ಚೆನ್ನೈ: ಸನ್‌ರೈಸರ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸೂಪರ್ ಓವರ್ಗೆ ನನ್ನನ್ನೇ ಆಯ್ಕೆ ಮಾಡುವಂತೆ ರಿಷಭ್ ಪಂತ್ ಮತ್ತು ಪಾಂಟಿಂಗ್ ಬಳಿ ನಾನೇ ಮನವಿ ಮಾಡಿಕೊಂಡೆ ಎಂದು ಸ್ಪಿನ್ನರ್ ಅಕ್ಷರ್ ಪಟೇಲ್ ತಿಳಿಸಿದ್ದಾರೆ.
ಭಾನುವಾರ ಚೆಪಾಕ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಹಾಗಾಗಿ ಸೂಪರ್ ಓವರ್ನಲ್ಲಿ ಎಂದಿನಂತೆ ಸ್ಟಾರ್ ವೇಗಿ ಕಗಿಸೋ ರಬಾಡ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಹಂತದಲ್ಲಿ ಅಕ್ಷರ್ ಪಟೇಲ್ಗೆ ಚೆಂಡನ್ನು ನೀಡಿ ಅಚ್ಚರಿ ಮೂಡಿಸಿತ್ತು. ಆದರೆ, ಸೂಪರ್ ಓವರ್ನಲ್ಲಿ ಬೌಲಿಂಗ್ ಮಾಡುವ ನಿರ್ಧಾರ ತಮ್ಮದೇ ಆಗಿತ್ತೆಂದು ಪಟೇಲ್ ತಿಳಿಸಿದ್ದಾರೆ.
" ಪಂದ್ಯ ಟೈ ಆದ ನಂತರ ನಾನು ರಿಷಭ್ ಪಂತ್ ಜೊತೆ ಡ್ರೆಸಿಂಗ್ ರೂಮಿನಲ್ಲಿದ್ದೆ. ಪೇಸರ್ ಸೂಪರ್ ಓವರ್ ಮಾಡುವುದು ಸರಿಯಾದ ಸಂಯೋಜನೆ ಎಂದು ಆರಂಭದಲ್ಲಿ ಮಾತನಾಡಲಾಗಿತ್ತು. ನನಗೆ ಈ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುತ್ತದೆ ಎಂದು ತಿಳಿದಿತ್ತು. ಆದ್ದರಿಂದ ಈ ಪಿಚ್‌ನಲ್ಲಿ ಸೀಮರ್ಗಿಂತಲೂ ಸ್ಪಿನ್ನರ್ ಬೌಲಿಂಗ್ ಮಾಡುವುದು ತುಂಬಾ ಪರಿಣಾಮಕಾರಿಯಾಗಿರುತ್ತದೆ ಎಂದು ಪಂತ್ಗೆ ಹೇಳಿದೆ" ಎಂದು ಅಕ್ಷರ್ ತಿಳಿಸಿದ್ದಾರೆ.
" ನಂತರ ರಿಷಬ್ ಪಂತ್ ಕೋಚ್ ರಿಕಿ ಪಾಂಟಿಂಗ್ ಜೊತೆಗೆ ಮಾತನಾಡಿ ಕೊನೆ ಗಳಿಗೆಯಲ್ಲಿ ನನಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು" ಎಂದು ಅಕ್ಷರ್ ಪಟೇಲ್ ತಿಳಿಸಿದ್ದಾರೆ.
ಸೂಪರ್ ಓವರ್ರನ್ನು ಅದ್ಭುತವಾಗಿ ಮಾಡಿದ ಅಕ್ಷರ್ ಕೇವಲ 7 ರನ್ ಬಿಟ್ಟುಕೊಟ್ಟರು. ಈ ಮೊತ್ತವನ್ನು ರಿಷಭ್ ಪಂತ್ ಮತ್ತು ಧವನ್ 6 ಎಸೆತಗಳಲ್ಲಿ ಯಶಸ್ವಿಯಾಗಿ ಚೇಸ್ ಮಾಡಿದರು.