ಅಬುಧಾಬಿ: ಮುಂಬೈ ಇಂಡಿಯನ್ಸ್ ನೀಡಿರುವ 156ರನ್ಗಳ ಟಾರ್ಗೆಟ್ ಬೆನ್ನತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಗೆಲುವು ದಾಖಲು ಮಾಡಿದ್ದು, ಕೇವಲ 15.1 ಓವರ್ಗಳಲ್ಲಿ 159ರನ್ಗಳಿಕೆ ಮಾಡಿ 7 ವಿಕೆಟ್ಗಳ ಜಯ ಸಾಧಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ವೆಂಕಟೇಶ್ ಅಯ್ಯರ್(53) ಹಾಗೂ ರಾಹುಲ್ ತ್ರಿಪಾಠಿ ಅಜೇಯ 74ರನ್ಗಳ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಕೇವಲ 25 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸೇರಿದಂತೆ 50ರನ್ಗಳಿಕೆ ಮಾಡಿದ್ದು, ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡಿದ ರಾಹುಲ್ ತ್ರಿಪಾಠಿ ಕೂಡ 42 ಎಸೆತಗಳಲ್ಲಿ 3 ಸಿಕ್ಸರ್, 8 ಬೌಂಡರಿ ಸೇರಿದಂತೆ ಅಜೇಯ 74ರನ್ಗಳಿಕೆ ಮಾಡಿ ಬ್ಯಾಟಿಂಗ್ ತಂಡಕ್ಕೆ ಜಯತಂದಿಟ್ಟರು.
-
Maiden #VIVOIPL half-century for Venkatesh Iyer 👏 👏
— IndianPremierLeague (@IPL) September 23, 2021 " class="align-text-top noRightClick twitterSection" data="
What a knock he has been playing! 👌 👌@KKRiders zoom past hundred in the chase. 👍 👍
Follow the match 👉 https://t.co/SVn8iKC4Hl#VIVOIPL #MIvKKR pic.twitter.com/N3eBJrInIX
">Maiden #VIVOIPL half-century for Venkatesh Iyer 👏 👏
— IndianPremierLeague (@IPL) September 23, 2021
What a knock he has been playing! 👌 👌@KKRiders zoom past hundred in the chase. 👍 👍
Follow the match 👉 https://t.co/SVn8iKC4Hl#VIVOIPL #MIvKKR pic.twitter.com/N3eBJrInIXMaiden #VIVOIPL half-century for Venkatesh Iyer 👏 👏
— IndianPremierLeague (@IPL) September 23, 2021
What a knock he has been playing! 👌 👌@KKRiders zoom past hundred in the chase. 👍 👍
Follow the match 👉 https://t.co/SVn8iKC4Hl#VIVOIPL #MIvKKR pic.twitter.com/N3eBJrInIX
ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಾಳಿ ಕೆಕೆಆರ್ ತಂಡಕ್ಕೆ 156 ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಗೆ ನಾಯಕ ರೋಹಿತ್ ಶರ್ಮಾ(33) ಮತ್ತು ಡಿಕಾಕ್(55) ಅದ್ಭುತ ಆರಂಭ ಒದಗಿಸಿಕೊಟ್ಟರು. ಈ ಅನುಭವಿ ಜೋಡಿ ಮೊದಲ ವಿಕೆಟ್ಗೆ 78 ರನ್ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ನರೈನ್ ಬೇರ್ಪಡಿಸಿದರು. ರೋಹಿತ್ ಶರ್ಮಾ 30 ಎಸೆತಗಳಲ್ಲಿ 4 ಬೌಂಡರಿ ಸಹಿತ 33 ರನ್ ಸಿಡಿಸಿ ಔಟಾದರು.
-
INNINGS BREAK!
— IndianPremierLeague (@IPL) September 23, 2021 " class="align-text-top noRightClick twitterSection" data="
5⃣5⃣ for @QuinnyDeKock69
3⃣3⃣ for @ImRo45
2⃣ wickets each for @KKRiders' Lockie Ferguson & @prasidh43
The #KKR chase to begin shortly. #VIVOIPL #MIvKKR
Scorecard 👉 https://t.co/SVn8iKC4Hl pic.twitter.com/x3Y7VVTfYP
">INNINGS BREAK!
— IndianPremierLeague (@IPL) September 23, 2021
5⃣5⃣ for @QuinnyDeKock69
3⃣3⃣ for @ImRo45
2⃣ wickets each for @KKRiders' Lockie Ferguson & @prasidh43
The #KKR chase to begin shortly. #VIVOIPL #MIvKKR
Scorecard 👉 https://t.co/SVn8iKC4Hl pic.twitter.com/x3Y7VVTfYPINNINGS BREAK!
— IndianPremierLeague (@IPL) September 23, 2021
5⃣5⃣ for @QuinnyDeKock69
3⃣3⃣ for @ImRo45
2⃣ wickets each for @KKRiders' Lockie Ferguson & @prasidh43
The #KKR chase to begin shortly. #VIVOIPL #MIvKKR
Scorecard 👉 https://t.co/SVn8iKC4Hl pic.twitter.com/x3Y7VVTfYP
ನಂತರ ಬಂದ ಸೂರ್ಯಕುಮಾರ್ ಕೇವಲ 5 ರನ್ಗಳಿಸಿ ಪ್ರಸಿಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿ ತಮ್ಮ ವೈಫಲ್ಯವನ್ನು ಮುಂದುವರಿಸಿದರು. ಇವರ ಬೆನ್ನಲ್ಲೇ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 55 ರನ್ಗಳಿಸಿದ್ದ ಡಿಕಾಕ್ ಕೂಡ ಪ್ರಸಿಧ್ಗೆ ಎರಡನೇ ಬಲಿಯಾದರು. ಇವರ ವಿಕೆಟ್ ಪತನದ ನಂತರ ಮುಂಬೈ ರನ್ ಗತಿ ಕೆಕೆಆರ್ ಕಡಿವಾಣ ಹಾಕುವ ಜೊತೆಗೆ ಮಹತ್ವದ ವಿಕೆಟ್ ಪಡೆದು ಮೇಲುಗೈ ಸಾಧಿಸಿದರು.
ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ 14, ಕೀರನ್ ಪೊಲಾರ್ಡ್ 15 ಎಸೆತಗಳಲ್ಲಿ 21, ಕೃನಾಲ್ ಪಾಂಡ್ಯ 12 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಕೊನೆಯ ಓವರ್ನಲ್ಲಿ ಲಾಕಿ ಫರ್ಗ್ಯುಸನ್ ಕೇವಲ 6 ರನ್ ನೀಡಿದ ಪೊಲಾರ್ಡ್ ಮತ್ತು ಪಾಂಡ್ಯ ವಿಕೆಟ್ ಪಡೆದು ಮುಂಬೈ ದೊಡ್ಡ ಮೊತ್ತ ಪೇರಿಸದಂತೆ ತಡೆದರು. ಕನ್ನಡಿಗ ಪ್ರಸಿಧ್ ಕೃಷ್ಣ ಪ್ರಮುಖ 2 ವಿಕೆಟ್ ಪಡೆದರೂ 43 ರನ್ ನೀಡಿ ದುಬಾರಿಯಾದರು. ಉಳಿದಂತೆ ನರೈನ್ 20ರನ್ ನೀಡಿದ ಒಂದು ವಿಕೆಟ್ ಪಡೆದರೆ, ಚಕ್ರವರ್ತಿ ಯಾವುದೇ ವಿಕೆಟ್ ಪಡೆಯದಿದ್ದರೂ 4 ಓವರ್ಗಳಲ್ಲಿ 22 ರನ್ ನೀಡಿ ಮುಂಬೈ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಇದನ್ನು ಓದಿ: ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಮೊದಲ ಬ್ಯಾಟರ್