ETV Bharat / sports

ಸೂಪರ್ ಓವರ್​ನಲ್ಲಿ ವಾರ್ನರ್ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು: ಫರ್ಗ್ಯುಸನ್

author img

By

Published : Oct 19, 2020, 12:25 PM IST

ಸೂಪರ್ ಓವರ್​ನ ಮೊದಲ ಎಸೆತದಲ್ಲೇ ವಾರ್ನರ್ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು ಎಂದು ಕೆಕೆಆರ್ ತಂಡದ ವೇಗಿ ಲೂಕಿ ಫರ್ಗ್ಯುಸನ್ ಹೇಳಿದ್ದಾರೆ.

Lockie Ferguson
ಲೂಕಿ ಫರ್ಗ್ಯುಸನ್

ಅಬುಧಾಬಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಡಿದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಲೂಕಿ ಫರ್ಗ್ಯುಸನ್, ಹೈದರಾಬಾದ್​ ವಿರುದ್ಧ ಕೆಕೆಆರ್​ ಗೆಲುವು ಸಾಧಿಸಲು ಪ್ರಮುಖ ಕಾರಣರಾಗಿದ್ದಾರೆ.

ನಾಲ್ಕು ಓವರ್​ ಬೌಲಿಂಗ್ ಮಾಡಿದ ಫರ್ಗ್ಯುಸನ್ ಕೇವಲ 15 ರನ್ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್ ಕಬಳಿಸಿದ್ರು. ಅಲ್ಲದೆ ಸೂಪರ್ ಓವರ್​ನ ಮೊದಲ ಎಸೆತದಲ್ಲೇ ಹೈದರಾಬಾದ್ ತಂಡದ ನಾಯಕ ಡೆವಿಡ್ ವಾರ್ನರ್​ ವಿಕೆಟ್ ಪಡೆದು ಕೆಕೆಆರ್​ ಗೆಲುವನ್ನು ಸುಲಭಗೊಳಿಸಿದ್ರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಸೂಪರ್ ಓವರ್​ನ ಮೊದಲ ಎಸೆತದಲ್ಲೇ ವಾರ್ನರ್ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು ಎಂದಿದ್ದಾರೆ.

Lockie Ferguson
ಲೂಕಿ ಫರ್ಗ್ಯುಸನ್

ಮಾರ್ಗಾನ್ ಶಾಂತತೆಯಿಂದ ನಮ್ಮೆಲ್ಲರನ್ನು ಮುನ್ನಡೆಸುತ್ತಿರುವ ರೀತಿ ಅದ್ಭುತವಾಗಿದೆ. ಖಂಡಿತವಾಗಿಯೂ ನನ್ನ ಯೋಜನೆ ಆಟದ ಉದ್ದಕ್ಕೂ ಕೆಲಸ ಮಾಡುತ್ತಿತ್ತು. ನಾವು ಈ ಗೆಲುವನ್ನು ಆನಂದಿಸುತ್ತೇವೆ ಎಂದಿದ್ದಾರೆ.

164 ರನ್​ಗಳ ಗುರಿ ಪಡೆದಿದ್ದ ಸನ್ ‌ರೈಸರ್ಸ್​ ಹೈದರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್​ ಗಳಿಸುವ ಮೂಲಕ ಟೈ ಸಾಧಿಸಿತು. ಆದರೆ ಹೈದರಾಬಾದ್​ ತಂಡ ಫರ್ಗ್ಯುಸನ್​ ಎಸೆದ ಸೂಪರ್ ಓವರ್​ನಲ್ಲಿ ಕೇವಲ 3 ಎಸೆತಗಳಲ್ಲಿ 2 ರನ್​ ಗಳಿಸಿ 2 ವಿಕೆಟ್ ಕಳೆದುಕೊಂಡಿತು. 3 ರನ್​ಗಳ ಗುರಿಯನ್ನು ಕೆಕೆಆರ್​ 4 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.