ಹೈದರಾಬಾದ್: ಲೇಟ್ ಆದ್ರೂ ಲೆಟೆಸ್ಟ್ ಎನ್ನುವಂತೆ ಐಪಿಎಲ್ ಕಿಕ್ ಶುರುವಾಗಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಮತ್ತು ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ತಂಡಗಳು ಬಲಿಷ್ಠ ಆಟಗಾರರನ್ನು ಹೊಂದಿದ್ದು, ಉಭಯ ತಂಡಗಳ ಮುಖಾಮುಖಿ ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಕೊಡಲಿದೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮನರಂಜಿಸುವ ತಂಡವಾಗಿರುವ ರಾಯಲ್ ಚಾಲಂಜರ್ಸ್, ಟ್ರೋಪಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾಗಿಂತ ಹೆಚ್ಚು ಚೋಕರ್ಸ್ ಆಗಿದೆ. ಒಂದಲ್ಲ, ಎರಡಲ್ಲ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿಗೆ ಮುತ್ತಿಡುವ ಸೌಭಾಗ್ಯ ಮಾತ್ರ ಇನ್ನೂ ಬೆಂಗಳೂರಿಗೆ ಸಿಕ್ಕಿಲ್ಲ. ಆದರೆ ಈ ಬಾರಿ ಉತ್ತಮ ತಂಡ ಸಂಯೋಜನೆಯಿಂದ ಯುದ್ಧಕ್ಕೆ ಸಿದ್ಧವಾಗಿರುವ ಕೊಹ್ಲಿ ಪಡೆ, ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.
-
Good morning, 12th Man Army. ☀️
— Royal Challengers Bangalore (@RCBTweets) September 21, 2020 " class="align-text-top noRightClick twitterSection" data="
Is this the best Monday ever or what! Kicking off the week with our 1st game of the #Dream11IPL against SRH! 🤩
Yuzi Chahal and RCB are Match Ready! 👊🏻#PlayBold #IPL2020 #WeAreChallengers #Dream11IPL pic.twitter.com/YG1DSDDBNL
">Good morning, 12th Man Army. ☀️
— Royal Challengers Bangalore (@RCBTweets) September 21, 2020
Is this the best Monday ever or what! Kicking off the week with our 1st game of the #Dream11IPL against SRH! 🤩
Yuzi Chahal and RCB are Match Ready! 👊🏻#PlayBold #IPL2020 #WeAreChallengers #Dream11IPL pic.twitter.com/YG1DSDDBNLGood morning, 12th Man Army. ☀️
— Royal Challengers Bangalore (@RCBTweets) September 21, 2020
Is this the best Monday ever or what! Kicking off the week with our 1st game of the #Dream11IPL against SRH! 🤩
Yuzi Chahal and RCB are Match Ready! 👊🏻#PlayBold #IPL2020 #WeAreChallengers #Dream11IPL pic.twitter.com/YG1DSDDBNL
ಕಳೆದ ಮೂರು ಆವೃತ್ತಿಗಳಲ್ಲಿ ಆರ್ಸಿಬಿಗೆ ಕಾಡಿದ್ದು ಆರಂಭಿಕರ ಕೊರತೆ ಮತ್ತು ಡೆತ್ ಬೌಲರ್ಗಳು. ಇದೀಗ ಆ ಸಮಸ್ಯೆ ಫಿಂಚ್ ಆಗಮನದೊಂದಿಗೆ ದೂರವಾಗಿದೆ. ಜೊತೆಗೆ ಕರ್ನಾಟಕದ ಯಂಗ್ ಟೈಗರ್ ದೇವದತ್ ಪಡಿಕ್ಕಲ್ ಕೆಪಿಎಲ್, ಐಪಿಎಲ್ನಲ್ಲಿ ತಮ್ಮ ಪರಾಕ್ರಮ ತೋರಲು ಕಾಯುತ್ತಿದ್ದಾರೆ. ಜೊತೆಗೆ ಈ ಬಾರಿ ಕ್ರಿಸ್ ಮೋರಿಸ್, ಆ್ಯಡಂ ಜಂಪಾ ಕೂಡ ಆರ್ಸಿಬಿ ಬಳಗ ಸೇರಿಕೊಂಡಿರುವುದರಿಂದ ತಂಡದ ಬೌಲಿಂಗ್ ಬಲ ಹೆಚ್ಚಿದೆ.
ಇಲ್ಲಿಯವರೆಗೆ ಹೈದರಾಬಾದ್ ಮತ್ತು ಆರ್ಸಿಬಿ ತಂಡಗಳು 13 ಬಾರಿ ಮುಖಾಮುಖಿಯಾಗಿದ್ದು, 7 ರಲ್ಲಿ ಸನ್ ರೈಸರ್ ತಂಡ ಗೆಲುವು ಸಾಧಿಸಿದ್ರೆ, 6 ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿವೆ.
ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿದ್ದು, ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಕಾದಾಟ ನಡೆಸಲಿವೆ.