ಹೈದರಾಬಾದ್: ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಕಾರಣರಾದ ಇಶಾನ್ ಕಿಶಾನ್ ಮತ್ತು ಸೂರ್ಯಕುಮಾರ್ ಯಾದವ್ ಈಗ ತಂಡದ ಸೂಪರ್ ಸ್ಟಾರ್ಗಳಾಗಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದರು.
ಕಿಶಾನ್ - 57.33 ಸರಾಸರಿಯಲ್ಲಿ 516 ರನ್ಗಳನ್ನು ಗಳಿಸಿ 145.76 ಸ್ಟ್ರೈಕ್ ರೇಟ್ನಲ್ಲಿದ್ದಾರೆ. 40ರ ಸರಾಸರಿಯಲ್ಲಿ 480 ರನ್ಗಳನ್ನು ಕಲೆ ಹಾಕಿರುವ ಯಾದವ್ 145.01 ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದಾರೆ. ಈ ಸೀಸನ್ನ ಅತೀ ಹೆಚ್ಚು ರನ್ ಗಳಿಸುವವರ ಪಟ್ಟಿಯಲ್ಲಿ ಕಿಶಾನ್ 5 ಮತ್ತು ಯಾದವ್ 7ನೇ ಸ್ಥಾನವನ್ನ ಪಡೆದುಕೊಂಡಿದ್ದಾರೆ. ಇನ್ನು ಐಪಿಎಲ್ನ ಅತಿ ಹೆಚ್ಚು ರನ್ ಗಳಿಸುವವರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿರುವ ಎಬಿ ಡಿವಿಲಿಯರ್ಸ್ ಇವರಿಬ್ಬರಗಿಂತ ಉತ್ತಮ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಈ ಐಪಿಎಲ್ನ ಅತಿ ಹೆಚ್ಚು ರನ್ ಗಳಿಸುವವರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿರುವ ಕ್ವಿಂಟನ್ ಡಿ ಕಾಕ್ ಆರಂಭಿಕ ಬ್ಯಾಟಿಂಗ್ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಂತೆ ಕಿಶಾನ್ ಮತ್ತು ಯಾದವ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಉತ್ತಮವಾಗಿದ್ದು, ತಂಡದ ಗೆಲುವಿಗೆ ಕಾರಣವಾಯ್ತು ಎಂದು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.
ಕಳೆದ ವರ್ಷ ನಮ್ಮ ಮಧ್ಯಮ ಕ್ರಮಾಂಕ ಕ್ಲಿಕ್ ಆಗಿರಲಿಲ್ಲ. ಈ ಬಗ್ಗೆ ನಾವು ಚರ್ಚೆ ಮಾಡಿದ್ದೆವು. ಇಶಾನ್ ಉತ್ತಮ ಆಟದಿಂದ ನಮ್ಮ ಮಧ್ಯಮ ಕ್ರಮಾಂಕ ಕ್ಲಿಕ್ ಆಯ್ತು. ಇಶಾನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಟವಾಡಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಅವರು ತಮ್ಮ ಆಟವನ್ನು ಅರ್ಥಮಾಡಿಕೊಂಡು ಆಟವಾಡುತ್ತಿದ್ದರು. ಬೌಂಡರಿಗಳು ಮತ್ತು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ಇಶಾನ್ ಒಬ್ಬ ಅಪಾಯಕಾರಿ ಬ್ಯಾಟ್ಸ್‌ಮನ್‌ನ್ನಾಗಿ ಕಂಡರು ಎಂದು ರೋಹಿತ್ ಹೇಳಿದರು.
ಸೂರ್ಯಕುಮಾರ್ ಯಾದವ್ ತನ್ನ ಆಟವನ್ನು ಬೇರೆ ಹಂತಕ್ಕೆ ಕೊಂಡೊಯ್ಯುತ್ತಾರೆ. ವಿಕೆಟ್ ಬಿದ್ರೂ ಸಹ ಸೂರ್ಯ ತನ್ನ ಆಟವನ್ನು ಮುಂದುವರಿಸುತ್ತಾರೆ. ಅದು ಗುಣಮಟ್ಟದ ಆಟಗಾರನ ಸಂಕೇತ. ಮೂರನೇ ಕ್ರಮಾಂಕದಲ್ಲಿ ಆಡುವುದು ನಿರ್ಣಾಯಕ ಸ್ಥಾನದ ಆಟವಾಗಿದೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದರು.