ETV Bharat / sports

ಕೊನೆ ಪಂದ್ಯ ಸೋತ್ರೂ ಪ್ಲೇ-ಆಫ್​ಗೆ ಲಗ್ಗೆ ಹಾಕಿದ ವಿರಾಟ್​ ಪಡೆ... ನಿಟ್ಟುಸಿರು ಬಿಟ್ಟ ಆರ್​ಸಿಬಿ ಫ್ಯಾನ್ಸ್​!

author img

By

Published : Nov 2, 2020, 11:15 PM IST

Updated : Nov 3, 2020, 6:59 AM IST

ಡೆಲ್ಲಿ ಎದುರು ಸೋತರೂ ಆರ್​ಸಿಬಿ ಪ್ಲೇ-ಆಫ್​ಗೆ ಲಗ್ಗೆ ಹಾಕಿದೆ. ನಂ.3 ರಂದು ನಡೆಯಲಿರುವ ಪಂದ್ಯದಲ್ಲಿ ಸನ್​ರೈಸರ್ಸ್ ಸೋಲುಂಡರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಲಿದೆ.

rcb qualified for playoffs 2020
rcb qualified for playoffs 2020

ಅಬುಧಾಬಿ: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 6 ವಿಕೆಟ್​ಗಳ ಸೋಲು ಕಂಡಿದ್ದು, ಇದರ ಹೊರತಾಗಿ ಕೂಡ ಕೊಹ್ಲಿ ಪಡೆ ಪ್ಲೇ-ಆಫ್​ಗೆ ಲಗ್ಗೆ ಹಾಕಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಪಡಿಕ್ಕಲ್​ 50, ಎಬಿಡಿ 35 ರನ್​ಗಳ ನೆರವಿನಿಂದ 152 ರನ್​ ಗಳಿಕೆ ಮಾಡಿ, ಎದುರಾಳಿ ತಂಡಕ್ಕೆ 153 ರನ್ ​ಗಳ ಟಾರ್ಗೆಟ್​ ನೀಡಿತು.

ipl points table
ಐಪಿಎಲ್ ಪಾಯಿಂಟ್ಸ್ ಟೇಬಲ್

ಟಾರ್ಗೆಟ್​ ಬೆನ್ನತ್ತಿದ್ದ ಡೆಲ್ಲಿ ಆರಂಭಿಕ ಆಘಾತದ ನಡುವೆ ಕೂಡ ಶಿಖರ್​ ಧವನ್ ಹಾಗೂ ರಹಾನೆ ಶತಕದಾಟ ಆಡಿ ತಂಡಕ್ಕೆ ಜಯ ಸುಲಭಗೊಳಿಸಿದರು. ಧವನ್​(54), ರಹಾನೆ(60)ರನ್​ಗಳಿಕೆ ಮಾಡಿದರು. ಬಳಿಕ ಬಂದ ಅಯ್ಯರ್​(7), ಪಂತ್​(7), ಅಜೇಯ ಹಾಗೂ ಸ್ಟೋನಿಸ್​​​(10) ಅಜೇಯ ರನ್​ಗಳಿಕೆ ಮಾಡಿ ಗೆಲುವಿನ ದಡ ಸೇರಿದರು. ಇನ್ನು ಡೆಲ್ಲಿ ತಂಡ 19 ಓವರ್​ಗಳಲ್ಲಿ ಗೆಲುವು ದಾಖಲು ಮಾಡಿದ್ದರಿಂದ ಆರ್​ಸಿಬಿ ಪ್ಲೇ-ಆಫ್ ಹಂತಕ್ಕೆ ಲಗ್ಗೆ ಹಾಕಿದೆ.

ನಾಳೆ ಹೈದರಾಬಾದ್​ ಹಾಗೂ ಮುಂಬೈ ತಂಡಗಳ ನಡುವೆ ಐಪಿಎಲ್​ನ ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಒಂದು ವೇಳೆ ಹೈದರಾಬಾದ್​ ಗೆಲುವು ದಾಖಲು ಮಾಡಿದರೆ ಮೂರನೇ ತಂಡವಾಗಿ ಪ್ಲೇ-ಆಫ್​ಗೆ ಲಗ್ಗೆ ಹಾಕಲಿದ್ದು, ಮುಂಬೈ ಈಗಾಗಲೇ ಮುಂದಿನ ಹಂತಕ್ಕೆ ಎಂಟ್ರಿ ಕೊಟ್ಟಿದೆ.

ಇನ್ನು ನಾಳೆಯ (ನ.3) ಪಂದ್ಯದಲ್ಲಿ ಸನ್​ರೈಸರ್ಸ್​ ಸೋಲು ಕಂಡರೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಮುಂದಿನ ಹಂತ ಪ್ರವೇಶಿಸಲಿದೆ.

Last Updated : Nov 3, 2020, 6:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.