ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಿಕ್ಸರ್‌ಗಳ ಸುರಿಮಳೆಗೈದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್, ಪವರ್ ಹಿಟ್ಟಿಂಗ್ಗಾಗಿ ಸಾಕಷ್ಟು ಶ್ರಮ ವಹಿಸಿದ್ದಾಗಿ ಹೇಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ 9 ಸಿಕ್ಸರ್ ಸಿಡಿಸಿದ ಯುವ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 74 ರನ್ ಗಳಿಸಿ ರಾಜಸ್ಥಾನ ತಂಡ ಬಿಗ್ ಸ್ಕೋರ್ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
- ' class='align-text-top noRightClick twitterSection' data=''>
ಪಂದ್ಯ ಮುಗಿದ ನಂತರ ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಸ್ಯಾಮ್ಸನ್, ನನ್ನ ಫಿಟ್‌ನೆಸ್, ಡಯಟ್ ಮತ್ತು ತರಬೇತಿ ಮತ್ತು ನನ್ನ ಸಾಮರ್ಥ್ಯದ ಮೇಲೆ ನಾನು ಶ್ರಮಿಸುತ್ತಿದ್ದೇನೆ. ಏಕೆಂದರೆ ನನ್ನ ಆಟವು ಪವರ್ ಹಿಟ್ಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಪೀಳಿಗೆಯಲ್ಲಿ ರೇಂಜ್-ಹಿಟ್ಟಿಂಗ್ ಆಟ ಬೇಕಾಗುತ್ತದೆ ಎಂದು ಭಾವಿಸುತ್ತೇನೆ. ನನಗೆ ಈ ವಿಷಯದಲ್ಲಿ ಕೆಲಸ ಮಾಡಲು ಸಮಯವಿತ್ತು. ಈ 5 ತಿಂಗಳಲ್ಲಿ ನಾನು ಆ ಸಾಮರ್ಥ್ಯವನ್ನು ಹೆಚ್ಚಿಸಿದ್ದೇನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
- ' class='align-text-top noRightClick twitterSection' data=''>
ಕೇವಲ ಬ್ಯಾಟಿಂಗ್ ಅಷ್ಟ್ರೇ ಅಲ್ಲದೆ ಕೀಪಿಂಗ್ನಲ್ಲೂ ಸಮ್ಸನ್ ಕಮಾಲ್ ಮಾಡಿದ್ರು. ಎರಡು ಅದ್ಭುತ ಕ್ಯಾಚ್ ಪಡೆಯುವುದಲ್ಲದೆ, ಇಬ್ಬರನ್ನು ಸ್ಟಂಪ್ ಔಟ್ ಮಾಡಿ ಪೆವಿಲಿಯನ್ ಸೇರಿಸಿದ್ರು.
ರಾಜಸ್ಥಾನ ತಂಡದಲ್ಲಿ ಉತ್ತಪ್ಪ ಮತ್ತು ಬಟ್ಲರ್ ಅವರಂತಹ ಇಬ್ಬರು ವಿಕೆಟ್ ಕೀಪರ್ಗಳಿದ್ದಾರೆ. ಅವರ ಬಗ್ಗೆ ಮಾತನಾಡಿದ ಸ್ಯಾಮ್ಸನ್, ಪ್ರತಿಯೊಬ್ಬರೂ ವಿಕೆಟ್‌ಗಳನ್ನು ಉಳಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾರೂ ಔಟಾಗಲು ಇಷ್ಟಪಡುವುದಿಲ್ಲ. ಆದರೆ ಇದು ತರಬೇತುದಾರನಿಗೆ ಬಿಟ್ಟದ್ದು. ಅಭಿಮಾನಿಗಳ ಮುಖದಲ್ಲಿ ಮಂದಹಾಸ ತರಲು ಇಷ್ಟಪಡುತ್ತೇವೆ ಮತ್ತು ಅದನ್ನು ಮುಂದುವರೆಸುತ್ತೇವೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.