ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಎರಡು ವಿಕೆಟ್ ಕಬಳಿಸಿದ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ರಾಹುಲ್ ಚಹಾರ್, ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದ್ದು ಆಟದ ವೇಳೆ ನನಗೆ ವಿಶ್ವಾಸ ಮೂಡಿಸಿತು ಎಂದಿದ್ದಾರೆ.
ಅಬುಧಾಬಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ 48 ರನ್‌ಗಳಿಂದ ಪಂಜಾಬ್ ತಂಡವನ್ನು ಸೋಲಿಸಿದ್ದು, ಮುಂಬೈ ಪರ 4 ಓವರ್ ಬೌಲಿಂಗ್ ಮಾಡಿದ ರಾಹುಲ್ ಚಹಾರ್ 26 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದ್ದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಹುಲ್ ಚಹಾರ್, ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿತ್ತು. ಇದರಿಂದ ನಾನು ಆತ್ಮವಿಶ್ವಾಸವನ್ನು ಪಡೆದುಕೊಂಡೆ. ಕಡಿಮೆ ರನ್ ನೀಡಿ ನಂತರ ವಿಕೆಟ್ ಮೇಲೆ ದಾಳಿ ಮಾಡುವ ಮೂಲಕ ಅವರ ಮೇಲೆ ಒತ್ತಡ ಹೇರುವುದು ನನ್ನ ಯೋಜನೆಯಾಗಿತ್ತು. ನಾನು ವಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದೆ ಎಂದು ಹೇಳಿದ್ದಾರೆ.
![itch was helping spinners, says Rahul Chahar](https://etvbharatimages.akamaized.net/etvbharat/prod-images/9017721_rahul1_0210newsroom_1601614382_179.jpg)
ಪೊಲಾರ್ಡ್ ಮತ್ತು ಹಾರ್ದಿಕ್ ಅವರ ಬಿಗ್ ಹಿಟ್ಟಿಂಗ್ ಕೌಶಲ್ಯದ ಬಗ್ಗೆ ನಮಗೆ ಸಾಕಷ್ಟು ನಂಬಿಕೆ ಇದೆ. ಆರ್‌ಸಿಬಿ ವಿರುದ್ಧದ ಕೊನೆಯ ಪಂದ್ಯದಲ್ಲಿ ಪೊಲಾರ್ಡ್ ನಮ್ಮನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದಿದ್ದರು. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಸ್ಪಿನ್ನರ್ ಹೇಳಿದ್ದಾರೆ.
ಚಹಾರ್ ಅವರಲ್ಲದೆ ಜೇಮ್ಸ್ ಪ್ಯಾಟಿನ್ಸನ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಮತ್ತು ಕ್ರುನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.