ETV Bharat / sports

ಮೈದಾನದಲ್ಲಿದ್ದರೂ ಪತ್ನಿಯ ಯೋಗಕ್ಷೇಮ ವಿಚಾರಿಸಿದ ವಿರಾಟ್ ಕೊಹ್ಲಿ: ವಿಡಿಯೋ

ಮೈದಾನದಲ್ಲಿದ್ದರೂ ಗರ್ಭಿಣಿ ಪತ್ನಿಯ ಬಗ್ಗೆ ಕಾಳಜಿ ತೋರಿದ ವಿರಾಟ್ ಕೊಹ್ಲಿ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Virat Kohli's Adorable Gesture For Anushka Sharma
ಪತ್ನಿಯ ಯೋಗಕ್ಷೇಮ ವಿಚಾರಿಸಿದ ವಿರಾಟ್
author img

By

Published : Oct 29, 2020, 1:32 PM IST

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮಾ ಅವರ ಕ್ಷೇಮ ವಿಚಾರಿಸಿದ ವಿಡಿಯೋ ವೈರಲ್ ಆಗಿದೆ.

ಈ ಬಾರಿಯ ಐಪಿಎಲ್ ಪಂದ್ಯ ಯುಎಇನಲ್ಲಿ ನಡೆಯುತ್ತಿರುವ ಕಾರಣ ಪತ್ನಿ ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್ ಪ್ರತಿನಿಧಿಸುತ್ತಿರುವ ಆರ್​ಸಿಬಿ ತಂಡವನ್ನು ಚಿಯರ್ ಮಾಡಲು ದುಬೈಗೆ ತೆರಳಿದ್ದಾರೆ. ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಅನುಷ್ಕಾ ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸುತ್ತಾರೆ.

ಭಾನುವಾರ ದುಬೈನಲ್ಲಿ ನಡೆದ ಪಂದ್ಯದ ವೇಳೆ ಅನುಷ್ಕಾ ಶರ್ಮಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಸನ್ನೆಯ ಮೂಲಕವೇ ಊಟ ಆಯ್ತಾ? ಎಂದು ಪತ್ನಿಗೆ ಕೇಳಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ, ತಂಬ್ಸ್​​ ಅಪ್ ಸನ್ನೆಯ ಮೂಲಕ ಪತಿಗೆ ಸಂದೇಶ ನೀಡಿದ್ರು. ಗರ್ಭಿಣಿ ಪತ್ನಿಯ ಯೋಗಕ್ಷೇಮ ವಿಚಾರಿಸಿದ ವಿರಾಟ್ ನಡೆ, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ ನೀಡಿದ 146 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 18.4 ಓವರ್​ಗಳಲ್ಲಿ ಗೆಲುವಿನ ಗಡಿ ದಾಟುವ ಮೂಲಕ ಸೋಲಿನ ಸರಪಳಿ ಕಳಚಿತು. ಯುವ ಬ್ಯಾಟ್ಸ್​ಮನ್ ರುತುರಾಜ್​ 51 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ ಅಜೇಯ 65 ರನ್​ಗಳಿಸಿ ಗೆಲುವಿನ ರೂವಾರಿಯಾದರು. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.