ETV Bharat / sports

ಮುಂಬೈ ತಂಡದಿಂದ ಭಾರತಕ್ಕೆ ಆಡುವ ಇಬ್ಬರು ಪ್ರತಿಭೆಗಳ ಹೆಸರನ್ನು ಬಹಿರಂಗಪಡಿಸಿದ ಇಂಗ್ಲೆಂಡ್​ ಕ್ರಿಕೆಟರ್​​ - Indian Premier League final

ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಡಾಮಿನಿಕ್ ಕಾರ್ಕ್ ಭಾರತ ತಂಡಕ್ಕೆ ಆಯ್ಕೆ ಆಗುವ ಪ್ರತಿಭೆಯುಳ್ಳ ಇಬ್ಬರು ಮುಂಬೈ ಇಂಡಿಯನ್ಸ್ ಆಟಗಾರರನ್ನು ಹೆಸರಿಸಿದ್ದಾರೆ. ಈ ಸಾಲಿನ ಐಪಿಎಲ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ಅವರು, ಕೆಲವು ಯುವ ಆಟಗಾರರ ಪ್ರತಿಭೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IPL 2020: Dominic Cork named two mi players who can play for india
ಸಂಗ್ರಹ ಚಿತ್ರ
author img

By

Published : Nov 10, 2020, 11:34 PM IST

Updated : Nov 10, 2020, 11:43 PM IST

ದುಬೈ: ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಡಾಮಿನಿಕ್ ಕಾರ್ಕ್ ಯುವ ಕ್ರಿಕೆಟ್​ ಆಟಗಾರರ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಭಾರತದ ಹಲವು ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಐಪಿಎಲ್‌ ಟೂರ್ನಿಗಳನ್ನು ಗಮನಿಸಿದ ಕಾರ್ಕ್, ಭಾರತ ತಂಡಕ್ಕೆ ಆಯ್ಕೆ ಆಗುವ ಪ್ರತಿಭೆಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆ ಪ್ರತಿಭೆಗಳು ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ ಅನ್ನೋದನ್ನು ಅವರು ಒತ್ತಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರಾಹುಲ್ ಚಾಹರ್ ಹಾಗೂ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಆಯ್ಕೆ ಆಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅವರಲ್ಲಿ ಅಷ್ಟು ಪ್ರತಿಭೆ ಇದೆ. ಇವರಿಬ್ಬರೂ ಖಂಡಿತ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದಿದ್ದಾರೆ.

ಆಸ್ಟ್ರೇಲಿಯಾ ಟೂರ್‌ಗೆ ಸೂರ್ಯಕುಮಾರ್ ಯಾದವ್ ಕೊನೆಯ ಕ್ಷಣದಲ್ಲಿ ಆಯ್ಕೆ ಆಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಡಾಮಿನಿಕ್ ಕಾರ್ಕ್, ಮುಂದೊಂದು ದಿನ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ 2018 ರಿಂದ ಮುಂಬೈ ಪರ ಆಡುತ್ತಿದ್ದು, ಅದಕ್ಕೂ ಮುನ್ನಾ ಪುಣೆ ರೈಸರ್ಸ್ ಪರವಾಗಿ ಮೂರು ಐಪಿಎಲ್ ಪಂದ್ಯಗಳನ್ನಾಡಿದ್ದರು. ಅಂಡರ್ 19 ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಹುಲ್ ಚಾಹರ್‌, ಭಾರತ ತಂಡಕ್ಕೆ ಆಡುವ ಸಾಮರ್ಥ್ಯವಿದೆ ಎಂದಿದ್ದಾರೆ.

Last Updated : Nov 10, 2020, 11:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.