ETV Bharat / sports

ನಾಳೆ ಮ್ಯಾಂಚೆಸ್ಟರ್‌ನಿಂದ ದುಬೈಗೆ ಸಿಎಸ್‌ಕೆ ಆಟಗಾರರ ಪ್ರಯಾಣ?: ಸಿಇಒ ಹೇಳಿದ್ದೇನು..

ಸೆಪ್ಟೆಂಬರ್​ 19ರಂದು ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡ ಸೆಣಸಾಟ ನಡೆಸಲಿದೆ. ಆದ್ರೆ ಪ್ರಮುಖ ಪ್ಲೇಯರ್ಸ್​​ ಇಂಗ್ಲೆಂಡ್​ನಲ್ಲಿರುವ ಕಾರಣ ಯಾವ ರೀತಿಯಾಗಿ ಐಪಿಎಲ್​ ಆರಂಭಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

CSK
CSK
author img

By

Published : Sep 10, 2021, 6:03 PM IST

ದುಬೈ: ಸೆಪ್ಟೆಂಬರ್​ 19ರಿಂದ ಯುಎಇನಲ್ಲಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳು ಆರಂಭಗೊಳ್ಳಲಿವೆ. ಟೂರ್ನಿ ಆರಂಭಗೊಳ್ಳಲು ಕೇವಲ 9 ದಿನಗಳು ಮಾತ್ರ ಬಾಕಿ ಉಳಿದಿವೆ.

ಇದರ ಮಧ್ಯೆ ಇಂಗ್ಲೆಂಡ್​ನಲ್ಲಿರುವ ಟೀಂ ಇಂಡಿಯಾ ತಂಡದಲ್ಲಿ ಕೊರೊನಾ ಕಾಣಿಸಿಕೊಂಡಿರುವ ಕಾರಣ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ ಫೈನಲ್​ ಟೆಸ್ಟ್​​ ಪಂದ್ಯ ರದ್ಧುಗೊಂಡಿದೆ. ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲು ಬಿಸಿಸಿಐ-ಇಸಿಬಿ ಮಾತುಕತೆ ನಡೆಸುತ್ತಿವೆ. ಇಂದು ಐಪಿಎಲ್​​ನ ಕೆಲವೊಂದು ಫ್ರಾಂಚೈಸಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇಂಗ್ಲೆಂಡ್​ ಪ್ರವಾಸದಲ್ಲಿರುವ ಅನೇಕ ಪ್ಲೇಯರ್ಸ್​ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಭಾಗಿಯಾಗಬೇಕಾಗಿರುವ ಕಾರಣ, ಅವರ ಬರುವಿಕೆಗಾಗಿ ಫ್ರಾಂಚೈಸಿಗಳು ಕಾಯುತ್ತಿವೆ. ಒಂದು ವೇಳೆ ಫೈನಲ್‌ ಟೆಸ್ಟ್​​ ಪಂದ್ಯ ಮುಂದಿನ ಎರಡು ದಿನಗಳಲ್ಲಿ ಮರುನಿಗದಿಯಾದರೆ, ಅದರಲ್ಲಿ ಭಾಗಿಯಾಗಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳಲಿದೆ. ಈ ಎಲ್ಲ ಪ್ಲೇಯರ್ಸ್​​ಗಳ ಅನುಪಸ್ಥಿತಿಯಲ್ಲೇ ಕೆಲವೊಂದು ಐಪಿಎಲ್​ ಪಂದ್ಯಗಳು ನಡೆಯುವ ಸಾಧ್ಯತೆ ಇದೆ.

ಸಿಎಸ್​ಕೆ ಸಿಇಒ ಹೇಳಿದ್ದೇನು?

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್​ ಸಿಇಒ ಕಾಶಿ ವಿಶ್ವನಾಥನ್​, ಇಂಗ್ಲೆಂಡ್​ನಲ್ಲಿರುವ ನಮ್ಮ ತಂಡದ ಪ್ಲೇಯರ್ಸ್​ ನಾಳೆ ಪ್ರಯಾಣ ಆರಂಭಿಸುವ ಸಾಧ್ಯತೆ ಇದ್ದು, ಇಲ್ಲಿಗೆ ಬರುತ್ತಿದ್ದಂತೆ ಆರು ದಿನಗಳ ಕಾಲ ಕ್ವಾರಂಟೈನ್​​ಗೊಳಗಾಗಲಿದ್ದಾರೆ ಎಂದು ತಿಳಿಸಿದೆ.

ಎಎನ್​ಐ ಜೊತೆ ಮಾತನಾಡಿರುವ ಕಾಶಿ ವಿಶ್ವನಾಥನ್​, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಹಾಗೂ ಚೇತೇಶ್ವರ್ ಪೂಜಾರಾ ಮ್ಯಾಂಚೆಸ್ಟರ್​​ನಿಂದ ನಾಳೆ ಪ್ರಯಾಣ ಆರಂಭಿಸುವ ಸಾಧ್ಯತೆ ಇದ್ದು, ಆರು ದಿನಗಳ ಕಾಲ ಕ್ವಾರಂಟೈನ್​​ಗೊಳಗಾಗಿ ತದನಂತರ ತಂಡ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.

ಸೆಪ್ಟೆಂಬರ್​ 19ರಂದು ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡ ಸೆಣಸಾಟ ನಡೆಸಲಿದ್ದು, ಪ್ರಮುಖ ಪ್ಲೇಯರ್ಸ್​​ ಇಂಗ್ಲೆಂಡ್​ನಲ್ಲಿರುವ ಕಾರಣ ಯಾವ ರೀತಿಯಾಗಿ ಐಪಿಎಲ್​ ಆರಂಭಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: 5ನೇ ಟೆಸ್ಟ್​​ ಪಂದ್ಯ ರದ್ದು: ಮರು ವೇಳಾಪಟ್ಟಿಗೆ ಇಂಗ್ಲೆಂಡ್​ ಜೊತೆ ಬಿಸಿಸಿಐ ಬಿಸಿ ಬಿಸಿ ಚರ್ಚೆ

ಪ್ರಮುಖವಾಗಿ ಆರ್​ಸಿಬಿ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಡೆಲ್ಲಿ ಕ್ಯಾಪ್ಟನ್ ರಿಷಭ್ ಪಂತ್​ ಸೇರಿದಂತೆ ಪೃಥ್ವಿ ಶಾ, ಮಯಾಂಕ್​ ಅಗರ್‌ವಾಲ್​, ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಪ್ಲೇಯರ್ಸ್​​ ಲಂಡನ್​​ನಲ್ಲಿದ್ದು, ಐಪಿಎಲ್​​ ಆರಂಭಿಕ ಪಂದ್ಯಗಳು ಯಾವ ರೀತಿಯಾಗಿ ನಡೆಯಲಿವೆ ಎಂಬ ಗೊಂದಲ ಉಂಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.