ETV Bharat / sports

ಮತ್ತೊಮ್ಮೆ 'ವಿವಾದ'ದ ಸುಳಿಯಲ್ಲಿ ನರೈನ್​ : ತಪ್ಪು ಮರುಕಳಿಸಿದ್ರೆ ಐಪಿಎಲ್​ನಿಂದ ಔಟ್​? - ಸುನೀಲ್ ನರೈನ್ ವಿವಾದಾತ್ಮಕ ಬೌಲಿಂಗ್​ ಶೈಲಿ

ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರಮುಖ​ ಸ್ಪಿನ್ನರ್ ಸುನೀಲ್​ ನರೈನ್ ಅವರ ಬೌಲಿಂಗ್​ ಶೈಲಿಯು ವಿವಾದಾತ್ಮಕವಾಗಿದೆ ಎಂಬ ದೂರು ಮತ್ತೊಮ್ಮೆ ಕೇಳಿಬಂದಿದೆ. ​

sunil-narine-reported-for-suspected-illegal-bowling-action-again
ಸುನೀಲ್​ ನರೈನ್
author img

By

Published : Oct 11, 2020, 4:11 AM IST

Updated : Oct 11, 2020, 6:06 AM IST

ಅಬುಧಾಬಿ : ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್​ ಸ್ಪಿನ್ನರ್ ಸುನೀಲ್​ ನರೈನ್​ ಮತ್ತೊಮ್ಮೆ ವಿವಾದಾತ್ಮಕ ಶೈಲಿಯಲ್ಲಿ ಬೌಲಿಂಗ್​ ಮಾಡಿ ಸುದ್ದಿಯಾಗಿದ್ದಾರೆ. ಪಂಜಾಬ್​ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ನರೈನ್ ಅಸಂಬದ್ಧ ಶೈಲಿಯ ಬೌಲಿಂಗ್​ ಬಗ್ಗೆ ಅಂಪೈರ್​ಗಳು ಐಪಿಎಲ್​ ಆಡಳಿತ​​ ಮಂಡಳಿಗೆ ವರದಿ ನೀಡಿದ್ದಾರೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ ನರೈನ್​ ಬೌಲಿಂಗ್​ ಶೈಲಿ ವಿವಾದಾತ್ಮಕವಾಗಿತ್ತು ಎಂದು ಮೈದಾನದಲ್ಲಿದ್ದ ಅಂಪೈರ್​ಗಳು ವರದಿ ನೀಡಿದ್ದಾರೆ. ಈ ಬಗ್ಗೆ ನರೈನ್​​ಗೆ ಎಚ್ಚರಿಕೆ ನೀಡಲಾಗುವುದು. ಅವರು ಟೂರ್ನಿಯಲ್ಲಿ ಮುಂದುವರೆಯಬಹುದು. ಆದರೆ ಮುಂದೊಮ್ಮೆ ಇದೇ ತಪ್ಪು ಮರುಕಳಿಸಿದರೆ ಐಪಿಎಲ್​-2020ಯಲ್ಲಿ ಅವರು ಬೌಲಿಂಗ್​ ಮಾಡುವಂತಿಲ್ಲ. ಬಿಸಿಸಿಐನ ವಿವಾದಾತ್ಮಕ ಬೌಲಿಂಗ್​ ಶೈಲಿ ಸಮಿತಿಯು ಈ ಬಗ್ಗೆ ಅನುಮತಿ ನೀಡುವವರೆಗೆ ಅವರಿಗೆ ಬೌಲಿಂಗ್​ ಅವಕಾಶವಿರುವುದಿಲ್ಲ ಎಂದು ಐಪಿಎಲ್ ಆಡಳಿತ​​ ಮಂಡಳಿ ತಿಳಿಸಿದೆ.

ಒಂದು ವೇಳೆ ನರೈನ್​ ಬೌಲಿಂಗ್​ನಿಂದ ನಿಷೇಧಕ್ಕೊಳಗಾದರೆ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ 28 ರನ್​ಗೆ 2 ವಿಕೆಟ್​ ಪಡೆದ ಅವರು, ಕೊನೆಯ ಓವರ್​ನಲ್ಲಿ ಉತ್ತಮ ನಿರ್ವಹಣೆಯಿಂದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ನರೈನ್​ ಬೌಲಿಂಗ್ ಬಗ್ಗೆ ಈ ರೀತಿಯ ದೂರುಗಳು ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಅವರ ಬೌಲಿಂಗ್​ ಶೈಲಿ ಬಗ್ಗೆ ವಿವಾದಾತ್ಮಕವಾಗಿದ್ದ ಹಿನ್ನೆಲೆ 2014ರ ಚಾಂಪಿಯನ್ಸ್ ಟ್ರೋಫಿ, 2015ರ ವಿಶ್ವಕಪ್‍ನಲ್ಲಿ ಕೆರಿಬಿಯನ್​ ತಂಡದಿಂದ ಹೊರಗುಳಿಯುವಂತಾಗಿತ್ತು.

Last Updated : Oct 11, 2020, 6:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.