ಶಾರ್ಜಾ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಆರೆಂಜ್ ಕ್ಯಾಪ್ ಮೇಲೆ ಹಿಡಿತ ಸಾಧಿಸಿದ್ದು, ಅದೇ ತಂಡದ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.

ರಾಹುಲ್ ಇದುವರೆಗೆ ಮೂರು ಪಂದ್ಯಗಳಲ್ಲಿ 222 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಮತ್ತೊಂದು ಅರ್ಧಶತಕ ಸೇರಿದ್ದು, ಪ್ರಮುಖ ರನ್-ಸ್ಕೋರರ್‌ಗಳ ಪಟ್ಟಿಯಲ್ಲಿ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. ಅದೇ ತಂಡದ ಮಯಾಂಕ್ ಅಗರ್ವಾಲ್ (ಮೂರು ಪಂದ್ಯಗಳಲ್ಲಿ 221 ರನ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ನ ಫಾಫ್ ಡು ಪ್ಲೆಸಿಸ್ (ಮೂರು ಪಂದ್ಯಗಳಲ್ಲಿ 173 ರನ್) ನಂತರದ ಸ್ಥಾನಗಳಲ್ಲಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಶಮಿ ಮೂರು ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿ ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಬಾಡಾ (ಎರಡು ಪಂದ್ಯಗಳಲ್ಲಿ ಐದು ವಿಕೆಟ್‌ಗಳು) ಮತ್ತು ಸಿಎಸ್‌ಕೆ ವೇಗಿ ಸ್ಯಾಮ್ ಕುರ್ರನ್ (ಮೂರು ಪಂದ್ಯಗಳಲ್ಲಿ ಐದು ವಿಕೆಟ್‌ಗಳು) ಮುಂದಿನ ಎರಡು ಅಗ್ರ ಸ್ಥಾನಗಳಲ್ಲಿದ್ದಾರೆ.

ಈ ರನ್ನಿಂಗ್ ಕ್ಯಾಪ್‌ಗಳನ್ನು ಅಗ್ರ ರನ್-ಸ್ಕೋರರ್ ಮತ್ತು ಹೆಚ್ಚು ವಿಕೆಟ್ ಪಡೆದವರಿಗೆ ನೀಡಲಾಗುತ್ತದೆ ಮತ್ತು ಪಂದ್ಯಾವಳಿಯ ಅವಧಿಯುದ್ದಕ್ಕೂ ಕ್ಯಾಪ್ ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತಿರುತ್ತದೆ.
