ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸಲಿವೆ.
ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆಡಿದ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೋತಿದ್ದರೆ, 2 ಪಂದ್ಯದಲ್ಲಿ ಜಯಗಳಿಸಿದೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್ಕೆ ಕಳೆದ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
![Kolkata Knight Riders vs Chennai Super Kings](https://etvbharatimages.akamaized.net/etvbharat/prod-images/9080379_thum.jpg)
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ನದ್ದೇ ತಲೆ ನೋವಾಗಿತ್ತು. ಡು ಪ್ಲೆಸಿಸ್ ಮತ್ತು ಧೋನಿ ಹೊರತುಪಡಿಸಿ ಯಾವೊಬ್ಬ ಆಟಗಾರರರೂ ಉತ್ತಮ ಪ್ರದರ್ಶನ ತೋರಿರಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ವಿಕೆಟ್ ನಷ್ಟವಿಲ್ಲದೆ 179 ರನ್ ಚೇಸ್ ಮಾಡಿ ಭರ್ಜರಿ ಜಯಗಳಿಸಿದೆ. ಆರಂಭದಿಂದಲೂ ವೈಫಲ್ಯ ಅನುಭವಿಸಿದ್ದ ವ್ಯಾಟ್ಸನ್ ಲಯ ಕಂಡುಕೊಂಡಿದ್ದು ಚೆನ್ನೈನ ಬಲ ಹೆಚ್ಚಿಸಿದೆ.
ಬೌಲಿಂಗ್ನಲ್ಲಿ ಸಿಎಸ್ಕೆ ಆಟಗಾರರು ಸುಧಾರಿಸಬೇಕಿದೆ. ಜಡೇಜಾ, ಪೀಯೂಷ್ ಚಾವ್ಲಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ವಿಕೆಟ್ ಪಡೆದರೂ ಕೊಂಚ ದುಬಾರಿಯಾಗುತ್ತಿದ್ದಾರೆ. ಕಳೆದ 2 ಪಂದ್ಯಗಳಿಂದ ಬ್ರಾವೊ ಬೌಲಿಂಗ್ನಲ್ಲಿ ಕಮಾಲ್ ಮಾಡುತ್ತಿಲ್ಲ.
ಕೆಕೆಆರ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಮಾರ್ಗನ್ ಲಯಕ್ಕೆ ಮರಳಿದ್ದು ಕಳೆದ 2 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನಿತೀಶ್ ರಾಣಾ ಕೂಡ ಉತ್ತಮ ಲಯದಲ್ಲಿದ್ದಾರೆ. ಕಾರ್ತಿಕ್ ಜೊತೆಗೆ ಸ್ಫೋಟಕ ಆಟಗಾರರಾದ ರಸೆಲ್ ಅವರಂತಹ ಆಲ್ರೌಂಡರ್ ಇರುವುದರಿಂದ ಬಲಿಷ್ಠ ತಂಡವಾಗಿದೆ. ಆದರೆ ನರೈನ್ ಬ್ಯಾಟ್ ಈ ಬಾರಿ ಹೆಚ್ಚು ಸದ್ದು ಮಾಡುತ್ತಿಲ್ಲ, ಇದು ಕೆಕೆಆರ್ಗೆ ಕೊಂಚ ಹಿನ್ನಡೆಯಾಗಿದೆ.
![Kolkata Knight Riders vs Chennai Super Kings](https://etvbharatimages.akamaized.net/etvbharat/prod-images/9080379_thu.jpg)
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕಮಾಲ್ ಮಾಡಿದ್ದ ಕೆಕೆಆರ್ ಬೌಲರ್ಸ್ ಕಳೆದ ಪಂದ್ಯದಲ್ಲಿ ಮಂಕಾಗಿದ್ದರು. ರಸೆಲ್ ಹೊರತುಪಡಿಸಿದ ಪ್ರತಿಯೊಬ್ಬರೂ ಓವರ್ಗೆ 11 ರಿಂದ 12 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.
![Kolkata Knight Riders vs Chennai Super Kings](https://etvbharatimages.akamaized.net/etvbharat/prod-images/9080379_thumb.jpg)
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಕೆಕೆಆರ್ ಜಯದ ನಗೆ ಬೀರಿದ್ರೆ, 14 ಪಂದ್ಯಗಳಲ್ಲಿ ಸಿಎಸ್ಕೆ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.