ಅಬುಧಾಬಿ : ಮುಸ್ತಫಿಜುರ್ ರಹಮಾನ್ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ಕೇವಲ 154 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.
ಅಬುಧಾಬಿ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 36ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಂತ್ ಪಡೆ, ಆರಂಭದಿಂದಲೂ ರನ್ಗಳಿಸಲು ಪರದಾಡಿ ರಾಯಲ್ಸ್‌ಗೆ 155 ರನ್ಗಳ ಸಾಧಾರಣ ಗುರಿ ನೀಡಿತು.
-
INNINGS BREAK!
— IndianPremierLeague (@IPL) September 25, 2021 " class="align-text-top noRightClick twitterSection" data="
2⃣ wickets each for @Mustafiz90 & @Sakariya55
1⃣ wicket each for @tyagiktk & @rahultewatia02
4⃣3⃣ for @ShreyasIyer15
2⃣8⃣ for @SHetmyer
The #RR chase to begin shortly. #VIVOIPL #DCvRR
Scorecard 👉 https://t.co/SKdByWvPFO pic.twitter.com/tzvdRxEmeA
">INNINGS BREAK!
— IndianPremierLeague (@IPL) September 25, 2021
2⃣ wickets each for @Mustafiz90 & @Sakariya55
1⃣ wicket each for @tyagiktk & @rahultewatia02
4⃣3⃣ for @ShreyasIyer15
2⃣8⃣ for @SHetmyer
The #RR chase to begin shortly. #VIVOIPL #DCvRR
Scorecard 👉 https://t.co/SKdByWvPFO pic.twitter.com/tzvdRxEmeAINNINGS BREAK!
— IndianPremierLeague (@IPL) September 25, 2021
2⃣ wickets each for @Mustafiz90 & @Sakariya55
1⃣ wicket each for @tyagiktk & @rahultewatia02
4⃣3⃣ for @ShreyasIyer15
2⃣8⃣ for @SHetmyer
The #RR chase to begin shortly. #VIVOIPL #DCvRR
Scorecard 👉 https://t.co/SKdByWvPFO pic.twitter.com/tzvdRxEmeA
ಆರಂಭಿಕ ಬ್ಯಾಟರ್ಗಳಾದ ಪೃಥ್ವಿ ಶಾ(10) ಮತ್ತು ಶಿಖರ್ ಧವನ್(8) ಪವರ್ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ ಸೇರಿಕೊಂಡರು. ಶಾ ಸಕಾರಿಯಾಗೆ ವಿಕೆಟ್ ಒಪ್ಪಿಸಿದರೆ, ಧವನ್ ದುರಾದೃಷ್ಟ ರೀತಿಯಲ್ಲಿ ಕಾರ್ತಿಕ್ ತ್ಯಾಗಿ ಬೌಲಿಂಗ್ನಲ್ಲಿ ಬೌಲ್ಡ್ ಆದರು.
62 ರನ್ಗಳ ಜೊತೆಯಾಟ : ಕೇವಲ21ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ನಾಯಕ ಪಂತ್ ಮತ್ತು ಮಾಜಿ ನಾಯಕ ಅಯ್ಯರ್ 3ನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ಇನ್ನಿಂಗ್ಸ್ಗೆ ಜೀವ ತುಂಬಿದರು. ಪಂತ್ 24 ಎಸೆತಗಳಲ್ಲಿ 24 ರನ್ಗಳಿಸಿದ್ದ ವೇಳೆ ಮುಸ್ತಫಿಜುರ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಅದರು.
ಕೇವಲ 6 ರನ್ಗಳ ಅಂತರದಲ್ಲಿ 32 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್ಗಳ ಸಹಿತ 43 ರನ್ಗಳಿಸಿದ್ದ ಅಯ್ಯರ್, ತೆವಾಟಿಯಾ ಬೌಲಿಂಗ್ನಲ್ಲಿ ಸ್ಟಂಪ್ ಬಲೆಗೆ ಬಿದ್ದರು. ವಿಕೆಟ್ ಬೀಳುತ್ತಿದ್ದರೂ ಸ್ಕೋರ್ಗತಿಯನ್ನು ಹೆಚ್ಚಿಸುವುದಕ್ಕೆ ಮುಂದಾದ ಹೆಟ್ಮಾಯಿರ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ 28 ರನ್ಗಳಿಸಿ ಮುಸ್ತಫಿಜುರ್ಗೆ 2ನೇ ಬಲಿಯಾದರು.
ಅಕ್ಷರ್ ಪಟೇಲ್ 12, ಲಲಿತ್ ಯಾದವ್ 14 ರನ್ಗಳಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಚೇತನ್ ಸಕಾರಿಯಾ 33ಕ್ಕೆ 2, ಮುಸ್ತಫಿಜುರ್ ರಹಮಾನ್ 22ಕ್ಕೆ2, ರಾಹುಲ್ ತೆವಾಟಿಯಾ 17ಕ್ಕೆ 1 ಮತ್ತು ಕಾರ್ತಿಕ್ ತ್ಯಾಗಿ 40ಕ್ಕೆ 1 ವಿಕೆಟ್ ಪಡೆದರು.
ಇದನ್ನು ಓದಿ:ಆರ್ಸಿಬಿ ವಿರುದ್ಧದ ಗೆಲುವಿನ ಶ್ರೇಯ ಬೌಲರ್ಗಳಿಗೆ ಸಲ್ಲಬೇಕು : ಧೋನಿ