ETV Bharat / sports

ಐಪಿಎಲ್​ ಪಂದ್ಯದ ವೇಳೆ ಆಟಗಾರರು ಎರಡೆರಡು ಕ್ಯಾಪ್​ ಹಾಕಿಕೊಳ್ಳೋದು ಯಾಕೆ ಗೊತ್ತಾ?

ಆಟಗಾರರು ಮತ್ತು ಅಂಪೈರ್‌ಗಳು ಕ್ರಿಕೆಟ್ ಮೈದಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೀಗಾಗಿ ಆಟಗಾರರು ಟವೆಲ್​, ಸನ್​ ಗ್ಲಾಸ್​, ಕ್ಯಾಪ್​ಗಳನ್ನು ಅಂಪೈರ್​ ಬಳಿ ಕೊಟ್ಟು ಹೋಗುವಂತಿಲ್ಲ.

Why are cricketers wearing two caps in IPL 2020?
ಎರಡೆರಡು ಕ್ಯಾಪ್​ ಧರಿಸೋ ಆಟಗಾರರು
author img

By

Published : Oct 23, 2020, 10:42 AM IST

ದುಬೈ: ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಜನರ ದೈನಂದಿನ ಜೀವನ ಶೈಲಿಯಲ್ಲಿ ಹಲವು ಬದಲಾವಣೆಗಳಾಗಿದ್ದು, ಇದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಹಲವು ನಿಯಮ ಜಾರಿಗೆ ತರಲಾಗಿದೆ.

ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್​ಲೀಗ್​ ಪಂದ್ಯಗಳಲ್ಲಿ ಬೌಲಿಂಗ್ ಮಾಡುತ್ತಿರುವ ತಂಡದ ನಾಯಕ ಅಥವಾ ಆಟಗಾರನೊಬ್ಬ ಎರಡೆರಡು ಕ್ಯಾಪ್ ಧರಿಸುತ್ತಿರುವುದನ್ನು ಕಾಣಬಹುದಾಗಿದೆ. ಮೊನ್ನೆ ನಡೆದ ಆರ್​ಸಿಬಿ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ನಾಯಕ ಇಯಾನ್ ಮಾರ್ಗನ್ 2 ಕ್ಯಾಪ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

  • Just see this run out. Eoin Morgan is wearing two caps, probably Narain's on top of his own. Warner was doing the same the other day. Bowlers seemingly are not handing their caps in to the umpire.
    Has anyone noticed with the other teams? pic.twitter.com/Y7RBF1zbrx

    — Joy Bhattacharjya (@joybhattacharj) September 23, 2020 " class="align-text-top noRightClick twitterSection" data=" ">

ಈ ಹಿಂದೆ ಬೌಲರ್​ಗಳು ಬೌಲಿಂಗ್ ಮಾಡುವ ಮುನ್ನ ತಮ್ಮ ಟೋಪಿಯನ್ನು ಅಂಪೈರ್​ಗೆ ನೀಡುತ್ತಿದ್ದರು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಅಂಪೈರ್​ಗೆ ಬದಲಾಗಿ ತಂಡದ ನಾಯಕ ಅಥವಾ ಸಹ ಆಟಗಾರರಿಗೆ ಟೋಪಿಯನ್ನು ನೀಡಲಾಗುತ್ತಿದೆ. ಹೀಗಾಗಿ ಕೆಲವರ ತಲೆಯ ಮೇಲೆ ಎರಡೆರಡು ಕ್ಯಾಪ್​ ಕಾಣಿಸುತ್ತಿವೆ.

ಪಂದ್ಯದ ವೇಳೆ ಆಟಗಾರರು ಟವೆಲ್​, ಸನ್ ​ಗ್ಲಾಸ್​, ಕ್ಯಾಪ್​ ಇಟ್ಟುಕೊಂಡಿರುತ್ತಾರೆ. ಇವುಗಳನ್ನು ಅಂಪೈರ್​ ಬಳಿ ಕೊಟ್ಟು ಹೋಗುವಂತಿಲ್ಲ. ಹೀಗಾಗಿ, ಅವರು ತಂದಿರುವ ಎಲ್ಲಾ ವಸ್ತುಗಳನ್ನು ಅವರೇ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಟಗಾರರು ಮತ್ತು ಅಂಪೈರ್‌ಗಳು ಕ್ರಿಕೆಟ್ ಮೈದಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.