ETV Bharat / sports

ಅಮಿತ್ ಮಿಶ್ರಾ ಸ್ಥಾನಕ್ಕೆ ಕನ್ನಡಿಗ ಪ್ರವೀಣ್ ದುಬೆಗೆ ಮಣೆ ಹಾಕಿದ ಡೆಲ್ಲಿ - ಲೆಗ್ ಸ್ಪಿನ್ನರ್​ ಪ್ರವೀಣ್ ದುಬೆ

ಐಪಿಎಲ್​ನಿಂದ ಹೊರ ಬಿದ್ದಿರುವ ಲೆಗ್​ ಸ್ಪಿನ್ನರ್​ ಅಮಿತ್ ಮಿಶ್ರಾ ಸ್ಥಾನಕ್ಕೆ ಕರ್ನಾಟಕದ ಆಟಗಾರ ಪ್ರವೀಣ್ ದುಬೆಗೆ ಡೆಲ್ಲಿ ಕ್ಯಾಪಿಟಲ್ಸ್ ಮಣೆ ಹಾಕಿದೆ.

Delhi Capitals signs Pravin Dubey
ಪ್ರವೀಣ್ ದುಬೆ
author img

By

Published : Oct 19, 2020, 4:05 PM IST

ದುಬೈ: ಗಾಯದ ಕಾರಣದಿಂದಾಗಿ ಐಪಿಎಲ್​ನಿಂದ ಹೊರ ಬಿದ್ದಿರುವ ಡೆಲ್ಲಿ ತಂಡದ ಲೆಗ್​ ಸ್ಪಿನ್ನರ್​ ಅಮಿತ್ ಮಿಶ್ರಾ ಸ್ಥಾನಕ್ಕೆ ಕರ್ನಾಟಕದ ಆಟಗಾರ ಪ್ರವೀಣ್ ದುಬೆ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡಿಗ ಪ್ರವೀಣ್ ದುಬೆ ರಾಜ್ಯದ ಪರ 14 ದೇಶೀಯ ಟಿ-20 ಪಂದ್ಯಗಳನ್ನು ಆಡಿದ್ದು, 16 ವಿಕೆಟ್‌ಗಳನ್ನು ಹೊಂದಿದ್ದಾರೆ, 6.87 ಎಕಾನಮಿ ಹೊಂದಿದ್ದಾರೆ.

2020ರ ಅಕ್ಟೋಬರ್ 3 ರಂದು ಶಾರ್ಜಾದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಅಮಿತ್ ಮಿಶ್ರಾ ಅವರ ಬೆರಳಿಗೆ ಗಾಯವಾಗಿದ್ದರಿಂದ ಟೂರ್ನಿಯಿಂದ ಹೊರಬಿದ್ದಿದ್ದರು. 37 ವರ್ಷದ ಮಿಶ್ರಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ .

ಈ ಸೀಸನ್​ನಲ್ಲಿ ಮಿಶ್ರಾ ಮೂರು ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್​ ವಿರುದ್ಧ 14 ರನ್​ಗಳಿಗೆ 1 ವಿಕೆಟ್, ಹೈದರಾಬಾದ್ ವಿರುದ್ಧ 25 ರನ್​ಗಳಿಗೆ 2 ವಿಕೆಟ್ ಪಡೆದಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್​ ನಡೆಸಿ 23 ರನ್​ ಬಿಟ್ಟುಕೊಟ್ಟಿದ್ದ ಮಿಶ್ರಾ ವಿಕೆಟ್ ಪಡೆಯದಿದ್ರೂ, ಉತ್ತಮವಾಗಿ ಸ್ಪೆಲ್ ಮಾಡಿದ್ರು.

ಅಮಿತ್ ಮಿಶ್ರಾ ಐಪಿಎಲ್ ಟೂರ್ನಿಯಲ್ಲಿ 160 ವಿಕೆಟ್ ಪಡೆದಿದ್ದು, ಲಸಿತ್ ಮಲಿಂಗಾ(170 ವಿಕೆಟ್) ನಂತರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.