ದುಬೈ: ರಾಜಸ್ಥಾನ ತಂಡದ ಅಲ್ರೌಂಡರ್ ಬೆನ್ ಸ್ಟೋಕ್ಸ್ ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವಲ್ಲಿ ವಿಫಲವಾಗಿದ್ದು, 2020ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಸಿಕ್ಸರ್ ಸಿಡಿಸುವ ಅವರ ಹೋರಾಟ ಗುರುವಾರವೂ ಮುಂದುವರೆಯಿತು.
ಬಿಗ್ ಹಿಟ್‌ಗಳಿಗೆ ಹೆಸರುವಾಸಿಯಾದ ಆಲ್‌ರೌಂಡರ್, ಕಳೆದ ಐದು ಪಂದ್ಯಗಳಲ್ಲಿ103 ಎಸೆತಗಳನ್ನು ಎದುರಿಸಿದ್ದು, 22 ರನ್‌ಗಳ ಸರಾಸರಿಯಲ್ಲಿ 110 ರನ್ ಗಳಿಸಿದ್ದಾರೆ. ಒಟ್ಟು 14 ಬೌಂಡರಿಗಳನ್ನು ಬಾರಿಸಿದ್ದು, ಇನ್ನೂ ಕೂಡ ಒಂದೂ ಸಿಕ್ಸರ್ ಸಿಡಿಸಿಲ್ಲ.
ತಂದೆಯ ಅನಾರೋಗ್ಯದ ಕಾರಣ ಸ್ಟೋಕ್ಸ್ ತಡವಾಗಿ ಐಪಿಎಲ್ ಟೂರ್ನಿಗೆ ಆಗಮಿಸಿದ್ರು. ಗುರುವಾರ ಕೆಲವು ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಿದರೂ ಸಿಕ್ಸರ್ ಸಿಡಿಸುವಲ್ಲಿ ವಿಫಲರಾದ್ರು.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಸ್ಟೋಕ್ಸ್, ಈ ಬಾರಿಯ ಐಪಿಎಲ್ನಲ್ಲಿ ಟೂರ್ನಿಯಲ್ಲಿ ಅವರು ಗಳಿಸಿರುವ ವೈಯಕ್ತಿಕ ಗರಿಷ್ಠ ಸ್ಕೋರ್ 41 ರನ್. ಅಲ್ಲದೆ ಕೇವಲ 6 ಓವರ್ ಬೌಲಿಂಗ್ ಮಾಡಿದ್ದಾರೆ.
ರಾಜಸ್ಥಾನ ತಂಡ ಇಂಗ್ಲೆಂಡ್ ಆಲ್‌ರೌಂಡರ್ ಆಗಮನದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಸ್ಟೋಕ್ಸ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರದಿರುವುದು ರಾಯಲ್ಸ್ ತಂಡಕ್ಕೆ ಹಿನ್ನಡೆಯಾಗಿದೆ.