ಶಾರ್ಜಾ: ಇಂದು ಸಂಜೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ಲೀಗ್ನ 2ನೇ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್, ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ 8 ಪಂದ್ಯಗಳ ಪೈಕಿ ಆರರಲ್ಲಿ ಜಯ ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಸಿಎಸ್ಕೆ ತಂಡ 8ರಲ್ಲಿ 3 ಪಂದ್ಯ ಜಯಿಸಿದ್ದು, 5ರಲ್ಲಿ ಸೋಲು ಕಂಡಿದೆ.
ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ತಂಡ ಕಳೆದ ಪಂದ್ಯಲ್ಲಿ ಹೈದರಾಬಾದ್ ತಂಡವನ್ನು ಮಣಿಸಿ ಗೆಲುವಿನ ಟ್ರ್ಯಾಕ್ ಹತ್ತಿದೆ. ಹಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಸಿಎಸ್ಕೆ ಆಟಗಾರರು, ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಸ್ಯಾಮ್ ಕರ್ರನ್ ಭರವಸೆ ಮೂಡಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಸಿಎಸ್ಕೆ ಬೌಲರ್ಸ್ ಉತ್ತಮವಾಗಿ ಸ್ಪೆಲ್ ಮಾಡಿದ್ರು. ಶಾರ್ದೂಲ್ ಠಾಕೂರ್, ಕರಣ ಶರ್ಮಾ, ಸ್ಯಾಮ್ ಕರ್ರನ್, ಜಡೇಜಾ, ಬ್ರಾವೋ ಉತ್ತಮ ಪ್ರದರ್ಶನ ನೀಡಿ ಕಡಿಮೆ ರನ್ಗಳಿಗೆ ಹೈದರಾಬಾದ್ ಆಟಗಾರರನ್ನು ಕಟ್ಟಿಹಾಕಿದ್ರು.
ಡೆಲ್ಲಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಪೃಥ್ವಿ ಶಾ, ಶ್ರೇಯಸ್ ಐಯ್ಯರ್, ಶಿಖರ್ ಧವನ್, ಸ್ಟೊಯ್ನೀಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ತೋರಿದ್ದಾರೆ. ಬೌಲಿಂಗ್ ವಿಭಾಗದಲ್ಲೂ ಕ್ಯಾಪಿಟಲ್ಸ್ ಮೇಲುಗೈ ಹೊಂದಿದೆ. ಕಗಿಸೊ ರಬಾಡ, ಎನ್ರಿಚ್ ನೋರ್ಟ್ಜೆ, ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಆರ್.ಅಶ್ವಿನ್, ಸ್ಟೋಯ್ನಿಸ್ ಡೀಸೆಂಟ್ ಸ್ಪೆಲ್ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಯುವ ಬೌಲರ್ ತುಷಾರ್ ದೇಶಪಾಂಡೆ ಕೂಡ ಮಿಂಚಿದ್ದರು.
ಉಭಯ ತಂಡಗಳು ಇಲ್ಲಿಯವರೆಗೆ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 15 ಪಂದ್ಯಗಳಲ್ಲಿ ಸಿಎಸ್ಕೆ ಗೆಲುವು ಸಾಧಿಸಿದ್ರೆ, 7 ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಸಾಧಿಸಿದೆ.