ಲಿ ರಬಾಡ ಮತ್ತು ಎನ್ರಿಚ್ ನೋಕಿಯಾ ಇಬ್ಬರು ವೇಗಿಗಳು ತಂಡದ ಬೌಲಿಂಗ್​ ಶಕ್ತಿಯಾಗಿದ್ದಾರೆ. ಸ್ಟೋಯ್ನಿಸ್ ಆಲ್​ರೌಂಡರ್​ ಸ್ಥಾನದಲ್ಲಿ ಆಡಲಿದ್ದಾರೆ. ಇನ್ನು ಉಳಿದಿರುವ ಒಂದು ಸ್ಥಾನದಕ್ಕಾಗಿ ಸ್ಮಿತ್ ಮತ್ತು ವಿಂಡೀಸ್ ಸ್ಟಾರ್​ ಶಿಮ್ರಾನ್ ಹೆಟ್ಮಾಯರ್​ ನಡುವೆ ಪೈಪೋಟಿ ನಡೆಯಲಿದೆ.

ಗಾಯದಿದ ಚೇತರಿಸಿಕೊಂಡಿರುವ ಸ್ಮಿತ್​ ಐಪಿಎಲ್ ಮೂಲಕ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲಿದ್ದಾರೆ. ನಂತರ ಟಿ20 ವಿಶ್ವಕಪ್ ಮತ್ತು ಆ್ಯಶಷ್​ ಸರಣಿಯಲ್ಲಿ ಬ್ಯುಸಿಯಾಗಲಿದ್ದಾರೆ.

ದುಬೈ: ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್​ 2ನೇ ಆವೃತ್ತಿಯ ಐಪಿಎಲ್​ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬುಧವಾರ ದುಬೈ ತಲುಪಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳುವ ಮುನ್ನ ಹೋಟೆಲ್​ನಲ್ಲಿ 6 ದಿನಗಳ ಕ್ವಾರಂಟೈನ್​ಗೆ ಒಳಗಾಗಲಿದ್ದಾರೆ.

2020ರ ಐಪಿಎಲ್ ರನ್ನರ್​ ಅಪ್​ ಆಗಿರುವ ಡೆಲ್ಲಿ ಫ್ರಾಂಚೈಸಿ 32 ವರ್ಷದ ಆಸೀಸ್​ ಸ್ಟಾರ್ ಹೋಟೆಲ್ ಪ್ರವೇಶಿಸುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ. "ನೋಡಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್​ ಸೇರಲು ಯಾರು ಆಗಮಿಸುತ್ತಿದ್ದಾರೆ. ಯುಎಇಗೆ ಸ್ವಾಗತ ಸ್ಮಿತ್​, ನಿಮ್ಮನ್ನು ನಮ್ಮ ಜೊತೆಗೆ ಸೇರಿಸಿಕೊಳ್ಳಲು ಕಾಯಲು ಸಾಧ್ಯವಾಗುತ್ತಿಲ್ಲ" ಎಂದು ಬರೆದುಕೊಂಡಿದೆ.

ಸ್ಮಿತ್​ ಮೊಣಕೈ ಗಾಯದ ಕಾರಣ ವೆಸ್ಟ್​ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಸೀಮಿತ ಓವರ್​ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಮೊದಲಾರ್ಧದ ಐಪಿಎಲ್ ಸಂದರ್ಭದಲ್ಲಿ ಸ್ಮಿತ್​ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಸ್ಮಿತ್​ ಡೆಲ್ಲಿಪರ 3ನೇ ಕ್ರಮಾಂಕದಲ್ಲಿ ಆಡಿದ್ದರು. ಇದೀಗ ಶ್ರೇಯಸ್​ ಅಯ್ಯರ್ ಗಾಯದಿಂದ ಚೇತರಿಸಿಕೊಂಡಿರುವುದರಿಂದ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ಕೂತೂಹಲಕರ ಸಂಗತಿಯಾಗಿದೆ.

ಏಕೆಂದರೆ ಡೆಲ್ಲಿ ತಂಡದಲ್ಲಿ ರಬಾಡ ಮತ್ತು ಎನ್ರಿಚ್ ನೋಕಿಯಾ ಇಬ್ಬರು ವೇಗಿಗಳು ತಂಡದ ಬೌಲಿಂಗ್​ ಶಕ್ತಿಯಾಗಿದ್ದಾರೆ. ಸ್ಟೋಯ್ನಿಸ್ ಆಲ್​ರೌಂಡರ್​ ಸ್ಥಾನದಲ್ಲಿ ಆಡಲಿದ್ದಾರೆ. ಇನ್ನು ಉಳಿದಿರುವ ಒಂದು ಸ್ಥಾನದಕ್ಕಾಗಿ ಸ್ಮಿತ್ ಮತ್ತು ವಿಂಡೀಸ್ ಸ್ಟಾರ್​ ಶಿಮ್ರಾನ್ ಹೆಟ್ಮಾಯರ್​ ನಡುವೆ ಪೈಪೋಟಿ ನಡೆಯಲಿದೆ.

ಗಾಯದಿದ ಚೇತರಿಸಿಕೊಂಡಿರುವ ಸ್ಮಿತ್​ ಐಪಿಎಲ್ ಮೂಲಕ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲಿದ್ದಾರೆ. ನಂತರ ಟಿ20 ವಿಶ್ವಕಪ್ ಮತ್ತು ಆ್ಯಶಷ್​ ಸರಣಿಯಲ್ಲಿ ಬ್ಯುಸಿಯಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.