ದುಬೈ: ವೇಗಿ ಜೋಫ್ರಾ ಆರ್ಚರ್ಗೆ ಪವರ್ ಪ್ಲೇನಲ್ಲಿ ಮತ್ತೊಂದು ಓವರ್ ಬೌಲಿಂಗ್ ಮಾಡಲು ಅವಕಾಶ ನೀಡದಿರುವುದೇ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಸ್ಟೀವ್ ಸ್ಮಿತ್, "ಪವರ್ ಪ್ಲೇನಲ್ಲಿ ಆರ್ಚರ್ಗೆ ಮತ್ತೊಂದು ಓವರ್ ಬೌಲಿಂಗ್ ನೀಡುವ ಬಗ್ಗೆ ಇತರ ಕೆಲವು ಆಟಗಾರರ ಜೊತೆ ಸಮಾಲೋಚಿಸಿದೆ. ಆದರೆ ಬೌಲಿಂಗ್ ನೀಡದಿರುವ ಬಗ್ಗೆ ಅಭಿಪ್ರಾಯ ಕೇಳಿಬಂತು. ಬಹುಶಃ ಅವರಿಗೆ ಇನ್ನೊಂದು ಓವರ್ ನೀಡಬಹುದಿತ್ತು. ನನ್ನ ಮನಸ್ಸಿನಲ್ಲಿ ಕೂಡ ಅದೇ ಇತ್ತು" ಎಂದಿದ್ದಾರೆ.
![Jofra Archer](https://etvbharatimages.akamaized.net/etvbharat/prod-images/9267562_jofra-archer-2.jpg)
ಇನ್ನಿಂಗ್ಸ್ನ ಆರಂಭದಲ್ಲಿ ಮಿಂಚಿದ ಆರ್ಚರ್, ಹೈದರಾಬಾದ್ ತಂಡದ ಓಪನರ್‌ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್ಸ್ಟೋವ್‌ರನ್ನು ಪೆವಿಲಿಯನ್ ಸೇರಿಸಿದ್ರು. ಸ್ಮಿತ್, ಮತ್ತೆ ಜೋಫ್ರಾಗೆ 12ನೇ ಓವರ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ನೀಡಿದ್ರು. ಆ ಸಮಯದಲ್ಲಿ ಮನೀಷ್ ಪಾಂಡೆ ಮತ್ತು ವಿಜಯ್ ಶಂಕರ್ ಹೈದರಾಬಾದ್ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆರ್ಚರ್ ಅವರ ನಾಲ್ಕನೇ ಓವರ್‌ನಲ್ಲಿ ಶಂಕರ್ ಸತತ ಮೂರು ಬೌಂಡರಿ ಬಾರಿಸುವ ಮೂಲಕ ಮೇಲುಗೈ ಸಾಧಿಸಿದ್ರು.
"ನಾವು ಉತ್ತಮ ಆರಂಭ ಪಡೆದಿದ್ದೆವು. ಜೋಫ್ರಾ ಆರ್ಚರ್ ಆರಂಭದಲ್ಲೇ ಎರಡು ದೊಡ್ಡ ವಿಕೆಟ್ ಪಡೆದರು. ಆದರ ಅದೇ ಒತ್ತಡ ಏರುವಲ್ಲಿ ವಿಫಲರಾದೆವು. ವಿಜಯ್ ಅತ್ಯಂತ ಜಾಣ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಫೋಟಕ ಆಟವಾಡಿದ ಮನೀಷ್ ಪಾಂಡೆ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು" ಎಂದಿದ್ದಾರೆ.
![Steve Smith](https://etvbharatimages.akamaized.net/etvbharat/prod-images/1597487603_smith_2010newsroom_1603156222_115.jpg)
"ಸೋಲಿನ ಬಗ್ಗೆ ನಾನು ಯಾರನ್ನೂ ಬೊಟ್ಟು ಮಾಡಿ ತೋರಿಸುವುದಿಲ್ಲ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ, ಉತ್ತಮ ತಂಡವಿದೆ. ಅಂಕಪಟ್ಟಿಯ ಲೆಕ್ಕಾಚಾರ ಹೇಗೆ? ಏನು? ಎಂಬುದು ನಮಗೆ ತಿಳಿದಿಲ್ಲ. ಆದರೆ ಪಂದ್ಯಗಳನ್ನು ಗೆಲ್ಲುವುದಷ್ಟೇ ನಮ್ಮ ಕೆಲಸ" ಎಂದಿದ್ದಾರೆ.